ಅಂಬುಲೆನ್ಸ್ ಸಂಚಾರಕ್ಕೆ ಅಡ್ಡಿಯಾದ್ದಲ್ಲಿ ದಂಡ ತೆರಬೇಕಾದಿತು ಹುಷಾರ್!
ಅಂಬುಲೆನ್ಸ್ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಹಲವಾರು ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಹೌದು, ಇನ್ನು ಮುಂದೆ ಅಂಬುಲೆನ್ಸ್ ಸಂಚಾರಕ್ಕೆ ಅಡ್ಡಿಯಾದ್ದಲ್ಲಿ 2,000 ರು.ಗಳಷ್ಟು ದಂಡ ಪಾವತಿಸಬೇಕಾಗಿದೆ. ಪ್ರಸ್ತುತ ನಿಯಮ ದೆಹಲಿಯಲ್ಲಿ ಜಾರಿಗೆ ಬಂದಿರುವುದನ್ನು ವಿಶೇಷ ಪೊಲೀಸ್ ಆಯುಕ್ತರಾಗಿರುವ (ಟ್ರಾಫಿಕ್) ಮುಖೇಶ್ ಚಂದರ್ ಖಚಿತಪಡಿಸಿದ್ದಾರೆ.

ಇದರಂತೆ ಸಂಚಾರಕ್ಕೆ ತಡೆಯನ್ನುಂಟು ಮಾಡುವ ನಿರ್ದಿಷ್ಟ ವಾಹನಗಳ ನಂಬರ್, ದಿನಾಂಕ ಹಾಗೂ ಸಮಯವನ್ನು ಗುರುತಿಸಿಕೊಳ್ಳುವಂತೆ ಎಲ್ಲ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದೆ.
ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳ ಪಾಲಿಗೆ ಅಂಬುಲೆನ್ಸ್ ಜೀವರಕ್ಷಕವಾಗಿದೆ. ಆದರೆ ವಿಪರೀತ ವಾಹನ ದಟ್ಟಣೆಯಿಂದಾಗಿ ಅನೇಕ ಮಂದಿಯ ಪ್ರಾಣ ಪಕ್ಷಿ ದಾರಿ ಮಧ್ಯೆಯೇ ಹಾರಿ ಹೋಗುತ್ತಿರುವ ಬಗ್ಗೆ ಆರೋಪಗಳು ಹೆಚ್ಚಾಗುತ್ತಲೇ ಇದೆ.


Click it and Unblock the Notifications








