ಭಾರತೀಯ ಮಾರುಕಟ್ಟೆಗಾಗಿ ಹೋಂಡಾದಿಂದ ಬ್ರಿಯೋ ಎಲೆಕ್ಟ್ರಿಕ್ ರೆಡಿ...

ಎಂಟ್ರಿ ಲೆವಲ್ ಕಾರು ಮಾದರಿಯನ್ನು ಎಲೆಕ್ಟ್ರಿಕ್ ಎಂಜಿನ್ ಜೊತೆ ಪರಿಚಯಿಸುವ ಬಗ್ಗೆ ಹೋಂಡಾ ಅಧಿಕೃತ ಮಾಹಿತಿಯನ್ನು ಹೊರಹಾಕಿದೆ.

By Praveen

ಹೋಂಡಾ ಇಂಡಿಯಾ ಸಂಸ್ಥೆಯಿಂದ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದ ಕುರಿತ ನಾವು ಈ ಹಿಂದೆಯೇ ವರದಿ ಮಾಡಿದ್ದೇವು. ಅಂತೆಯೇ ಇದೀಗ ಎಂಟ್ರಿ ಲೆವಲ್ ಕಾರು ಮಾದರಿಯನ್ನು ಎಲೆಕ್ಟ್ರಿಕ್ ಎಂಜಿನ್ ಜೊತೆ ಪರಿಚಯಿಸುವ ಬಗ್ಗೆ ಹೋಂಡಾ ಅಧಿಕೃತ ಮಾಹಿತಿಯನ್ನು ಹೊರಹಾಕಿದೆ.

ಭಾರತೀಯ ಮಾರುಕಟ್ಟೆಗಾಗಿ ಹೋಂಡಾದಿಂದ ಬ್ರಿಯೋ ಎಲೆಕ್ಟ್ರಿಕ್ ರೆಡಿ...

2030ರ ವೇಳೆಗೆ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಮಾರಾಟದಲ್ಲಿ ಶೇ.100ರಷ್ಟು ಮುನ್ನಡೆ ಸಾಧಿಸುವ ಉದ್ದೇಶದಿಂದ ವಿಶ್ವಾದ್ಯಂತ ಎಲ್ಲ ರಾಷ್ಟ್ರಗಳು ವಿವಿಧ ಯೋಜನೆಗಳನ್ನು ರೂಪಿಸುತ್ತಿದ್ದು, ಪ್ರತಿಷ್ಠಿತ ಆಟೋ ಉತ್ಪಾದನಾ ಕೂಡಾ ಬೃಹತ್ ಯೋಜನೆಗಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ.

ಭಾರತೀಯ ಮಾರುಕಟ್ಟೆಗಾಗಿ ಹೋಂಡಾದಿಂದ ಬ್ರಿಯೋ ಎಲೆಕ್ಟ್ರಿಕ್ ರೆಡಿ...

ಸದ್ಯ ಹೋಂಡಾ ಇಂಡಿಯಾ ಸಂಸ್ಥೆಯು ಕೂಡಾ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಯಾವುದು ಎಂಬುವುದನ್ನು ಸ್ಪಷ್ಟಪಡಿಸಿದ್ದು, ಸಣ್ಣ ಕಾರು ಮಾದರಿಗಳಲ್ಲಿ ಜನಪ್ರಿಯತೆ ಪಡೆದಿರುವ ಬ್ರಿಯೋ ಮಾದರಿಯನ್ನೇ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಮಾರಾಟ ಮಾಡಲಿದೆ.

Recommended Video

Best Cars Of 2017 In India - DriveSpark
ಭಾರತೀಯ ಮಾರುಕಟ್ಟೆಗಾಗಿ ಹೋಂಡಾದಿಂದ ಬ್ರಿಯೋ ಎಲೆಕ್ಟ್ರಿಕ್ ರೆಡಿ...

ಈ ಹಿನ್ನೆಲೆ ಹೋಂಡಾ ಕಂಪನಿಯು ಮುಂದಿನ 2020ರಲ್ಲಿ ಎಲೆಕ್ಟ್ರಿಕ್ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದ್ದು, 2019ರಲ್ಲಿ ಈ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಅಧಿಕೃತವಾಗಿ ಆರಂಭಿಸಲಿದೆ.

ಭಾರತೀಯ ಮಾರುಕಟ್ಟೆಗಾಗಿ ಹೋಂಡಾದಿಂದ ಬ್ರಿಯೋ ಎಲೆಕ್ಟ್ರಿಕ್ ರೆಡಿ...

ಇನ್ನು ಎಲೆಕ್ಟ್ರಿಕ್ ಹೋಂಡಾ ಕಾರು ಸುಧಾರಿತ ಮಾದರಿಯ ಅಯಾನ್ ಲಿಥೀಯಂ ಬ್ಯಾಟರಿ ವ್ಯವಸ್ಥೆಯನ್ನು ಹೊಂದಿರಲಿದ್ದು, ಕೇವಲ 15 ನಿಮಿಷ ಸಮಯದಲ್ಲಿ ಚಾರ್ಜ್ ಮಾಡಬಹುದಾಗಿದೆ ಎಂದು ವರದಿ ಹೇಳಿದೆ.

ಭಾರತೀಯ ಮಾರುಕಟ್ಟೆಗಾಗಿ ಹೋಂಡಾದಿಂದ ಬ್ರಿಯೋ ಎಲೆಕ್ಟ್ರಿಕ್ ರೆಡಿ...

ಇದಲ್ಲದೇ ವಿದ್ಯುತ್ ವಾಹನಗಳು ಕಡಿಮೆ ಸಮಯದಲ್ಲಿ ಚಾರ್ಜ್ ಆಗುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಕಡೆ ಹಲವಾರು ತಯಾರಕರು ಕಂಪನಿಗಳು ಈಗಾಗಲೇ ಕಾರ್ಯೋನ್ಮುಕವಾಗಿದ್ದು, ಹೋಂಡಾ ಕಂಪನಿಯ ಈ ಸುದ್ದಿ ಸದ್ಯ ಹೆಚ್ಚು ಚರ್ಚೆಗೆ ಕಾರಣವಾಗಿದೆ.

ಭಾರತೀಯ ಮಾರುಕಟ್ಟೆಗಾಗಿ ಹೋಂಡಾದಿಂದ ಬ್ರಿಯೋ ಎಲೆಕ್ಟ್ರಿಕ್ ರೆಡಿ...

ಈ ಮೂಲಕ ಕೇವಲ 15 ನಿಮಿಷಗಳ ಚಾರ್ಜಿಂಗ್ ಸಮಯದೊಂದಿಗೆ ಹೊಸ ಎಲೆಕ್ಟ್ರಿಕ್ ಕಾರುಗಳು 180 ರಿಂದ 230 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಗಳಿಗೆ ಸರಿಯಾದ ಆಯ್ಕೆಯಾಗುವ ಭರವಸೆ ಹುಟ್ಟುಹಾಕಿದೆ.

ತಪ್ಪದೇ ಓದಿ- ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ಭಾರತೀಯ ಮಾರುಕಟ್ಟೆಗಾಗಿ ಹೋಂಡಾದಿಂದ ಬ್ರಿಯೋ ಎಲೆಕ್ಟ್ರಿಕ್ ರೆಡಿ...

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಇತರ ರಾಷ್ಟ್ರಗಳಂತೆಯೇ ಶುದ್ಧ ವಿದ್ಯುತ್ ವಾಹನಗಳಿಗೆ ಭಾರತವೂ ಸಹ ಹೆಚ್ಚು ಒತ್ತು ನೀಡುತ್ತಿದೆ. ಆದರೆ ಮೂಲ ಸೌಕರ್ಯಗಳನ್ನು ಇಲ್ಲದೆ ಈ 2030 ಮಿಷನ್ ಸಾಧಿಸುವುದು ಕಷ್ಟ ಸಾಧ್ಯವಾಗಲಿದೆ. ಈ ಬಗ್ಗೆ ಕೇಂದ್ರ ಗಮನಹರಿಸಬೇಕಾಗಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
English summary
Honda Plans To Launch Brio-Based Electric Car In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X