ಬೆಂಝ್ ಬಹು ನಿರೀಕ್ಷಿತ ಜಿಎಲ್‌ಸಿ ಎಸ್‌ಯುವಿ ಬಿಡುಗಡೆ

Written By:

ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಭಾರತದಲ್ಲಿ ಅತಿ ನೂತನ ಜಿಎಲ್‌ಸಿ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಬಿಡುಗಡೆಗೊಳಿಸಿದೆ. ಈ ಮೂಲಕ ಪ್ರಸಕ್ತ ಸಾಲಿನಲ್ಲೂ ಆಕ್ರಮಣಕಾರಿ ನೀತಿಯನ್ನು ಮುಂದುವರಿಸಿದೆ.

ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಎರಡು ಆವೃತ್ತಿಗಳಲ್ಲಿ ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಆವೃತ್ತಿಯು ಲಭ್ಯವಾಗಲಿದೆ. ಅವುಗಳೆಂದರೆ ಜಿಎಲ್ ಸಿ 220 ಡಿ ಡೀಸೆಲ್ ಮತ್ತು ಜಿಎಲ್ ಸಿ 300 ಪೆಟ್ರೋಲ್ ಮಾದರಿಯಾಗಿದೆ. ಇದರೊಂದಿಗೆ ಜಿಎಲ್ ಎ ಮತ್ತು ಜಿಎಲ್ ಇ ಐಷಾರಾಮಿ ಎಸ್ ಯುವಿಗಳ ನಡುವಣ ಅಂತರವನ್ನು ತುಂಬಿಕೊಂಡಿದೆ.

ಬೆಂಝ್ ಬಹು ನಿರೀಕ್ಷಿತ ಜಿಎಲ್‌ಸಿ ಎಸ್‌ಯುವಿ ಬಿಡುಗಡೆ

ಜಿಎಲ್ ಸಿ 220 ಡಿ ಡೀಸೆಲ್ ಎಂಜಿನ್ ಆವೃತ್ತಿಯು 400 ಎನ್ ಎಂ ತಿರುಗುಬಲದಲ್ಲಿ 170 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅದೇ ಹೊತ್ತಿಗೆ ಜಿಎಲ್ ಸಿ 300 ಪೆಟ್ರೋಲ್ ವೆರಿಯಂಟ್ 370 ಎನ್ ಎಂ ತಿರುಗುಬಲದಲ್ಲಿ 245 ಅಶ್ವಶಕ್ತಿಯನ್ನು ನೀಡಲಿದೆ.

ಬೆಂಝ್ ಬಹು ನಿರೀಕ್ಷಿತ ಜಿಎಲ್‌ಸಿ ಎಸ್‌ಯುವಿ ಬಿಡುಗಡೆ

ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳು 9ಜಿ ಟ್ರಾನಿಕ್ ಗೇರ್ ಬಾಕ್ಸ್ ಪಡೆಯಲಿದ್ದು,4 ಮ್ಯಾಟಿಕ್ ಆಲ್ ವೀಲ್ ಚಾಲನಾ ವ್ಯವಸ್ಥೆಯು ಇದರಲ್ಲಿರಲಿದೆ.

ಬೆಂಝ್ ಬಹು ನಿರೀಕ್ಷಿತ ಜಿಎಲ್‌ಸಿ ಎಸ್‌ಯುವಿ ಬಿಡುಗಡೆ

ಡೈನಾಮಿಕ್ ಸೆಲೆಕ್ಟ್ ಎಂಬ ಐದು ಚಾಲನಾ ವಿಧಗಳನ್ನು ನೂತನ ಜಿಎಲ್ ಸಿ ಪಡೆದುಕೊಂಡಿದೆ. ಅವುಗಳೆಂದರೆ, ಕಂಫರ್ಟ್, ಇಕೊ, ಸ್ಪೋರ್ಟ್, ಸ್ಪೋರ್ಟ್ ಪ್ಲಸ್ ಮತ್ತು ಇಂಡ್ಯುವ್ಯುಜಲ್.

ಬೆಂಝ್ ಬಹು ನಿರೀಕ್ಷಿತ ಜಿಎಲ್‌ಸಿ ಎಸ್‌ಯುವಿ ಬಿಡುಗಡೆ

ಹಾಗೆಯೇ ಆಫ್ ರೋಡ್, ಇನ್ ಕ್ಲೈನ್ ಮತ್ತು ಸ್ಲಿಪ್ಪರಿಗಳೆಂಬ ಮೂರು ಆಫ್ ರೋಡ್ ಪ್ಯಾಕೇಜ್ ಗಳು ಇದರಲ್ಲಿದೆ. ಅಂತೆಯೇ ಡೌನ್ ಹಿಲ್ ಸ್ಪೀಡ್ ರೆಗ್ಯೂಲೇಷನ್ (ಡಿಎಸ್ ಆರ್) ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

ಬೆಂಝ್ ಬಹು ನಿರೀಕ್ಷಿತ ಜಿಎಲ್‌ಸಿ ಎಸ್‌ಯುವಿ ಬಿಡುಗಡೆ

ತನ್ನ ಹಿಂದಿನ ಮಾದರಿ ಜಿಎಲ್ ಕೆ ಗಿಂತಲೂ ಹಗುರ ಭಾರ ಎನಿಸಿಕೊಂಡಿರುವ ಮರ್ಸಿಡಿಸ್ ಬೆಂಝ್ ಜಿಎಲ್ ಸಿ, 80 ಕೆ.ಜಿಗಳಷ್ಟು ಕಡಿಮೆ ತೂಕ ಪಡೆದಿದೆ.

ಬೆಂಝ್ ಬಹು ನಿರೀಕ್ಷಿತ ಜಿಎಲ್‌ಸಿ ಎಸ್‌ಯುವಿ ಬಿಡುಗಡೆ

ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಭಾರತವನ್ನು ತಲುಪಲಿರುವ ಮರ್ಸಿಡಿಸ್ ಬೆಂಝ್ ಜಿಎಲ್ ಸಿ 220 ಡಿ ಮತ್ತು 300 'ಎಡಿಷನ್ 1' ಆವೃತ್ತಿಗಳು ಪುಣೆ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಅನುಕ್ರಮವಾಗಿ 50.70 ಮತ್ತು 50.90 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಬೆಂಝ್ ಬಹು ನಿರೀಕ್ಷಿತ ಜಿಎಲ್‌ಸಿ ಎಸ್‌ಯುವಿ ಬಿಡುಗಡೆ

ಮರ್ಸಿಡಿಸ್ ಬೆಂಝ್ ಜಿಎಲ್ ಸಿ 300 4 ಮ್ಯಾಟಿಕ್ 6.5 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿದೆ. ಅದೇ ರೀತಿ ಜಿಎಲ್ ಸಿ 220 ಡಿ 4 ಮ್ಯಾಟಿಕ್ 8.3 ಸೆಕೆಂಡುಗಳಲ್ಲಿ ಗಂಟೆಗೆ 01-00 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಪಡೆದಿದೆ.

ಬೆಂಝ್ ಬಹು ನಿರೀಕ್ಷಿತ ಜಿಎಲ್‌ಸಿ ಎಸ್‌ಯುವಿ ಬಿಡುಗಡೆ

ಗ್ರಾಹಕರ ಕೈಗೆಟುವಂತಹ ಸರ್ವೀಸ್ ಪ್ಯಾಕೇಜ್ ಗಳನ್ನು ಬೆಂಝ್ ಒದಗಿಸಲಿದೆ. ಪೆಟ್ರೋಲ್ ಮತ್ತು ಡೀಸೆಲ್ ವೆರಿಯಂಟ್ ಗಳ ಸ್ಟ್ಯಾಂಡರ್ಡ್ ಪ್ಯಾಕೇಜ್ ಗಳು ಅನುಕ್ರಮವಾಗಿ 63,000 ಮತ್ತು 78,000 ರು.ಗಳಿಂದ ಆರಂಭವಾಗಲಿದೆ.

ಮುಖ್ಯಾಂಶಗಳು

ಮುಖ್ಯಾಂಶಗಳು

 • 9ಜಿ ಟ್ರಾನಿಕ್ ಟ್ರಾನ್ಸ್ ಮಿಷನ್,
 • ಎಬಿಎಸ್, ಇಎಸ್ ಪಿ, ಇಟಿಎಸ್,
 • ಡೌನ್ ಹಿಂಲ್ ಡಿಸೆಂಟ ಜೊತೆ ಡೌನ್ ಹಿಲ್ ಸ್ಪೀಡ್ ರೆಗ್ಯೂಲೇಷನ್
 • ಇಕೊ ಸ್ಟ್ಯಾರ್ಟ್/ಸ್ಟಾಪ್ ಫಂಕ್ಷನ್, ಕೀಲೆಸ್ ಗೊ ಸ್ಟ್ಯಾರ್ಟಿಂಗ್ ಫಂಕ್ಷನ್
ಇನ್ಪೋಟೈನ್ಮೆಂಟ್

ಇನ್ಪೋಟೈನ್ಮೆಂಟ್

 • ಆಡಿಯೋ 20 ಸಿಡಿ ಜೊತೆ ನೇವಿಗೇಷನ್ ಗಾಗಿ ಪ್ರಿ ಟೆನ್ಷನರ್ ಇನ್ ಸ್ಟಾಲೇಷನ್, ಸಿಡಿ ಪ್ಲೇಯರ್,
 • ಟಚ್ ಪ್ಯಾಡ್,
 • ಗಾರ್ಮಿನ್ ಮ್ಯಾಪ್ ಪೈಲಟ್, ನೇವಿಗೇಷನ್ ಸಿಸ್ಟಂ,
 • ಏಳು ಇಂಚುಗಳ ಕಲರ್ ಮೀಡಿಯಾ ಡಿಸ್ ಪ್ಲೇ
ಆರಾಮ ಮತ್ತು ಅನುಕೂಲತೆ

ಆರಾಮ ಮತ್ತು ಅನುಕೂಲತೆ

 • ಪ್ಯಾನರಾಮಿಕ್ ಸ್ಲೈಡಿಂಗ್ ಸನ್ ರೂಫ್,
 • ಎಂಬಿ ಆಪ್ಸ್ ಜೊತೆ ಇಂಟರ್ ನೆಟ್ ಕನೆಕ್ಟಿವಿಟಿ,
 • ಥೆರ್ಮೊಟ್ರಾನಿಕ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್,
 • ಆಂಬಿಯಂಟ್ ಲೈಟಿಂಗ್,
 • ಲಗ್ಗೇಜ್ ಈಸಿ ಪ್ಯಾಕ್ ಟೈಲ್ ಗೇಟ್
 • ಮೆಮೆರಿ ಪ್ಯಾಕೇಜ್
 ಸುರಕ್ಷತೆ

ಸುರಕ್ಷತೆ

 • ಚೈಲ್ಡ್ ಸೇಫ್ಟಿ,
 • ಪಾದಚಾರಿ ಸುರಕ್ಷತೆ,
 • ಇಎಸ್ ಪಿ ಕರ್ವ್ ಡೈನಾಮಿಕ್ ಅಸಿಸ್ಟ್,
 • ಎಲ್ ಇಡಿ ಹೆಡ್ ಲ್ಯಾಂಪ್ ಜೊತೆ ಇಂಟೆಲಿಜೆಟ್ ಲೈಟ್ ಸಿಸ್ಟಂ,
 • ಕ್ರಾಸ್ ವಿಂಡ್ ಅಸಿಸ್ಟ್,
 • ಪ್ರಿ ಸೇಫ್,
ಸುರಕ್ಷತೆ

ಸುರಕ್ಷತೆ

 • ಆಂಟೆಕ್ಷನ್ ಅಸಿಸ್ಟ್,
 • ರಿವರ್ಸಿಂಗ್ ಕ್ಯಾಮೆರಾ ಜೊತೆ ಡೈನಾಮಿಕ್ ಗೈಡ್ ಲೈನ್ಸ್,
 • ಆಕ್ಟಿವ್ ಪಾರ್ಕಿಂಗ್ ಅಸಿಸ್ಟ್ ಜೊತೆ ಪಾರ್ಕ್ ಟ್ರಾನಿಕ್,
 • ಅಡಾಪ್ಟಿವ್ ಬ್ರೇಕ್ ಲೈಟ್ಸ್,
 • ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಫ್ರಂಟ್ ಸೈಡ್ ಏರ್ ಬ್ಯಾಗ್, ಕರ್ಟೈನ್ ಏರ್ ಬ್ಯಾಗ್ (ಒಟ್ಟು 7 ಏರ್ ಬ್ಯಾಗ್)
 • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ
English summary
Mercedes GLC Rumbles Into India; Prices Start At Rs. 50.70 Lakhs
Story first published: Thursday, June 2, 2016, 16:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark