ದಟ್ಸನ್ ಹೊಸ ಕಾರಿಗಾಗಿ ಕಾದು ಕಾದು ಸುಸ್ತಾಗಿ ಬಿಡ್ತೀರಾ ?

By Nagaraja

ಈಗಷ್ಟೇ ಭಾರತದಲ್ಲಿ ತನ್ನ ಶ್ರೇಣಿಯ ಮೂರನೇ ಕಾರು 'ರೆಡಿ ಗೊ' ಬಿಡುಗಡೆಗೊಳಿಸಿರುವ ದಟ್ಸನ್ ಮಗದೊಂದು ಆಕರ್ಷಕ ಕಾರಿನ ಬಿಡುಗಡೆಯ ತಯಾರಿಯಲ್ಲಿ ತೊಡಗಿದೆ. ಅದುವೇ 'ದಟ್ಸನ್ ಗೊ ಕ್ರಾಸ್'.

ಆದರೆ ನೀವು ದಟ್ಸನ್ ಗೊ ಕ್ರಾಸ್ ಕಾರು ಕೊಳ್ಳಲು ಬಯಸುವುದಾದ್ದಲ್ಲಿ ಕಾದು ಕಾದು ಸುಸ್ತಾಗಿ ಬಿಡ್ತೀರಾ! ಯಾಕೆಂದರೆ 2019ರ ಮಧ್ಯಂತರ ವೇಳೆಯಲ್ಲಷ್ಟೇ ನೂತನ ಉಪಯುಕ್ತ ವಾಹನ ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಅಂದರೆ ಸರಿ ಸುಮಾರು ಮೂರು ವರ್ಷಗಳಷ್ಟು ಸಮಯ ಕಾಯಬೇಕಾಗಿದೆ.

ಮುಂದಿನ ಮೂರು ವರ್ಷಗಳಲ್ಲಿ ಮೂರು ನೂತನ ಕಾರು - ನಿಸ್ಸಾನ್ ಯೋಜನೆ

ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಮೂರು ಕಾರುಗಳನ್ನು ಬಿಡುಗಡೆ ಮಾಡುವುದು ದಟ್ಸನ್ ಮಾತೃಸಂಸ್ಥೆ ನಿಸ್ಸಾನ್ ಯೋಜನೆಯಾಗಿದೆ. ಇದರಲ್ಲಿ ದಟ್ಸನ್ ಗೊ ಕ್ರಾಸ್ ಅಲ್ಲದೆ ನಿಸ್ಸಾನ್ ಕಿಕ್ ಮತ್ತು ನಿಸ್ಸಾನ್ ಎಕ್ಸ್ ಟ್ರೈಲ್ ಸೇರಿದೆ.

ಮುಂದಿನ ಮೂರು ವರ್ಷಗಳಲ್ಲಿ ಮೂರು ನೂತನ ಕಾರು - ನಿಸ್ಸಾನ್ ಯೋಜನೆ

ನಿಸ್ಸಾನ್ ಪಿಬಿ1ಡಿ ಎಂಬ ಕೋಡ್ ಪಡೆದುಕೊಂಡಿರುವ ನಿಸ್ಸಾನ್ ಕಿಕ್, ಹ್ಯುಂಡೈ ಕ್ರೆಟಾ ಮತ್ತು ಹೋಂಡಾ ಬಿಆರ್-ವಿ ಮಾದರಿಗಳಿಗೆ ನಿಸ್ಸಾನ್ ನೀಡುವ ಉತ್ತರವಾಗಲಿದೆ. ನಿಸ್ಸಾನ್ ಕಿಕ್ ಪ್ರಸಕ್ತ ಸಾಲಿನಲ್ಲೇ ಬ್ರೆಜಿಲ್ ಮಾರುಕಟ್ಟೆಯನ್ನು ತಲುಪುತ್ತಿದೆ.

ಮುಂದಿನ ಮೂರು ವರ್ಷಗಳಲ್ಲಿ ಮೂರು ನೂತನ ಕಾರು - ನಿಸ್ಸಾನ್ ಯೋಜನೆ

ಈ ನಡುವೆ ಭಾರತದಲ್ಲಿ ಪ್ರಸಕ್ತ ಸಾಲಿನಲ್ಲೇ ನಿಸ್ಸಾನ್ ಎಕ್ಸ್ ಟ್ರೈಲ್ ಬಿಡುಗಡೆ ಮಾಡುವ ಯೋಜನೆಯನ್ನು ನಿಸ್ಸಾನ್ ಹೊಂದಿದೆ.

ಮುಂದಿನ ಮೂರು ವರ್ಷಗಳಲ್ಲಿ ಮೂರು ನೂತನ ಕಾರು - ನಿಸ್ಸಾನ್ ಯೋಜನೆ

ಇನ್ನು ನಾಲ್ಕು ಮೀಟರ್ ಉದ್ದ ಪರಿಧಿಯೊಳಗಿನ ಕ್ರೀಡಾ ಬಳಕೆಯ ವಾಹನಕ್ಕೆ ದಟ್ಸನ್ ಗೊ ಕ್ರಾಸ್ ಉತ್ತರವಾಗಲಿದೆ. ಆದರೆ ಇದು 2019ರ ವೇಳೆಯಲ್ಲಷ್ಟೇ ಮಾರುಕಟ್ಟೆಗೆ ಅಪ್ಪಳಿಸಲಿದೆ.

ಮುಂದಿನ ಮೂರು ವರ್ಷಗಳಲ್ಲಿ ಮೂರು ನೂತನ ಕಾರು - ನಿಸ್ಸಾನ್ ಯೋಜನೆ

ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಪ್ರಸಕ್ತ ಸಾಲಿನಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್, 2018ರಲ್ಲಿ ನಿಸ್ಸಾನ್ ಕಿಕ್ ಮತ್ತು 2019ರಲ್ಲಿ ದಟ್ಸನ್ ಗೊ ಕ್ರಾಸ್ ಭಾರತವನ್ನು ಪ್ರವೇಶಿಸಲಿದೆ.

ಮುಂದಿನ ಮೂರು ವರ್ಷಗಳಲ್ಲಿ ಮೂರು ನೂತನ ಕಾರು - ನಿಸ್ಸಾನ್ ಯೋಜನೆ

ನೂತನ ಗೊ ಕ್ರಾಸ್ ರೆನೊ-ನಿಸ್ಸಾನ್ ಸಿಎಂಎಫ್-ಎ ಪ್ಲಸ್ ತಳಹದಿಯಲ್ಲೇ ನಿರ್ಮಾಣಗೊಳ್ಳಲಿದೆ. ಇದು ಐದರಿಂದ 10 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

ಮುಂದಿನ ಮೂರು ವರ್ಷಗಳಲ್ಲಿ ಮೂರು ನೂತನ ಕಾರು - ನಿಸ್ಸಾನ್ ಯೋಜನೆ

ಭಾರತದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಮತ್ತು ಮಾರುತಿ ವಿಟಾರಾ ಬ್ರಿಝಾ ಮುಂತಾದ ಮಾದರಿಗಳಿಗೆ ದಟ್ಸನ್ ಗೊ ಕ್ರಾಸ್ ಪ್ರತಿಸ್ಪರ್ಧಿಯಾಗಲಿದೆ.

ಮುಂದಿನ ಮೂರು ವರ್ಷಗಳಲ್ಲಿ ಮೂರು ನೂತನ ಕಾರು - ನಿಸ್ಸಾನ್ ಯೋಜನೆ

ಸದ್ಯಕ್ಕೆ ಎಂಜಿನ್ ಗಳ ಬಗ್ಗೆ ಯಾವುದೇ ಖಚಿತತೆ ಇಲ್ಲದಿದ್ದರೂ 1.2 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಮತ್ತು 1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್ ಬಳಕೆಯಾಗುವ ಸಾಧ್ಯತೆಯಿದೆ. ಇದು ಐದು ಸ್ಪೀಡ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

ಮುಂದಿನ ಮೂರು ವರ್ಷಗಳಲ್ಲಿ ಮೂರು ನೂತನ ಕಾರು - ನಿಸ್ಸಾನ್ ಯೋಜನೆ

ವಿನ್ಯಾಸಕ್ಕೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು ಕ್ರೋಮ್ ಗ್ರಿಲ್, ಎಲ್ ಇಡಿ ಹೆಡ್ ಲ್ಯಾಂಪ್, ವೃತ್ತಾಕಾರದ ಹೆಡ್ ಲ್ಯಾಂಪ್, ಎಲ್ ಇಡಿ ಫಾಗ್ ಲೈಟ್, ಅಲಾಯ್ ವೀಲ್, ಸ್ವಭಾವ ರೇಖೆ ಮತ್ತು ಎಲ್ ಇಡಿ ಬೆಳಕಿನ ಸೇವೆಯಿರಲಿದೆ.

ಮುಂದಿನ ಮೂರು ವರ್ಷಗಳಲ್ಲಿ ಮೂರು ನೂತನ ಕಾರು - ನಿಸ್ಸಾನ್ ಯೋಜನೆ

ಇದಕ್ಕೂ ಮೊದಲು ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ದಟ್ಸನ್ ಗೊ ಕ್ರಾಸ್ ಕಾರನ್ನು ಭರ್ಜರಿಯಾಗಿ ಅನಾವರಣಗೊಳಿಸಲಾಗಿತ್ತು.

ಮುಂದಿನ ಮೂರು ವರ್ಷಗಳಲ್ಲಿ ಮೂರು ನೂತನ ಕಾರು - ನಿಸ್ಸಾನ್ ಯೋಜನೆ

ಹೊಸ ತಲೆಮಾರಿನ ಚಾಲಕರ ಆಸೆ, ಬಯಕೆಗಳನ್ನು ಈಡೇರಿಸುವಲ್ಲಿ ನೂತನ ಗೊ ಕ್ರಾಸ್ ಯಶಸ್ವಿಯಾಗಲಿದೆ ಎಂಬುದು ಸಂಸ್ಥೆಯ ನಂಬಿಕೆಯಾಗಿದೆ.

More from DriveSpark

Article Published On: Saturday, June 11, 2016, 11:23 [IST]
English summary
Datsun GO-Cross India Launch Details Revealed
Read more on ದಟ್ಸನ್ datsun
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+