ಮಾರುತಿ ಬೆನ್ನಲ್ಲೇ ಹ್ಯುಂಡೈ ಕಾರುಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

Written By:

ಇತ್ತೀಚೆಗಷ್ಟೇ ದೇಶದ ನಂ.1 ಕಾರು ಸಂಸ್ಥೆ ಮಾರುತಿ ಸುಜುಕಿ ಬೆಲೆ ಏರಿಕೆ ನೀತಿಯನ್ನು ಘೋಷಿಸಿತ್ತು. ಇದಾದ ಬೆನ್ನಲ್ಲೇ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರು ಇಂಡಿಯಾ ಲಿಮಿಟೆಡ್ ಸಂಸ್ಥೆಯು ಸಹ ಬೆಲೆ ಏರಿಕೆಯನ್ನು ಪ್ರಕಟಿಸಿದೆ.

ಹ್ಯುಂಡೈ ಕಾರುಗಳಿಗೆ ಗರಿಷ್ಠ 20,000 ರು.ಗಳ ವರೆಗೆ ಬೆಲೆ ಏರಿಕೆ ಕಂಡುಬರಲಿದೆ. ನೂತನ ಬೆಲೆಯು 2016 ಆಗಸ್ಟ್ 16ರಿಂದ ಜಾರಿಗೆ ಬರಲಿದೆ. ಈ ಎಲ್ಲ ಬೆಳವಣಿಗೆಗಳು ಸಾಮಾನ್ಯ ವಾಹನ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದೆ.

ಮಾರುತಿ ಬೆನ್ನಲ್ಲೇ ಹ್ಯುಂಡೈ ಕಾರುಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

ನಿರ್ಮಾಣ ವೆಚ್ಚ ಹೆಚ್ಚಾಗಿರುವುದು ಹಾಗೂ ವಿದೇಶಿ ವಹಿವಾಟಿನಲ್ಲಿ ರುಪಾಯಿ ಮೌಲ್ಯ ಏರಿಳಿತದಿಂದಾಗಿ ಬೆಲೆ ಏರಿಕೆಗೊಳಿಸಲಾಗಿದೆ ಎಂದು ಹ್ಯುಂಡೈ ಪ್ರಕಟಣೆಯಲ್ಲಿ ತಿಳಿಸಿದೆ.

ಮಾರುತಿ ಬೆನ್ನಲ್ಲೇ ಹ್ಯುಂಡೈ ಕಾರುಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಹ್ಯುಂಡೈ ಇಂಡಿಯಾ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಹಿರಿಯ ಉಪಾಧ್ಯಕ್ಷರಾಗಿರುವ ರಾಕೇಶ್ ಶ್ರೀವಾಸ್ತವಾ, "ರುಪಾಯಿ ಇಳಿಕೆ ಹಾಗೂ ನಿರ್ಮಾಣ ವೆಚ್ಚ ಹೆಚ್ಚಾಗಿರುವುದು ಒಟ್ಟಾರೆ ವ್ಯಯದ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಬೆಲೆ ಏರಿಕೆಗೊಳಿಸುವುದು ಅನಿರ್ವಾಯವಾಗಿದೆ" ಎಂದಿದ್ದಾರೆ.

ಮಾರುತಿ ಬೆನ್ನಲ್ಲೇ ಹ್ಯುಂಡೈ ಕಾರುಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

ದೇಶದಲ್ಲಿ ಹ್ಯುಂಡೈ ಕಾರುಗಳಿಗೆ 3,000 ರುಪಾಯಿಗಳಿಂದ ಆರಂಭವಾಗಿ ಗರಿಷ್ಠ 20,000 ರು.ಗಳ ವರೆಗೆ ಬೆಲೆ ಏರಿಕೆ ಕಂಡುಬರಲಿದೆ.

ಮಾರುತಿ ಬೆನ್ನಲ್ಲೇ ಹ್ಯುಂಡೈ ಕಾರುಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

ಭಾರತದಲ್ಲಿ ಸಣ್ಣ ಹ್ಯಾಚ್ ಬ್ಯಾಕ್ ಇಯಾನ್ ನಿಂದ ತೊಡಗಿ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನ ಸಾಂಟಾ ಫೆ ವರೆಗಿನ ಆವೃತ್ತಿಗಳನ್ನು ಹ್ಯುಂಡೈ ಮಾರಾಟ ಮಾಡುತ್ತಿದೆ. ಇದು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 3.25 ಲಕ್ಷ ರು.ಗಳಿಂದ ಆರಂಭವಾಗಿ 31.75 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತದೆ.

ಮಾರುತಿ ಬೆನ್ನಲ್ಲೇ ಹ್ಯುಂಡೈ ಕಾರುಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

ಇದಕ್ಕೂ ಮುನ್ನ ಮಾರುತಿ ಸುಜುಕಿ ಸಂಸ್ಥೆಯು ಸಹ ತನ್ನೆಲ್ಲ ಶ್ರೇಣಿಯ ಕಾರುಗಳಿಗೆ 20,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಿತ್ತು.

ಮಾರುತಿ ಬೆನ್ನಲ್ಲೇ ಹ್ಯುಂಡೈ ಕಾರುಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

ದೇಶದಲ್ಲಿ ತನ್ನ ಶ್ರೇಣಿಯ ಕಾರುಗಳನ್ನು ವಿಸ್ತರಿಸುವ ಯೋಜನೆಯಲ್ಲಿರುವ ಹ್ಯುಂಡೈ, ಅತಿ ಶೀಘ್ರದಲ್ಲೇ ಭವಿಷ್ಯದಲ್ಲೇ ಮುಂದಿನ ತಲೆಮಾರಿನ ಎಲಂಟ್ರಾ ಹಾಗೂ ಟಸ್ಕನ್ ಕ್ರೀಡಾ ಬಳಕೆಯ ವಾಹನಗಳನ್ನು ಬಿಡುಗಡೆ ಮಾಡಲಿದೆ.

English summary
Hyundai to hike prices by up to Rs 20,000
Story first published: Saturday, August 6, 2016, 17:19 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark