500 ಕಿಮಿ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಿಸಲಿದೆ ಹ್ಯುಂಡೈ..!!

ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ದಿನಕ್ಕೊಂದು ಹೊಸ ಹೊಸ ಸಂಶೋಧನೆಗಳು ತೀವ್ರಗೊಂಡಿದ್ದು, ಈ ನಡುವೆ 500 ಕಿ.ಮಿ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಾಣ ಮಾಡುವ ಬಗ್ಗೆ ಹ್ಯುಂಡೈ ಸುಳಿವು ನೀಡಿದೆ.

By Praveen

ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ದಿನಕ್ಕೊಂದು ಹೊಸ ಹೊಸ ಸಂಶೋಧನೆಗಳು ತೀವ್ರಗೊಂಡಿದ್ದು, ಈ ನಡುವೆ 500 ಕಿ.ಮಿ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಾಣ ಮಾಡುವ ಬಗ್ಗೆ ಹ್ಯುಂಡೈ ಸುಳಿವು ನೀಡಿದೆ.

500 ಕಿಮಿ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರು ನಿರ್ಮಿಸಲಿದೆ ಹ್ಯುಂಡೈ

ಮೊನ್ನೆಯಷ್ಟೇ ಅಮೆರಿಕದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆ ಟೆಸ್ಲಾ ಬಿಡುಗಡೆ ಮಾಡಿರುವ ಮಾಡೆಲ್ 3 ಕಾರಿನ ಮೈಲೇಜ್ ವಿಚಾರವಾಗಿ ಆಟೋ ಉದ್ಯಮದಲ್ಲಿ ಹೊಸ ಹೊಸ ಯೋಜನೆಗಳಿಗೆ ನಾಂದಿ ಹಾಡಿದ್ದು, ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಎಲ್ಲಿಲ್ಲದ ಬೇಡಿಕೆ ಸೃಷ್ಠಿಯಾಗಿದೆ.

500 ಕಿಮಿ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರು ನಿರ್ಮಿಸಲಿದೆ ಹ್ಯುಂಡೈ

ಸದ್ಯ ಟೆಸ್ಲಾ ಮಾಡೆಲ್ 3 ಕಾರು ಒಂದು ಬಾರಿ ಚಾರ್ಜ್ ಮಾಡಿದಲ್ಲಿ 560 ಕಿಮಿ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ಇದೇ ನಿಟ್ಟಿನಲ್ಲಿ ಹ್ಯಂಡೈ ಕೂಡಾ ಕನಿಷ್ಠ 500 ಕಿ.ಮಿ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಾಣ ಮಾಡುವ ಗುರಿಹೊಂದಿದೆ.

500 ಕಿಮಿ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರು ನಿರ್ಮಿಸಲಿದೆ ಹ್ಯುಂಡೈ

ಇದಕ್ಕಾಗಿಯೇ ಕಿಯಾ ಮೋಟಾರ್ಸ್ ಜೊತೆ ಕೈಜೋಡಿಸಿರುವ ಹ್ಯುಂಡೈ ಸಂಸ್ಥೆಯು 2021ರ ಬಳಿಕವಷ್ಟೇ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವ ಬಗ್ಗೆ ಮಹತ್ವದ ಸುಳಿವು ನೀಡಿದೆ.

500 ಕಿಮಿ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರು ನಿರ್ಮಿಸಲಿದೆ ಹ್ಯುಂಡೈ

ಈ ಹಿನ್ನಲೆ ಬೃಹತ್ ಯೋಜನೆಗಾಗಿ ಈಗಿನಿಂದಲೇ ಪೂರ್ವ ತಯಾರಿ ನಡೆಸುತ್ತಿರುವ ಹ್ಯುಂಡೈ, ಸದ್ಯ ಟೆಸ್ಲಾ 3 ಮತ್ತು ಜನರಲ್ ಮೋಟಾರ್ಸ್‌ನ ಎಲೆಕ್ಟ್ರಿಕ್ ಕಾರುಗಳಿಂತಲೂ ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ ಕಾರುಗಳನ್ನು ಬಿಡುಗಡೆಗೊಳಿಸುವ ಆಶಯ ವ್ಯಕ್ತಪಡಿಸಿದೆ.

500 ಕಿಮಿ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರು ನಿರ್ಮಿಸಲಿದೆ ಹ್ಯುಂಡೈ

ಇದರ ಜೊತೆ ಉತ್ತರ ಕೋರಿಯಾದಲ್ಲಿ ಮುಂದಿನ ವರ್ಷ ಫ್ಯೂಲ್ ಸೆಲ್ ತಂತ್ರಜ್ಞಾನ ಪ್ರೇರಿತ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಲಿರುವ ಹ್ಯುಂಡೈ, ಪ್ರತಿ ಚಾರ್ಜಿಂಗ್‌ಗೆ 800ಕಿಮಿ ಮೈಲೇಜ್ ನೀಡುವ ಸಾಮರ್ಥ್ಯ ಬ್ಯಾಟರಿಗಳನ್ನು ಉತ್ಪಾದನೆ ಮಾಡಿದೆ.

500 ಕಿಮಿ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರು ನಿರ್ಮಿಸಲಿದೆ ಹ್ಯುಂಡೈ

ಆದ್ರೆ ದುಬಾರಿ ಬೆಲೆಯ ಕಾರು ಮಾದರಿಯಾಗಿದ್ದು, ಇದಕ್ಕಾಗಿಯೇ ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿ ಮಾಡಲು ಎದುರು ನೋಡುತ್ತಿರುವ ಹ್ಯುಂಡೈ, ಕನಿಷ್ಠ ಮಟ್ಟ 500 ಕಿ.ಮಿ ಮೈಲೇಜ್ ಸಾಮರ್ಥ್ಯದ ಎಂಜಿನ್‌ಗಳನ್ನು ಅಭಿವೃದ್ಧಿ ಮಾಡವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Read in kannada about Hyundai Eyeing To Launch A Long-Range Electric Vehicle In A Few Years.
Story first published: Thursday, August 17, 2017, 13:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X