ಅಚ್ಚರಿ; ರೆನೊಗೆ ಬೆದರಿದ ಆಲ್ಟೊದಿಂದ ಹೊಸ ರಣನೀತಿ

Written By:

ಬಹುನಿರೀಕ್ಷಿತ 2016 ಆಟೋ ಎಕ್ಸ್ ಪೋ ಆಗಮನವಾಗಿರುವಂತೆಯೇ ಬಹುತೇಕ ಮುಂಚೂಣಿಯ ಸಂಸ್ಥೆಗಳು ಹೊಸ ಹೊಸ ಯೋಜನೆಯೊಂದಿಗೆ ಮುಂದೆ ಬರುತ್ತಿದೆ.

ಅತ್ತ ರೆನೊ ಕ್ವಿಡ್ ಸಣ್ಣ ಕಾರಿನಿಂದ ಎದುರಾಗಿರುವ ಅಪಾಯವನ್ನು ಅರಿತುಕೊಂಡಿರುವ ದೇಶದ ಅತಿ ದೊಡ್ಡ ಕಾರು ಸಂಸ್ಥೆ ಮಾರುತಿ ಸುಜುಕಿ ಸಹ 2016 ಆಟೋ ಎಕ್ಸ್ ಪೋವನ್ನು ಗಂಭೀರವಾಗಿ ಪರಿಗಣಿಸುತ್ತಿದೆ.

ಮಾರುತಿ ಆಲ್ಟೊ ಡೀಸೆಲ್ ಕಾರು

ಬಲ್ಲ ಮೂಲಗಳ ಪ್ರಕಾರ ಮಾರುತಿ ಆಲ್ಟೊ ಡೀಸೆಲ್ ಕಾರು ಇಂಡಿಯನ್ ಆಟೋ ಎಕ್ಸ್ ಪೋದಲ್ಲಿ ಪ್ರಮುಖ ಆಕರ್ಷಣೆಯಾಗಲಿದೆ. ಇದು ಅತಿ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದ್ದು, ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರು ತನ್ನ ಸ್ಥಾನವನ್ನು ಭದ್ರವಾಗಿಸಲಿದೆ.

ಇನ್ನೊಂದೆಡೆ 2015 ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿರುವ ರೆನೊ ಕ್ವಿಡ್ ಈಗಾಗಲೇ 85,000ಕ್ಕೂ ಹೆಚ್ಚು ಬುಕ್ಕಿಂಗ್ಸ್ ಗಳನ್ನು ದಾಖಲಿಸಿಕೊಂಡಿದೆ. ಅಲ್ಲದೆ ಗ್ರಾಹಕರ ಬೇಡಿಕೆಯನ್ನು ಈಡೇರಿಸಲು ಉತ್ಪನ್ನ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಹೊಸ ಆಲ್ಟೊದಲ್ಲಿ 793 ಸಿಸಿ ಟ್ವಿನ್ ಸಿಲಿಂಡರ್ ಡಿಡಿಐಎಸ್ ಡೀಸೆಲ್ ಎಂಜಿನ್ ಬಳಕೆಯಾಗಲಿದ್ದು, 69 ಎನ್‌ಎಂ ತಿರುಗುಬಲದಲ್ಲಿ 48 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ 5 ಸ್ಪೀಡ್ ಗೇರ್ ಬಾಕ್ಸ್ ಇರಲಿದೆ.

ಆಲ್ಟೊ ಡೀಸೆಲ್ ಕಾರು ಸಹ ಪ್ರತಿ ಲೀಟರ್ ಗೆ 27.62 ಕೀ.ಮೀ. ಮೈಲೇಜ್ ನೀಡುವ ಸಾಧ್ಯತೆಯಿದೆ. ಅಲ್ಲದೆ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಕೂಡಾ ಪ್ರಮುಖ ಆಕರ್ಷಣೆಯಾಗಲಿದೆ.

English summary
Maruti Alto Diesel Variant To Be Showcased At 2016 Auto Expo
Story first published: Wednesday, January 20, 2016, 12:12 [IST]
Please Wait while comments are loading...

Latest Photos