ಭಾರತದಲ್ಲಿ ಯಶಸ್ವಿ 20 ವರ್ಷಗಳನ್ನು ಪೂರೈಸಿದ ಹೋಂಡಾ ಸಿಟಿ ಕಾರು

ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಭಾರತದಲ್ಲಿ ತನ್ನ ಹೊಂಡಾ ಸಿಟಿ ಕಾರಿನ 20ನೇ ವರ್ಷದ ಸಂಭ್ರಮಾಚರಣೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ.

By Girish

ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಭಾರತದಲ್ಲಿ ತನ್ನ ಹೊಂಡಾ ಸಿಟಿ ಕಾರಿನ 20ನೇ ವರ್ಷದ ಸಂಭ್ರಮಾಚರಣೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳನ್ನು ಪೂರೈಸಿದ ಹೋಂಡಾ ಸಿಟಿ ಕಾರು

ಸೆಡಾನ್ ಕಾರುಗಳು ಬಗ್ಗೆ ಮಾತನಾಡುವಾಗ ನಮಗೆ ತಟ್ಟನೆ ನೆನಪಿಗೆ ಬರುವುದು ಈ ಕಾರು ಎಂದರೆ ತಪ್ಪಾಗಲಾರದು. ಯಾವ ಕಾರಿನ ಬಗ್ಗೆ ಮಾತಾಡ್ತಾ ಇದ್ದೇವೆ, ಅನ್ಕೊಂಡ್ರಾ ? ಅದೇರಿ ಹೋಂಡಾ ಸಿಟಿ ಕಾರಿನ ಬಗ್ಗೆ. ಸದ್ಯ ಹೋಂಡಾ ಸಿಟಿ ಕಾರು, ಯಶಸ್ವಿ 20 ವರ್ಷಗಳ ಪಯಣವನ್ನು ಭಾರತದಲ್ಲಿ ಪೂರೈಸಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳನ್ನು ಪೂರೈಸಿದ ಹೋಂಡಾ ಸಿಟಿ ಕಾರು

ಹೋಂಡಾ ಸಿಟಿ ಕಾರನ್ನು ಮೊದಲ ಬಾರಿಗೆ ಭಾರತದಲ್ಲಿ 1998ರಲ್ಲಿ ಆರಂಭಿಸಲಾಯಿತು. ಸದ್ಯ ನಾಲ್ಕು ತಲೆಮಾರು ಅವತಾರವನ್ನು ಕಂಡಿರುವ ಸಿಟಿ ಭಾರತದಲ್ಲಿ ಸಾಕಷ್ಟು ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳನ್ನು ಪೂರೈಸಿದ ಹೋಂಡಾ ಸಿಟಿ ಕಾರು

ವಿಶ್ವಾದ್ಯಂತದ ಮಾರಾಟವಾಗುವ ಹೋಂಡಾ ಸಿಟಿ ಕಾರುಗಳಲ್ಲಿ ಶೇಕಡಾ 25%ನಷ್ಟು ಕಾರುಗಳು ಭಾರತದಲ್ಲಿಯೇ ಮಾರಾಟವಾಗಲಿವೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳನ್ನು ಪೂರೈಸಿದ ಹೋಂಡಾ ಸಿಟಿ ಕಾರು

ಭಾರತವು ಹೋಂಡಾ ಕಾರುಗಳಿಗೆ ಅತಿದೊಡ್ಡ ಮತ್ತು ಪ್ರಮುಖ ಮಾರುಕಟ್ಟೆಯಾಗಿದೆ ಮತ್ತು ಈ ಕಾರು ಸಾಕಷ್ಟು ಗ್ರಾಹಕರಿಗೆ ಮಹತ್ವಾಕಾಂಕ್ಷಿ ಬ್ರಾಂಡ್ ಆಗಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳನ್ನು ಪೂರೈಸಿದ ಹೋಂಡಾ ಸಿಟಿ ಕಾರು

ಮೊದಲ ಬಾರಿಗೆ ಹೋಂಡಾ ಸಿಟಿ ಕಾರನ್ನು ಏಷ್ಯಾದ ಮಾದರಿಯಾಗಿ ಅಭಿವೃದ್ಧಿಪಡಿಸಲಾಯಿತು. ಈ ಕಾರು ಸದ್ಯ 60 ದೇಶಗಳಲ್ಲಿ ಮಾರಾಟವಾಗುತ್ತಿದೆ. ಈ ಕಾರು ಜಾಗತಿಕ ಬ್ರಾಂಡ್ ಆಗಿದ್ದು, ಜಾಗತಿಕವಾಗಿ ಒಟ್ಟು 3.6 ಮಿಲಿಯನ್ ಕಾರುಗಳನ್ನು ಹೋಂಡಾ ಮಾರಾಟ ಮಾಡಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳನ್ನು ಪೂರೈಸಿದ ಹೋಂಡಾ ಸಿಟಿ ಕಾರು

ಹೋಂಡಾ ಸಿಟಿ ಗುಣಮಟ್ಟದ ವಿಚಾರದಲ್ಲಿ ನಾಯಕರಾಗಿದ್ದು, ಗುಣಮಟ್ಟದ ಅಧ್ಯಯನದಲ್ಲಿ ಜೆಡಿ ಪವರ್ ಸಂಸ್ಥೆಯು ಭಾರತದ ಸಿಟಿ ಕಾರಿಗೆ 15ನೇ ಸ್ಥಾನ ನೀಡಿದೆ. ಮಾರಾಟ ನಂತರದ ಸೇವೆಯ ವಿಚಾರದಲ್ಲಿಯೂ ಸಹ ಈ ಉತ್ಪನ್ನವು ಗುಣಮಟ್ಟ ಕಾಯ್ದುಕೊಂಡಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳನ್ನು ಪೂರೈಸಿದ ಹೋಂಡಾ ಸಿಟಿ ಕಾರು

ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 7 ಲಕ್ಷ ಯೂನಿಟ್‌ಗಳ ಮಾರಾಟವನ್ನು ಸಾಧಿಸಿರುವ ಏಕೈಕ ಪ್ರೀಮಿಯಂ ಸೆಡಾನ್ ಇದಾಗಿದ್ದು, ಹೆಚ್ಚಿನ ಇಂಧನ ದಕ್ಷತೆ, ಉತ್ತಮ ಸೌಕರ್ಯ, ಸುಧಾರಿತ ಸುರಕ್ಷತೆ, ಭವ್ಯವಾದ ಚಾಲನಾ ಕಾರ್ಯಕ್ಷಮತೆ ಮತ್ತು ಶ್ರೀಮಂತ ಸಲಕರಣೆಗಳ ಪಟ್ಟಿಯೊಂದಿಗೆ ಯಶಸ್ವಿ ಕಾರು ಎನ್ನಿಸಿಕೊಂಡಿದೆ.

Most Read Articles

Kannada
Read more on honda ಹೋಂಡಾ
English summary
Honda City Completes 20 Years In India. Read in Kannada
Story first published: Saturday, December 23, 2017, 18:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X