ಬಹುನಿರೀಕ್ಷಿತ ಬೆಂಝ್ ಸಿ ಕ್ಲಾಸ್ ನಾಳೆ ಬಿಡುಗಡೆ

Written By:

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಬಹುನಿರೀಕ್ಷಿತ ತನ್ನ ಸಿ ಕ್ಲಾಸ್ ಸೆಡಾನ್ ಕಾರನ್ನು ನಾಳೆ (2014 ನವೆಂಬರ್ 25)ಬಿಡುಗಡೆ ಮಾಡಲಿದೆ.

ಬೆಂಝ್‌ನ ಹೊಸ ಸೆಡಾನ್ ಕಾರು ಬೇಬಿ ಎಸ್ ಕ್ಲಾಸ್ ಎಂದು ಗುರುತಿಸಿಕೊಳ್ಳಲಿದೆ. ಇದರಲ್ಲಿ ತನ್ನ ಫ್ಲ್ಯಾಗ್‌ಶಿಪ್ ಮಾದರಿಯಿಂದ ಹಲವಾರು ವಿನ್ಯಾಸ ತಂತ್ರಗಾರಿಕೆಗಳನ್ನು ಆಮದು ಮಾಡಲಾಗಿದೆ.

To Follow DriveSpark On Facebook, Click The Like Button

ಈಗಾಗಲೇ 2014 ಸಿಬಿಟ್ (CeBIT)ಕಾರ್ಯಕ್ರಮದಲ್ಲಿ ಪ್ರದರ್ಶನ ಕಂಡಿರುವ ಮರ್ಸಿಡಿಸ್ ಬೆಂಝ್ ಮೊದಲ ಬಾರಿ ಉತ್ತರ ಅಮೆರಿಕ ಅಂತರಾಷ್ಟ್ರೀಯ ಶೋದಲ್ಲಿ ಪ್ರದರ್ಶನ ಕಂಡಿತ್ತು.

ಕಳೆದ ಡಿಸೆಂಬರ್‌ನಲ್ಲೇ ಜಾಗತಿಕ ಎಂಟ್ರಿ ಕೊಟ್ಟಿರುವ ಎಸ್ ಕ್ಲಾಸ್ ಭಾರತ ಮಾರುಕಟ್ಟೆಯನ್ನು ಇನ್ನಷ್ಟೇ ತಲುಪಬೇಕಾಗಿದೆ. ಪ್ರಸಕ್ತ ಸಾಲಿನಲ್ಲೇ ಈಗಾಗಲೇ ಅನೇಕ ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಪರಿಚಯಿಸಿರುವ ಬೆಂಝ್ ಪಾಲಿಗಿದು ವರ್ಷಾಂತ್ಯದ ಬಹುದೊಡ್ಡ ಲಾಂಚ್ ಆಗಿರಲಿದೆ.

ಹೊಸ ಕಾರಿನಲ್ಲಿ ಪ್ರಿ-ಸೇಫ್ ಬ್ರೇಕಿಂಗ್ ಸಿಸ್ಟಂ, ಅಟೆನ್ಷನ್ ಅಸಿಸ್ಟ್ ಸಿಸ್ಟಂ, ಏರ್‌ಮ್ಯಾಟಿಕ್ ಏರ್ ಸಸ್ಪೆಷನ್‌ಗಳಂತಹ ಅನೇಕ ವೈಶಿಷ್ಟ್ಯಗಳು ಇರುವ ಸಾಧ್ಯತೆಯಿದೆ. ಅಂತರಾಷ್ಟ್ರೀಯ ಮಾದರಿಯಲ್ಲಿ ಈ ಎಲ್ಲ ಸೌಲಭ್ಯಗಳಿರುವುದರಿಂದ ಭಾರತ ಮಾದರಿಯಲ್ಲೂ ಇದನ್ನು ನಿರೀಕ್ಷಿಸಬಹುದಾಗಿದೆ.

Mercedes Benz c class

ಹಾಗಿದ್ದರೂ ತಾಂತ್ರಿಕತೆಯ ಬಗ್ಗೆ ಯಾವುದೇ ಮಾಹಿತಿಗಳು ಬಂದಿಲ್ಲ. ಇದರಲ್ಲಿ 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಪಡೆದುಕೊಳ್ಳುವುದು ಖಚಿತವೆನಿಸಿದೆ. ಸದ್ಯಕ್ಕೆ ಪೆಟ್ರೋಲ್ ಮಾದರಿ ಮಾತ್ರ ಬಿಡುಗಡೆಯಾಗಲಿದ್ದು, ಬಳಿಕ ಡೀಸೆಲ್ ಮಾದರಿ ಇದನ್ನು ಹಿಂಬಾಲಿಸಲಿದೆ.

English summary
Mercedes-Benz India will be launching their new C-Class sedan in India tomorrow on 25th of November, 2014. Their new sedan is being dubbed as the Baby S-Class of their stable. It will borrow several design cues from their flagship model.
Story first published: Monday, November 24, 2014, 15:24 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark