ಡಿಕ್ಕಿ ಪರೀಕ್ಷೆಯಲ್ಲಿ ನಾಲ್ಕು ಸ್ಟಾರ್ ಗೆದ್ದ ಹ್ಯುಂಡೈ ಕ್ರೆಟಾ

Written By:

ಲ್ಯಾಟಿನ್ ಎನ್‌ಸಿಎಪಿ ಢಿಕ್ಕಿ ಪರೀಕ್ಷೆಯಲ್ಲಿ (Crash Test) ಪರಿಣಾಮಕಾರಿ ಪ್ರದರ್ಶನ ನೀಡಿರುವ ಹ್ಯುಂಡೈ ಕ್ರೆಟಾ ಐದರಲ್ಲಿ ನಾಲ್ಕು ನಕ್ಷತ್ರಗಳ ರೇಟಿಂಗ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಇಲ್ಲಿ ಗಮನಾರ್ಹ ಅಂಶವೆಂದರೆ ಭಾರತದಲ್ಲಿ ನಿರ್ಮಾಣ ಮಾಡಿರುವ ಕ್ರೆಟಾ ಮಾದರಿಯನ್ನು ಢಿಕ್ಕಿ ಪರೀಕ್ಷೆಗೆ ಒಳಪಡಿಸಲಾಗಿತ್ತು.

To Follow DriveSpark On Facebook, Click The Like Button
ಡಿಕ್ಕಿ ಪರೀಕ್ಷೆಯಲ್ಲಿ ನಾಲ್ಕು ಸ್ಟಾರ್ ಗೆದ್ದ ಹ್ಯುಂಡೈ ಕ್ರೆಟಾ

ಭಾರತದಲ್ಲಿ ಹ್ಯುಂಡೈ ಕ್ರೆಟಾ ಅತ್ಯಂತ ಬೇಡಿಕೆಯುಳ್ಳ ಕಾರು ಎಂಬುದರಲ್ಲಿ ಸಂಶಯವೇ ಇಲ್ಲ. ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಕ್ರೆಟಾ ಗ್ರಾಹಕರ ಪಾಲಿಗೆ ನೆಚ್ಚಿನ ಆಯ್ಕೆಯೆನಿಸಿದೆ.

ಡಿಕ್ಕಿ ಪರೀಕ್ಷೆಯಲ್ಲಿ ನಾಲ್ಕು ಸ್ಟಾರ್ ಗೆದ್ದ ಹ್ಯುಂಡೈ ಕ್ರೆಟಾ

ಎರಡು ಏರ್ ಬ್ಯಾಗ್ ಇರುವುದರ ಹೊರತಾಗಿಯೂ ಫ್ರಂಟ್ ಢಿಕ್ಕಿ ಪರೀಕ್ಷೆಯಲ್ಲಿ ಕ್ರೆಟಾ ಫೋರ್ ಸ್ಟಾರ್ ರೇಟಿಂಗ್ ಗೆದ್ದುಕೊಂಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಡಿಕ್ಕಿ ಪರೀಕ್ಷೆಯಲ್ಲಿ ನಾಲ್ಕು ಸ್ಟಾರ್ ಗೆದ್ದ ಹ್ಯುಂಡೈ ಕ್ರೆಟಾ

ಸದ್ಯ ಸರಾಸರಿ 7,000 ಯುನಿಟ್ ಗಳ ಮಾರಾಟ ಕಾಯ್ದುಕೊಂಡಿರುವ ಹ್ಯುಂಡೈ ಕ್ರೆಟಾ ಒಂದು ಲಕ್ಷಕ್ಕೂ ಹೆಚ್ಚಿನ ಬುಕ್ಕಿಂಗ್ಸ್ ಗಿಟ್ಟಿಸಿಕೊಂಡಿದೆ.

ಡಿಕ್ಕಿ ಪರೀಕ್ಷೆಯಲ್ಲಿ ನಾಲ್ಕು ಸ್ಟಾರ್ ಗೆದ್ದ ಹ್ಯುಂಡೈ ಕ್ರೆಟಾ

ಭಾರತದಲ್ಲಿ ಕ್ರೆಟಾ ಬೇಸ್ ವೆರಿಯಂಟ್ ಗಳಿಗೆ ಏರ್ ಬ್ಯಾಗ್ ಸೌಲಭ್ಯಗಳಿರುವುದಿಲ್ಲ. ಹಾಗಿದ್ದರೂ ಎಲ್ಲ ವೆರಿಯಂಟ್ ಗಳಲ್ಲೂ ಎಬಿಎಸ್ ಹಾಗೂ ಇಬಿಡಿ ಸ್ಟ್ಯಾಂಡರ್ಡ್ ಆಗಿ ಲಭ್ಯವಿರುತ್ತದೆ.

ಡಿಕ್ಕಿ ಪರೀಕ್ಷೆಯಲ್ಲಿ ನಾಲ್ಕು ಸ್ಟಾರ್ ಗೆದ್ದ ಹ್ಯುಂಡೈ ಕ್ರೆಟಾ

ಯುರೋಪ್ ಖಂಡಗಳಿರುವುದಕ್ಕೆ ಸಮಾನವಾದ ಢಿಕ್ಕಿ ಪರೀಕ್ಷೆಯು ಭಾರತದಲ್ಲೂ ಕಡ್ಡಾಯಗೊಳಿಸಲು ಕೇಂದ್ರ ಸರಕಾರ ಮುಂದಾಗುತ್ತಿದೆ. ಇದು ಮತ್ತಷ್ಟು ಸುರಕ್ಷಿತ ಕಾರುಗಳು ರಸ್ತೆ ಪ್ರವೇಶಿಸಲು ನೆರವಾಗಲಿದೆ.

English summary
Hyundai Creta Latin NCAP Crash Test
Story first published: Wednesday, December 16, 2015, 17:49 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark