ಬರುತ್ತಿದೆ ಟಾಟಾ 'ಒಸ್ಪ್ರೆ' ಮಿನಿ ಎಸ್‌ಯುವಿ; ಎಕ್ಸ್ ಕ್ಲೂಸಿವ್ ಚಿತ್ರಗಳು

Written By:

ಭಾರತೀಯ ಮಾರುಕಟ್ಟೆಗೆ ಒಂದರ ಬಳಿಕ ಒಂದರಂತೆ ಅತ್ಯಾಧುನಿಕ ಕಾರುಗಳನ್ನು ಪರಿಚಯಿಸುತ್ತಲೇ ಇರುವ ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ಮಗದೊಂದು ಆಕರ್ಷಕ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

Also Read: ಟಾಟಾಗೆ ಹೊಸ ಹುರುಪು ತುಂಬಿದ ಹೆಕ್ಸಾ ಎಸ್‌ಯುವಿ ಮುಂದಕ್ಕೆ ಓದಿ

ವಾಹನೋದ್ಯಮ ನಿಕಟ ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಸಣ್ಣ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡಲು ಟಾಟಾ ಸಜ್ಜಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಈ ಬಹುನಿರೀಕ್ಷಿತ ಕಾರಿನ ರಹಸ್ಯ ಚಿತ್ರಗಳು ಲೀಕ್ ಆಗಿವೆ.

ಬರುತ್ತಿದೆ ಟಾಟಾ 'ಒಸ್ಪ್ರೆ' ಮಿನಿ ಎಸ್‌ಯುವಿ; ಎಕ್ಸ್ ಕ್ಲೂಸಿವ್ ಚಿತ್ರಗಳು

ಟಾಟಾ ಬಿಡುಗಡೆ ಮಾಡಲಿರುವ ಮಿನಿ ಎಸ್‌ಯುವಿ 'ಒಸ್ಪ್ರೆ' ಎಂಬ ಕಡಲು ಹಕ್ಕಿಯ ಕೋಡ್ ಪಡೆದುಕೊಂಡಿದೆ. ಟಾಟಾದ ಈ ಹಿಂದಿನ ಮಾದರಿಗಳನ್ನು ಗಮನಕ್ಕೆ ತೆಗೆದುಕೊಂಡಾಗ ಹಕ್ಕಿಗಳ ಹೆಸರಿನ ಜೊತೆಗಿನ ನಂಟು ಬಯಲಾಗುತ್ತದೆ. ಇದಕ್ಕೂ ಮೊದಲು ಫಾಲ್ಕನ್, ಪೆಲಿಕನ್, ಕೈಟ್ ಎಂಬ ಹೆಸರುಗಳನ್ನು ಟಾಟಾ ತನ್ನ ಬಹುನಿರೀಕ್ಷಿತ ಮಾದರಿಗಳಿಗೆ ಹೆಸರಿಸಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಬರುತ್ತಿದೆ ಟಾಟಾ 'ಒಸ್ಪ್ರೆ' ಮಿನಿ ಎಸ್‌ಯುವಿ; ಎಕ್ಸ್ ಕ್ಲೂಸಿವ್ ಚಿತ್ರಗಳು

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ನೆಕ್ಸನ್ ಅಥವಾ ಎಕ್ಸ್104 ಕಾನ್ಸೆಪ್ಟ್ ಕಾರೇ ಇದಾಗಿದೆ ಎಂಬುದನ್ನು ಆಟೋ ವಲಯದ ತಜ್ಞರು ಅಭಿಪ್ರಾಯಪಡುತ್ತಾರೆ.

ಬರುತ್ತಿದೆ ಟಾಟಾ 'ಒಸ್ಪ್ರೆ' ಮಿನಿ ಎಸ್‌ಯುವಿ; ಎಕ್ಸ್ ಕ್ಲೂಸಿವ್ ಚಿತ್ರಗಳು

ಇದು ನಾಲ್ಕು ಮೀಟರ್ ಪರಿಧಿಯೊಳಗೆ ಟಾಟಾ ಬಿಡುಗಡೆ ಮಾಡುತ್ತಿರುವ ಮೊದಲ ಎಸ್‌ಯುವಿ ಎಂಬ ಖ್ಯಾತಿಗೂ ಪಾತ್ರವಾಗಲಿದೆ. ಈ ಮೂಲಕ ಈ ವಿಭಾಗದಲ್ಲಿ ಗರಿಷ್ಟ ಮಾರಾಟವನ್ನು ಗುರಿಯಾಗಿರಿಸಿಕೊಳ್ಳಲಿದೆ.

ಚಿತ್ರ ಕೃಪೆ: AutoColumn

ಬರುತ್ತಿದೆ ಟಾಟಾ 'ಒಸ್ಪ್ರೆ' ಮಿನಿ ಎಸ್‌ಯುವಿ; ಎಕ್ಸ್ ಕ್ಲೂಸಿವ್ ಚಿತ್ರಗಳು

ನೂತನ ಕಾರು ಟೆಸ್ಟಿಂಗ್ ವೇಳೆ ಕ್ಯಾಮೆರಾದ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿದ್ದು, ಹೊರಮೈ ಜೊತೆಗೆ ಒಳಮೈ ಹೆಚ್ಚು ಪರಿಣಾಮಕಾರಿಯೆನಿಸಿಕೊಂಡಿದೆ.

ಚಿತ್ರ ಕೃಪೆ: AutoColumn

ಬರುತ್ತಿದೆ ಟಾಟಾ 'ಒಸ್ಪ್ರೆ' ಮಿನಿ ಎಸ್‌ಯುವಿ; ಎಕ್ಸ್ ಕ್ಲೂಸಿವ್ ಚಿತ್ರಗಳು

ಟಾಟಾ ಈ ಮೊದಲೇ ತಿಳಿಸಿರುವಂತೆಯೇ ನೆಕ್ಸನ್ ನಿರ್ಮಾಣ ಹಂತ ತಲುಪುವಾಗ ಕಾನ್ಸೆಪ್ಟ್ ಮಾದರಿಯಲ್ಲಿ ಗುರುತಿಸಿರುವುದಕ್ಕಿಂತಲೂ ವಿಭಿನ್ನವಾಗಿ ಗೋಚರಿಸಲಿದೆ.

ಬರುತ್ತಿದೆ ಟಾಟಾ 'ಒಸ್ಪ್ರೆ' ಮಿನಿ ಎಸ್‌ಯುವಿ; ಎಕ್ಸ್ ಕ್ಲೂಸಿವ್ ಚಿತ್ರಗಳು

ಟಾಟಾದ ಹೊಸ ವಿನ್ಯಾಸ ತಂತ್ರಗಾರಿಕೆಯನ್ನು ಇದರಲ್ಲಿ ಅನುಸರಿಸಲಾಗಿದ್ದು, ಕಾಂಪಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೆಚ್ಚು ಪ್ರಭಾವಿ ಎನಿಸಿಕೊಳ್ಳಲಿದೆ.

ಚಿತ್ರ ಕೃಪೆ: AutoColumn

ಬರುತ್ತಿದೆ ಟಾಟಾ 'ಒಸ್ಪ್ರೆ' ಮಿನಿ ಎಸ್‌ಯುವಿ; ಎಕ್ಸ್ ಕ್ಲೂಸಿವ್ ಚಿತ್ರಗಳು

ಎಲ್ಲ ಟಾಟಾ ಕಾರುಗಳಂತೆ ಇಲ್ಲೂ ಗರಿಷ್ಠ ಕ್ಯಾಬಿನ್ ಸ್ಥಳಾವಕಾಶಕ್ಕೆ ಆದ್ಯತೆ ಕೊಡಲಾಗಿದೆ. ವಿನ್ಯಾಸದ ವಿಚಾರಕ್ಕೆ ಬಂದಾಗ ಇದು ಇನ್ನಷ್ಟೇ ಬಿಡುಗಡೆಯಾಗಲಿರುವ ಝಿಕಾ ಹ್ಯಾಚ್ ಬ್ಯಾಕ್ ಕಾರಿಗೆ ಕೆಲವೊಂದು ಸಾಮತ್ಯೆಗಳನ್ನು ಪಡೆದುಕೊಂಡಿದೆ.

ಚಿತ್ರ ಕೃಪೆ: AutoColumn

ಬರುತ್ತಿದೆ ಟಾಟಾ 'ಒಸ್ಪ್ರೆ' ಮಿನಿ ಎಸ್‌ಯುವಿ; ಎಕ್ಸ್ ಕ್ಲೂಸಿವ್ ಚಿತ್ರಗಳು

ಝಿಕಾ ಜೊತೆಗೆ ತಳಹದಿಯನ್ನು ಹಂಚಿಕೊಳ್ಳಲಿರುವ ಒಸ್ಪ್ರೆ 1.2 ಲೀಟರ್ ಟರ್ಬೊ ರೆವೊಟ್ರಾನ್ ಪೆಟ್ರೋಲ್ ಜೊತೆಗೆ 1 ಲೀಟರ್ 3 ಸಿಲಿಂಡರ್ ಡೀಸೆಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ. ಇನ್ನು ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಆಯ್ಕೆಯಲ್ಲಿ ಬರುವ ಸಾಧ್ಯತೆ ಹೆಚ್ಚಾಗಿದೆ.

ಚಿತ್ರ ಕೃಪೆ: AutoColumn

ಬರುತ್ತಿದೆ ಟಾಟಾ 'ಒಸ್ಪ್ರೆ' ಮಿನಿ ಎಸ್‌ಯುವಿ; ಎಕ್ಸ್ ಕ್ಲೂಸಿವ್ ಚಿತ್ರಗಳು

ಅಂತಿಮವಾಗಿ ಬೆಲೆ ಇತ್ಯಾದಿ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಈ ಸಂಬಂಧ ಕ್ಷಣಕ್ಷಣದ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.

ಬರುತ್ತಿದೆ ಟಾಟಾ 'ಒಸ್ಪ್ರೆ' ಮಿನಿ ಎಸ್‌ಯುವಿ; ಎಕ್ಸ್ ಕ್ಲೂಸಿವ್ ಚಿತ್ರಗಳು

ಟಿಯುವಿ300, ಇಕೊಸ್ಪೋರ್ಟ್ ಪ್ರತಿಸ್ಪರ್ಧಿ ಟಾಟಾ ಮಿನಿ ಎಸ್‌ಯುವಿ ಮುಂದಕ್ಕೆ ಓದಿ

English summary
2016 Tata Osprey Mini SUV Spied

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark