ಹೊಸ ಕಾರು ಬ್ರ್ಯಾಂಡ್ ಆಗಲಿದೆ ವೊಲ್ವೋದಿಂದ ಪ್ರತ್ಯೇಕಗೊಂಡ ಪೋಲ್‌ಸ್ಟಾರ್

Written By:

ಎಲೆಕ್ಟ್ರಿಕ್ ಕಾರುಗಳಿಗೆ ದಿನದಿಂದ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಬೃಹತ್ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಮುಂದಾಗಿರುವ ವೊಲ್ವೋ ಸಂಸ್ಥೆಯು ಪೋಲ್‌ಸ್ಟಾರ್ ಕಾರು ಮಾದರಿಯನ್ನು ಪ್ರತ್ಯೇಕಗೊಳಿಸಿ ಹೊಸ ಕಾರು ಬ್ರ್ಯಾಂಡ್ ಆಗಿ ಕಾರ್ಯಚಟುವಟಿಕೆ ನಡೆಸಲು ಮುಂದಾಗಿದೆ.

ಹೊಸ ಬ್ರ್ಯಾಂಡ್ ಆಗಲಿದೆ ವೊಲ್ವೋದಿಂದ ಪ್ರತ್ಯೇಕಗೊಂಡ ಪೋಲ್‌ಸ್ಟಾರ್

ಕೆಲದಿನಗಳ ಹಿಂದಷ್ಟೇ 2019ರಿಂದ ಡಿಸೇಲ್ ಮತ್ತು ಪೆಟ್ರೋಲ್ ಉತ್ಪಾದನೆ ಕೈಬಿಟ್ಟು ಪೂರ್ಣಪ್ರಮಾಣದಲ್ಲಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳ ಉತ್ಪಾದನೆ ಬಗ್ಗೆ ಮಹತ್ಪದ ಸುಳಿವು ನೀಡಿದ್ದ ವೊಲ್ವೋ ಸಂಸ್ಥೆಯು, ಇದೀಗ ಪ್ರಮುಖ ಕಾರು ಮಾದರಿಯಾದ ಪೋಲ್‌ಸ್ಟಾರ್ ವಿಭಾಗವನ್ನು ಪ್ರತ್ಯೇಕಗೊಳಿಸುತ್ತಿದೆ.

ಹೊಸ ಬ್ರ್ಯಾಂಡ್ ಆಗಲಿದೆ ವೊಲ್ವೋದಿಂದ ಪ್ರತ್ಯೇಕಗೊಂಡ ಪೋಲ್‌ಸ್ಟಾರ್

ಈ ಮೂಲಕ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗೆ ಹೊಸ ಆಯಾಮ ನೀಡಿರುವ ವೊಲ್ವೋ, ಪೋಲ್‌ಸ್ಟಾರ್ ಕಾರು ವಿಭಾಗದಿಂದ ವಿವಿಧ ಮಾದರಿಯ ಸುಧಾರಿತ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿ ಮಾಡಲಿದೆ.

ಹೊಸ ಬ್ರ್ಯಾಂಡ್ ಆಗಲಿದೆ ವೊಲ್ವೋದಿಂದ ಪ್ರತ್ಯೇಕಗೊಂಡ ಪೋಲ್‌ಸ್ಟಾರ್

ಕೇವಲ ಎಲೆಕ್ಟ್ರಿಕ್ ಕಾರುಗಳಷ್ಟೇ ಅಲ್ಲದೇ ಹೈಬ್ರಿಡ್ ಕಾರುಗಳನ್ನು ಕೂಡಾ ಅಭಿವೃದ್ಧಿ ಮಾಡಲಿರುವ ಪೋಲ್‌ಸ್ಟಾರ್, ಮುಂಬರುವ ಫ್ರಾಂಕ್‌ಫ್ರೂಟ್ ಆಟೋ ಎಕ್ಸ್‌ಪೋದಲ್ಲಿ ಮೊದಲ ಉತ್ಪಾದಿತ ಕಾರುಗಳನ್ನು ಪ್ರದರ್ಶನ ಮಾಡಲಿದೆ.

ಹೊಸ ಬ್ರ್ಯಾಂಡ್ ಆಗಲಿದೆ ವೊಲ್ವೋದಿಂದ ಪ್ರತ್ಯೇಕಗೊಂಡ ಪೋಲ್‌ಸ್ಟಾರ್

ಹೊಸ ಕಾರುಗಳ ಮೇಲೆ ವೊಲ್ವೋ ಚಿಹ್ನೆಯನ್ನು ತೆಗದುಹಾಕಲು ನಿರ್ಧಿಸಿರುವ ಪೋಲ್‌ಸ್ಟಾರ್ ಕಾರು ಅಭಿವೃದ್ಧಿ ವಿಭಾಗವು, ಸದ್ಯದಲ್ಲೇ ಅಂತರ್‌ರಾಷ್ಟ್ರೀಯ ದರ್ಜೆಯ ಕಾರು ಆವೃತ್ತಿಗಳ ಅಭಿವೃದ್ಧಿ ಕಾರ್ಯವನ್ನು ಪ್ರಾರಂಭ ಮಾಡಲಿದೆ.

ಹೊಸ ಬ್ರ್ಯಾಂಡ್ ಆಗಲಿದೆ ವೊಲ್ವೋದಿಂದ ಪ್ರತ್ಯೇಕಗೊಂಡ ಪೋಲ್‌ಸ್ಟಾರ್

ಇದಕ್ಕಾಗಿ ಬೃಹತ್ ಯೋಜನೆಯನ್ನು ಕೈಗೊಂಡಿರುವ ಪೋಲ್‌ಸ್ಟಾರ್ ಸಂಸ್ಥೆಯು ಸ್ಪೀಡನ್ ಸೇರಿದಂತೆ ದೇಶಿಯವಾಗಿ ಕೂಡಾ ಪೋಲ್‌ಸ್ಟಾರ್ ಕಾರುಗಳ ತಯಾರಿಕೆ ಪ್ರಮಾಣವನ್ನು ಹೆಚ್ಚಿಸಲಾಗುತಿದ್ದು, ಉತ್ತಮ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ 600ಬಿಎಚ್‌ಪಿ ಉತ್ಪಾದಿತ ಕಾರುಗಳನ್ನು ನಿರ್ಮಾಣ ಮಾಡಲಿದೆ.

ಹೊಸ ಬ್ರ್ಯಾಂಡ್ ಆಗಲಿದೆ ವೊಲ್ವೋದಿಂದ ಪ್ರತ್ಯೇಕಗೊಂಡ ಪೋಲ್‌ಸ್ಟಾರ್

ಇನ್ನು ವೊಲ್ವೋ ಕೂಡಾ ಎಲೆಕ್ಟ್ರಿಕ್ ಕಾರುಗಳ ಜೊತೆ ಜೊತೆಯಲ್ಲಿ ಹೈಬ್ರಿಡ್ ಕಾರುಗಳ ಉತ್ಪಾದನೆ ಕೈಗೊಳ್ಳಲಿದ್ದು, ಪೋಲ್‌ಸ್ಟಾರ್ ವಿಭಾಗವು ಕೂಡಾ ಮುಂಬರುವ ದಿನಗಳಲ್ಲಿ ಅತಿಹೆಚ್ಚು ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ.

Read more on ವೊಲ್ವೋ volvo
English summary
Read in Kannada about Polestar’s First Electric Car Plans Revealed.
Story first published: Monday, July 17, 2017, 13:19 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark