ಹೋಂಡಾ ಸಂಸ್ಥೆಗೆ ಹೊಸ ಸಾರಥಿ; ಯಾರು ಗೊತ್ತೇ?

Written By:

ಜಪಾನ್‌ನ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಇತ್ತೀಚೆಗಷ್ಟೇ ತನ್ನ ಇತಿಹಾಸದಲ್ಲೇ ಅತಿ ದೊಡ್ಡ ವಾಹನ ಹಿಂಪಡೆತಕ್ಕೆ ಗುರಿಯಾಗಿತ್ತು. ಇದು ಸಂಸ್ಥೆಗೆ ಇತ್ತೀಚೆಗಿನ ಕಾಲಘಟ್ಟದ ಅತಿ ದೊಡ್ಡ ಹಿನ್ನೆಡೆಯೆಂದೇ ಪರಿಗಣಿಸ್ಪಟ್ಟಿತ್ತು.

ಈ ನಡುವೆ ಈಗಿನ ಸಿಇಒ ಟಕನೊಬೊ ಇಟೊ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. 61ರ ಹರೆಯದ ಇಟೊ ಸ್ಥಾನಕ್ಕೀಗ ಹೊಸ ಸಾರಥಿ ಆಯ್ಕೆಯಾಗಿದ್ದಾರೆ. ಅವರೇ ಟಕಹೀರೊ ಹಚಿಗೊ.

honda

ಸದ್ಯ ವ್ಯವಸ್ಥಾಪಕ ಅಧಿಕಾರದಲ್ಲಿರುವ ಹಚಿಗೊ ಹೊಸ ಹೊಣೆಗಾರಿಕೆ ವಹಿಸಲಿದ್ದಾರೆ. ಹಾಗಿದ್ದರೂ ಸಿಇಒ ಸ್ಥಾನದಿಂದ ಕೆಳಗಿಳಿದರೂ ಸಹ ಟಕನೊಬೊ ಮಂಡಳಿಯ ಸದಸ್ಯರಾಗಿ ತಮ್ಮ ಸೇವೆಯನ್ನು ಸಂಸ್ಥೆಗಾಗಿ ಮುಂದುವರಿಸಿದ್ದಾರೆ.

ಈ ಹಿಂದೆ ಹೋಂಡಾಗೆ ಬಾಹ್ಯ ಸಂಸ್ಥೆ ಟಕಟ ಒದಗಿಸಿರುವ ಏರ್ ಬ್ಯಾಗ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದಾಗಿ ಭಾರಿ ಸಂಖ್ಯೆಯಲ್ಲಿ ರಿಕಾಲ್‌ಗೆ ಕರೆ ನೀಡಲಾಗಿತ್ತು.

English summary
Now Honda has announced that current CEO, Takanobu Ito will be stepping down at the age of 61. The leadership will be handed over to Takahiro Hachigo, who currently serves as Managing Officer.
Story first published: Tuesday, February 24, 2015, 14:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark