ಅತ್ಯಂತ ಕಡಿಮೆ ಬೆಲೆಗೆ ಹ್ಯುಂಡೈ ವಿನೂತನ ಇಯಾನ್ ಸ್ಪೋಟ್ಸ್ ಕಾರು ಬಿಡುಗಡೆ

Written By:

ಉತ್ತರ ಕೋರಿಯಾದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆ ಹ್ಯುಂಡೈ ತನ್ನ ವಿನೂತನ ಇಯಾನ್ ಸ್ಪೋಟ್ಸ್ ಆವೃತ್ತಿಯ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕ ಬೆಲೆ 3.88 ಲಕ್ಷಕ್ಕೆ ಲಭ್ಯವಿರಲಿದೆ.

ಅತ್ಯಂತ ಕಡಿಮೆ ಬೆಲೆಗೆ ಹುಂಡೈ ವಿನೂತನ ಇಯಾನ್ ಸ್ಪೋಟ್ಸ್ ಕಾರು ಬಿಡುಗಡೆ

ಭಾರತೀಯ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ವಿನೂತನ ಕಾರು ಆವೃತ್ತಿಯನ್ನು ಬಿಡುಗಡೆ ಮಾಡಿರುವ ಹ್ಯುಂಡೈ ಸಂಸ್ಥೆಯು, ಸುಧಾರಿತ ತಂತ್ರಜ್ಞಾನ ಹೊಂದಿರೋ ಇಯಾನ್ ಸ್ಪೋಟ್ಸ್ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ.

ಅತ್ಯಂತ ಕಡಿಮೆ ಬೆಲೆಗೆ ಹುಂಡೈ ವಿನೂತನ ಇಯಾನ್ ಸ್ಪೋಟ್ಸ್ ಕಾರು ಬಿಡುಗಡೆ

ಹ್ಯುಂಡೈ ಇಯಾನ್ ಸ್ಪೋಟ್ಸ್ ಆವೃತ್ತಿಗಳಲ್ಲೇ ಮತ್ತೆ ಮೂರು ವಿವಿಧ ಮಾದರಿಗಳನ್ನು ಪರಿಚಯ ಮಾಡಲಾಗಿದ್ದು, ಎರಾ+, ಆ್ಯಂಡ್ ಮ್ಯಾಗ್ನಾ, ಟ್ರಿಮ್ ಟ್ರಾವೆಲರ್ ಎಂಬ ವಿವಿಧ ಮಾದರಿಗಳನ್ನು ಪರಿಚಯ ಮಾಡಲಾಗಿದೆ.

ಅತ್ಯಂತ ಕಡಿಮೆ ಬೆಲೆಗೆ ಹುಂಡೈ ವಿನೂತನ ಇಯಾನ್ ಸ್ಪೋಟ್ಸ್ ಕಾರು ಬಿಡುಗಡೆ

ಎರಾ+ ಸ್ಪೋಟ್ಸ್ ಆವೃತ್ತಿಯ ಕಾರಿನ ಬೆಲೆ ಎಕ್ಸ್‌ಶೋರಂ ಪ್ರಕಾರ ರೂ.3.88ಲಕ್ಷಕ್ಕೆ ಲಭ್ಯವಿದ್ದು, ಮೆಟಾಲಿಕ್ ಪೆಂಟ್ ಸೌಲಭ್ಯ ಹೊಂದಿರುವ ಕಾರಿನ ಬೆಲೆ ರೂ.3.92ಲಕ್ಷಕ್ಕೆ ಲಭ್ಯವಿದೆ.

ಅತ್ಯಂತ ಕಡಿಮೆ ಬೆಲೆಗೆ ಹುಂಡೈ ವಿನೂತನ ಇಯಾನ್ ಸ್ಪೋಟ್ಸ್ ಕಾರು ಬಿಡುಗಡೆ

ಇನ್ನು ಮ್ಯಾಗ್ನಾ+ ಟ್ರಿಮ್ ಆವೃತ್ತಿಯ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.4.14ಲಕ್ಷಕ್ಕೆ ಲಭ್ಯವಿದ್ದರೆ ಮೆಟಾಲಿಕ್ ಪೆಂಟ್ ಹೊಂದಿರುವ ಆವೃತ್ತಿಯು ರೂ.4.18 ಲಕ್ಷಕ್ಕೆ ಸಿಗಲಿದೆ.

ಅತ್ಯಂತ ಕಡಿಮೆ ಬೆಲೆಗೆ ಹುಂಡೈ ವಿನೂತನ ಇಯಾನ್ ಸ್ಪೋಟ್ಸ್ ಕಾರು ಬಿಡುಗಡೆ

ವಿನೂತನ ಹ್ಯುಂಡೈ ಇಯಾನ್ ಸ್ಪೋಟ್ಸ್ ಆವೃತ್ತಿಯ ಒಳವಿನ್ಯಾಸಗಳು ಮಧ್ಯಮ ವರ್ಗದ ಗ್ರಾಹಕರ ಗಮನಸೆಳೆಯುತ್ತಿವೆ. ಗ್ರಾಫಿಕ್ ವರ್ಕ್ಸ್ ಅದ್ಭುತವಾಗಿದ್ದು, 6.2-ಇಂಚು ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ವ್ಯವಸ್ಥೆ ಹೊಂದಿದೆ.

ಅತ್ಯಂತ ಕಡಿಮೆ ಬೆಲೆಗೆ ಹುಂಡೈ ವಿನೂತನ ಇಯಾನ್ ಸ್ಪೋಟ್ಸ್ ಕಾರು ಬಿಡುಗಡೆ

ಹೊಸ ಆವೃತ್ತಿಯಲ್ಲಿ ಎವಿಎನ್ ಅಳವಡಿಕೆ ಹೊಂದಿದ್ದು, ಡೋರ್ ಪ್ಯಾನೆಲ್‌ನಲ್ಲೇ ಮ್ಯೂಜಿಕ್ ವ್ಯವಸ್ಥೆ ಹೊಂದಿದೆ. ಜೊತೆಗೆ ಈ ಹಿಂದಿನ ಆವೃತ್ತಿಯ ಕೆಲವು ಮಾದರಿಗಳನ್ನು ಇಲ್ಲೂ ಮುಂದುವರಿಸಲಾಗಿದೆ.

ಅತ್ಯಂತ ಕಡಿಮೆ ಬೆಲೆಗೆ ಹುಂಡೈ ವಿನೂತನ ಇಯಾನ್ ಸ್ಪೋಟ್ಸ್ ಕಾರು ಬಿಡುಗಡೆ

0.8-ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಹ್ಯುಂಡೈ ಇಯಾನ್ ಸ್ಪೋಟ್ಸ್ ಆವೃತ್ತಿಯು, 55ಬಿಎಚ್‌ಪಿ ಮತ್ತು 75ಎಂಎನ್ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಅತ್ಯಂತ ಕಡಿಮೆ ಬೆಲೆಗೆ ಹುಂಡೈ ವಿನೂತನ ಇಯಾನ್ ಸ್ಪೋಟ್ಸ್ ಕಾರು ಬಿಡುಗಡೆ

5-ಸ್ಪೀಡ್ ಮ್ಯನುವಲ್ ಗೇರ್‌ಬಾಕ್ಸ್ ವ್ಯವಸ್ಥೆ ಕೂಡಾ ಇದ್ದು, ಪ್ರತಿಷ್ಠಿತ ಕಾರು ಮಾದರಿಗಳಿಗೆ ಹ್ಯುಂಡೈ ಇಯಾನ್ ಸ್ಪೋಟ್ಸ್ ಆವೃತ್ತಿ ತೀವ್ರ ಪೈಪೋಟಿ ನೀಡುವ ಸಾಧ್ಯತೆಗಳಿವೆ.

ಅತ್ಯಂತ ಕಡಿಮೆ ಬೆಲೆಗೆ ಹುಂಡೈ ವಿನೂತನ ಇಯಾನ್ ಸ್ಪೋಟ್ಸ್ ಕಾರು ಬಿಡುಗಡೆ

ರೆನಾಲ್ಟ್ ಕ್ವಿಡ್ ಮತ್ತು ಮಾರುತಿ ಸುಜುಕಿ ಆಲ್ಟೋ 800 ಮಾದರಿಗಳಿಗೆ ಸ್ಫರ್ಧೆ ಒಡ್ಡಲು ಸಜ್ಜಾಗಿರುವ ಹ್ಯುಂಡೈ ಇಯಾನ್ ಸ್ಪೋಟ್ಸ್ ಆವೃತ್ತಿಯು, ಮುಂಬರುವ ದಿನಗಳಲ್ಲಿ ಹೊಸ ದಾಖಲೆ ಸೃಷ್ಠಿಸುವ ತವಕದಲ್ಲಿದೆ.

English summary
Read in Kannada about Hyundai has launched the Eon Sports Edition in the Indian market with few cosmetic upgrades.
Please Wait while comments are loading...

Latest Photos