ಫೋಕ್ಸ್ ವ್ಯಾಗನ್, ಆಡಿ ಆಯ್ತು; ಈಗ ಸಿಯೆಟ್ ತಪ್ಪೊಪ್ಪಿಗೆ ಸರದಿ

Posted By:

ಫೋಕ್ಸ್‌ವ್ಯಾಗನ್, ಆಡಿ ಬೆನ್ನಲ್ಲೇ 'ಮಾಲಿನ್ಯ ಮೋಸ'ಕ್ಕೆ ಸಂಬಂಧಪಟ್ಟಂತೆ ತಪ್ಪೊಪ್ಪಿಗೆಯೊಂದಿಗೆ ಮಗದೊಂದು ಕಾರು ಬ್ರಾಂಡ್ ಮುಂದಕ್ಕೆ ಬಂದಿದೆ. ಫೋಕ್ಸ್ ವ್ಯಾಗನ್ ಸಂಸ್ಥೆಯ ಅಧೀನತೆಯಲ್ಲಿರುವ ಸಂಸ್ಥೆಯು ನೀಡಿರುವ ಹೇಳಿಕೆ ಪ್ರಕಾರ, ಏಳು ಲಕ್ಷದಷ್ಟು ಸಿಯೆಟ್ ಕಾರುಗಳಲ್ಲೂ ತಪಾಸಣೆ ವೇಳೆ ಮಾಲಿನ್ಯ ತಡೆಗಟ್ಟುವ ಸಾಫ್ಟವೇರ್ ಬಳಕೆ ಮಾಡಲಾಗಿದೆ.

ಜಾಗತಿಕವಾಗಿ 7,00,000 ಸಿಯೆಟ್ ಕಾರುಗಳಲ್ಲಿ ಮಾಲಿನ್ಯ ದೋಷ ಕಂಡುಬಂದಿದ್ದು, ದೇಶವಾರು ಲೆಕ್ಕಾಚಾರವನ್ನು ನಿಖರವಾಗಿ ತಿಳಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಿಯೆಟ್ ವಕ್ತಾರರು ತಿಳಿಸಿದ್ದಾರೆ.

ಸಿಯೆಟ್

ಕೆಲವು ದಿನಗಳ ಹಿಂದೆಯಷ್ಟೇ ಫೋಕ್ಸ್ ವ್ಯಾಗನ್ ಮಹಾ ಮಾಲಿನ್ಯ ಮೋಸ ಬೆಳಕಿಗೆ ಬಂದಿತ್ತು. ಅಮೆರಿಕ ಮಾಲಿನ್ಯ ತಪಾಸನೆಯ ಮಾನದಂಡ (ಎಮಿಷನ್ ಟೆಸ್ಟ್) ಮರೆಮಾಚಲು ಫೋಕ್ಸ್‌ವ್ಯಾಗನ್ ಡೀಸೆಲ್ ಕಾರುಗಳಲ್ಲಿ ವಿಶೇಷ ರೀತಿಯ ಸಾಫ್ಟ್‌ವೇರ್ ವೊಂದನ್ನು ಬಳಕೆ ಮಾಡಿತ್ತು. ಇದರಿಂತೆ ಇಂಧನ ವಿಸರ್ಜನೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುತ್ತಿದ್ದವು. ಅಲ್ಲದೆ ಪ್ರಾಯೋಗಾಲಯದಲ್ಲಿ ಕೊಡುವ ಕ್ಷಮತೆಗೂ, ನೈಜ ಪರಿಸ್ಥಿತಿಯಲ್ಲಿ ರಸ್ತೆಯ ಮೇಲೆ ಬಂದಾಗ ತೋರಿಸುವ ಕ್ಷಮತೆಗೂ ವ್ಯತ್ಯಾಸಗಳು ಕಂಡುಬಂದಿದ್ದವು.

ಜಾಗತಿಕವಾಗಿ 1.1 ಕೋಟಿ ಫೋಕ್ಸ್ ವ್ಯಾಗನ್ ಡೀಸೆಲ್ ಕಾರುಗಳಲ್ಲಿ ಮಾಲಿನ್ಯ ದೋಷ ನಡೆದಿದೆ ಎಂದು ಅಂದಾಜಿಸಲಾಗಿದೆ. ಇದರ ಬೆನ್ನಲ್ಲೇ ತಪ್ಪೊಪ್ಪಿಕೊಂಡಿರುವ ಫೋಕ್ಸ್ ವ್ಯಾಗನ್ ದೋಷಯುಕ್ತ ಎಂಜಿನ್ ಗಳನ್ನು ಬದಲಾಯಿಸುವುದಾಗಿ ಭರವಸೆ ಕೊಟ್ಟಿದೆ.

ಇದಾದ ಬೆನ್ನಲ್ಲೇ ಫೋಕ್ಸ್ ವ್ಯಾಗನ್ ಎಜಿ ಅಧೀನತೆಯಲ್ಲಿರುವ ಆಡಿ ಹಾಗೂ ಸ್ಕೋಡಾ ಸಹ ತಪ್ಪೊಪ್ಪಿಗೆ ಪ್ರಸಂಗವೂ ಎದುರಾಗಿತ್ತು. ಇವೆರಡು ಬ್ರಾಂಡ್ ಗಳಲ್ಲಿ ಅನುಕ್ರಮವಾಗಿ 2.1 ಮಿಲಿಯನ್ ಹಾಗೂ 1.2 ಮಿಲಿಯನ್ ಕಾರುಗಳಲ್ಲಿ ಮಾಲಿನ್ಯ ಮೋಸ ನಡೆದಿದೆ.

English summary
Emission Scandal: 700,000 Seat vehicles also affected
Story first published: Thursday, October 1, 2015, 7:47 [IST]
Please Wait while comments are loading...

Latest Photos