ಟೊಯೊಟಾದಿಂದ ಮಧ್ಯಮ ಗಾತ್ರದ ಸೆಡಾನ್ ಭಾರತಕ್ಕೆ

Written By:

ಜಪಾನ್ ಮೂಲದ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಟೊಯೊಟಾ, ಭಾರತಕ್ಕೆ ಮಧ್ಯಮ ಗಾತ್ರದ ಸೆಡಾನ್ ಕಾರು ಪರಿಚಯಿಸುವ ಯೋಜನೆ ಹೊಂದಿದೆ.

ಪ್ರಸ್ತುತ ಈ ವಿಭಾಗದಲ್ಲಿ ಹೋಂಡಾ ಸಿಟಿ ಭಾರಿ ಸದ್ದು ಮಾಡುತ್ತಿದ್ದು, ಇನ್ನಷ್ಟೇ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಈ ವಿಭಾಗದ ಸ್ಪರ್ಧೆಗೆ ಇನ್ನಷ್ಟು ಚುರುಕು ಮುಟ್ಟಿಸಲಿದೆ.

To Follow DriveSpark On Facebook, Click The Like Button
Toyota

ಈ ಹಿನ್ನಲಿಯಲ್ಲಿ ಟೊಯೊಟಾದಿಂದ ಬಿಡುಗಡೆಯಾಗಲಿರುವ ಹೊಸ ಮಧ್ಯಮ ಗಾತ್ರದ ಸೆಡಾನ್ ಕಾರು ನಿಕಟ ಪೈಪೋಟಿ ಸೃಷ್ಟಿ ಮಾಡಲಿದೆ. ಆದರೆ ಸಂಸ್ಥೆಯು ಇನ್ನಷ್ಟೇ ಹೊಸ ಕಾರಿನ ಯೋಜನೆ ರೂಪಿಸಿಕೊಳ್ಳಬೇಕಾಗಿದ್ದು, 2016ರ ವೇಳೆಯಾಗುವಾಗ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

ಇಟಿಯೋಸ್ ತಲಹದಿಯಲ್ಲಿ ನಿರ್ಮಾಣವಾಗಲಿರುವ ಟೊಯೊಟಾ ಹೊಸ ಮಿಡ್ ಸೈಜ್ ಕಾರು 'ಇಟಿಯೋಸ್ ಕೋರ್' ಎಂದು ಕೋಡ್ ಹೆಸರು ಪಡೆದುಕೊಂಡಿದೆ.

ಮಾರುಕಟ್ಟೆ ಪರಿಸ್ಥಿತಿಯ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿರುವ ಟೊಯೊಟಾ ಸಂಸ್ಥೆಯು ಹೊಸ ಕಾರನ್ನು ಎಂಟ್ರಿ ಲೆವೆಲ್ ಇಟಿಯೋಸ್ ಮತ್ತು ಅತ್ಯುತ್ತಮ ಮಾರಾಟ ಹೊಂದಿರುವ ಕರೊಲ್ಲಾ ಆಲ್ಟೀಸ್ ನಡುವೆ ಗುರುತಿಸಿಕೊಳ್ಳಲಿದೆ.

ಭಾರತದ ಅಗ್ರಮಾನ್ಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಹೊರತಾಗಿಯೂ ಎಂಟ್ರಿ ಲೆವೆಲ್ ಇಟಿಯೋಸ್ ಸೆಡಾನ್ ಹಾಗೂ ಲಿವಾ ದೇಶಿಯ ಮಾರುಕಟ್ಟೆಯಲ್ಲಿ ನಿರೀಕ್ಷಿದಷ್ಟು ಯಶ ಸಾಧಿಸಿರಲಿಲ್ಲ. ಇನ್ನೊಂದೆಡೆ ಟೊಯೊಟಾ ಇನ್ನೋವಾ ಮತ್ತು ಫಾರ್ಚ್ಯುನರ್ ಪ್ರೀಮಿಯಂ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಕಾಯ್ದುಕೊಂಡಿದೆ.

English summary
The Japanese car maker Toyota is planning to introduce a mid size sedan for the Indian market to compete with Honda's best seller, the City.
Story first published: Wednesday, September 24, 2014, 7:17 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark