25 ಆಕರ್ಷಕ ವೈಶಿಷ್ಟ್ಯಗಳೊಂದಿಗೆ ರೆನೊ ಲೊಡ್ಜಿ ವರ್ಲ್ಡ್ ಎಡಿಷನ್ ಬಿಡುಗಡೆ
ಕಳೆಗುಂದಿರುವ ಮಾರಾಟಕ್ಕೆ ಉತ್ತೇಜನ ನೀಡುವ ತವಕದಲ್ಲಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು, ಲೊಡ್ಜಿ ಬಹು ಬಳಕೆಯ ವಾಹನದ ವಿಶೇಷ ವರ್ಲ್ಡ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಇಲ್ಲಿ ಅತಿ ಗಮನಾರ್ಹ ಸಂಗತಿಯೆಂದರೆ ನೂತನ ರೆನೊ ಲೊಡ್ಜಿ ವರ್ಲ್ಡ್ ಎಡಿಷನ್ 25 ಹೊಸ ವೈಶಿಷ್ಟ್ಯಗಳನ್ನು ಪಡೆದಿದೆ.
ಭಾರತ ಮಾರುಕಟ್ಟೆಯಲ್ಲಿ ಲೊಡ್ಜಿ ನಿರೀಕ್ಷಿತ ಮಟ್ಟದ ಮಾರಾಟ ಸಾಧಿಸಿರಲಿಲ್ಲ. ಹಾಗಾಗಿ 25 ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡಲು ಸಂಸ್ಥೆಯು ನಿರ್ಧರಿಸಿದೆ. ಇದು ಖಂಡಿತವಾಗಿಯೂ ಲೊಡ್ಜಿ ಮಾರಾಟಕ್ಕೆ ಉತ್ತೇಜನ ತುಂಬಲು ಸಹಕಾರಿಯಾಗಲಿದೆ.

ಭಾರತದಲ್ಲಿ ರೆನೊ ಲೊಡ್ಜಿ ವರ್ಲ್ಡ್ 85 ಮತ್ತು 110 ಅಶ್ವಶತ್ತಿ ಆವೃತ್ತಿಗಳು ಅನುಕ್ರಮವಾಗಿ 9.74 ಲಕ್ಷ ರು. ಮತ್ತು 10.40 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ದೆಹಲಿ) ದುಬಾರಿಯೆನಿಸಲಿದೆ.

ಲೊಡ್ಜಿ ವರ್ಲ್ಡ್ ಸ್ಪೆಷಲ್ ಎಡಿಷನ್ 25 ವೈಶಿಷ್ಟ್ಯಗಳು
- ಮುಂಭಾಗದಲ್ಲಿ ರತ್ನದಂತಿರುವ ಕ್ರೋಮ್ ಗ್ರಿಲ್,
- ದೇಹ ಬಣ್ಣದ ಬಂಪರ್ ಜೊತೆಗೆ ಕ್ರೋಮ್ ಮೇಲಾವರಣ,
- ಫ್ರಂಟ್ ಫಾಗ್ ಲ್ಯಾಂಪ್ ಜೊತೆ ಕ್ರೋಮ್ ಆವರಣ,
- ಮುಂಭಾಗ ಮತ್ತು ಹಿಂಭಾಗದಲ್ಲಿ ಚಕ್ರ ಹೋದಿಕೆ,
- ಮುಂಭಾಗ ಮತ್ತು ಹಿಂಭಾಗದಲ್ಲಿ ಸ್ಕಿಡ್ ಪ್ಲೇಟ್
- ಸೈಡ್ ಸ್ವಭಾವ ರೇಖೆ ಜೊತೆಗೆ ಜೆಟ್ ಬ್ಲ್ಯಾಕ್ ಫಿನಿಶ್,
- ಡ್ಯುಯಲ್ ಟೋನ್ ರೂಫ್ ರೈಲ್ ಜೊತೆಗೆ ಕ್ರೋಮ್ ಫಿನಿಶ್,
- ಬ್ಲ್ಯಾಕ್ ಡೋರ್ ಸೈಡ್ ಲೇಪನ ಜೊತೆ ಕ್ರೋಮ್ ಸ್ಟ್ರಿಪ್,
- ಆರ್15 ನೆಪ್ಟಾ ಫಿನಿಶ್ ಅಲಾಯ್ ಚಕ್ರಗಳು,
- ವಲ್ಡ್ ಎಡಿಷನ್ ಸೈಡ್ ಮತ್ತು ರಿಯರ್ ಚಿತ್ರ
- ದೇಹ ಬಣ್ಣದ ರಿಯರ್ ಸ್ಪಾಯ್ಲರ್,
- ಮುದ್ರಿತ ಮ್ಯಾಟ್ ಜೊತೆ ಬಿ ಮತ್ತು ಸಿ ಪಿಲ್ಲರ್ ಸ್ಟ್ರಿಪ್ಪಿಂಗ್,
- ವರ್ಲ್ಡ್ ಎಡಿಷನ್ ಲಾಂಛನ,
- ವಿದ್ಯುನ್ಮಾನವಾಗಿ ಹೊಂದಾಣಿಸುವ ಮಿರರ್,
- ಡ್ಯಾಶ್ ಬೋರ್ಡ್ ಜೊತೆ ಕ್ರೋಮ್ ಫಿನಿಶ್ ಸೆಂಟರ್ ಟ್ರಿಮ್ಸ್
- ಏರ್ ವೆಂಟ್ಸ್ ಗಳಲ್ಲಿ ಕಿತ್ತಳೆ ಫಿನಿಶ್,
- ಕ್ಲಾಸಿಕ್ ಗ್ರಿಸ್ ಫ್ಯೂಮ್ ಮೊನೊಟೋನ್ ಡೋರ್ ಟ್ರಿಮ್,
- ಹೊಸ ಸೀಟು ಹೋದಿಕೆ ಜೊತೆಗೆ ಕಿತ್ತಳೆ ಸ್ಟ್ರಿಪ್,
- ಗ್ಲೋಸಿ ಬ್ಲ್ಯಾಕ್ ಫೋಮ್ ಸ್ಟೀರಿಂಗ್ ವೀಲ್ ಜೊತೆ ಟು ಟೋನ್ ವರ್ಲ್ಡ್ ಎಡಿಷನ್ ಬ್ಯಾಡ್ಜ್,
- ಸ್ಟೈಲಿಷ್ ಗೇರ್ ಶಿಫ್ಟ್ ಜೊತೆ ಕಾಂಟ್ರಾಸ್ಟ್ ಸ್ಟಿಚ್
- ಕ್ರೋಮ್ ಪಾರ್ಕಿಂಗ್ ಬ್ರೇಕ್ ಲಿವರ್ ಬಟನ್,
- ಕ್ರೋಮ್ ಡೋರ್ ಹ್ಯಾಂಡಲ್,
- ಇನ್ಟ್ರುಮೆಂಟ್ ಕ್ಲಸ್ಟರ್ ಜೊತೆ ಕಿತ್ತಳೆ ಫಿನಿಶ್ ಸೆಂಟರ್ ರಿಂಗ್,
- ಲೊಡ್ಜಿ ಫ್ಲೋರ್ ಮ್ಯಾಟ್,
- ರೆನೊ ಸಿಲ್ ಪ್ಲೇಟ್

ಲೊಡ್ಜಿ ವರ್ಲ್ಡ್ ಸ್ಪೆಷಲ್ ಎಡಿಷನ್ 25 ವೈಶಿಷ್ಟ್ಯಗಳು

ಲೊಡ್ಜಿ ವರ್ಲ್ಡ್ ಸ್ಪೆಷಲ್ ಎಡಿಷನ್ 25 ವೈಶಿಷ್ಟ್ಯಗಳು

ಲೊಡ್ಜಿ ವರ್ಲ್ಡ್ ಸ್ಪೆಷಲ್ ಎಡಿಷನ್ 25 ವೈಶಿಷ್ಟ್ಯಗಳು



Click it and Unblock the Notifications








