ಹೊಸ ರೂಬಿ ಕೆಂಪು ಬಣ್ಣವನ್ನು ಪಡೆದ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಭಾರತದಲ್ಲಿ ಬಿಡುಗಡೆ
ಇಸುಝು ಇಂಡಿಯಾ ತನ್ನ ಅಡ್ವೆಂಚರ್ ಯುಟಿಲಿಟಿ ವೆಹಿಕಲ್(ಎವಿವಿ) ಡಿ-ಮ್ಯಾಕ್ಸ್ ವಿ-ಕ್ರಾಸ್ ವಾಹನ ಹೊಸ ರೂಬಿ ರೆಡ್ ಬಣ್ಣದೊಂದಿಗೆ ಪರಿಚಯಿಸಿದ್ದು, ಈ ಮೂಲಕ ಗ್ರಾಹಕರಿಗೆ ಹೊಸ ಬಣ್ಣ ಆಯ್ಕೆಗಳನ್ನು ನೀಡಿದೆ.
ಇಸುಝು ಇಂಡಿಯಾ ತನ್ನ ಅಡ್ವೆಂಚರ್ ಯುಟಿಲಿಟಿ ವೆಹಿಕಲ್(ಎವಿವಿ) ಡಿ-ಮ್ಯಾಕ್ಸ್ ವಿ-ಕ್ರಾಸ್ ವಾಹನ ಹೊಸ ರೂಬಿ ರೆಡ್ ಬಣ್ಣದೊಂದಿಗೆ ಪರಿಚಯಿಸಿದ್ದು, ಈ ಮೂಲಕ ಗ್ರಾಹಕರಿಗೆ ಹೊಸ ಬಣ್ಣ ಆಯ್ಕೆಗಳನ್ನು ನೀಡಿದೆ.

ಹೊಸ ಬಣ್ಣದ ಇಸುಝು ವಿ-ಕ್ರಾಸ್ ವಾಹನದ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಕಂಪನಿ ಮಾಡಿಲ್ಲ. ಪ್ರಸ್ತುತ ಡಿ-ಮ್ಯಾಕ್ಸ್ ವಿ-ಕ್ರಾಸ್ ಕಾರು ರೂ.13.16 ಲಕ್ಷ(ಎಕ್ಸ್ ಶೋರೂಂ ದೆಹಲಿ) ಬೆಲೆಯೊಂದಿಗೆ ಮಾರಾಟವಾಗುತ್ತಿದೆ. ಈಗ ಅಸ್ತಿತ್ವದಲ್ಲಿರುವ ಆರ್ಕಿಡ್ ಬ್ರೌನ್, ಕಾಸ್ಮಿಕ್ ಬ್ಲಾಕ್, ಟೈಟಾನಿಯಂ ಸಿಲ್ವರ್, ಒಬ್ಸಿಡಿಯನ್ ಗ್ರೇ ಮತ್ತು ಸ್ಪ್ಲಾಶ್ ವೈಟ್ ಜೊತೆ ಹೊಸ ಬಣ್ಣ ಸೇರ್ಪಡೆಯಾಗಿದೆ.

ಇಸುಝು ವಿ-ಕ್ರಾಸ್ ಸಾಮಾನ್ಯ ಡಬಲ್ ಕ್ಯಾಬ್ ಪಿಕಪ್ ಟ್ರಕ್ ಆಗಿರದೆ ಭಾರತದಲ್ಲಿ ಪಿಕಪ್ ಟ್ರಕ್ಕುಗಳಲ್ಲಿ ಕಾಣದ ವೈಶಿಷ್ಟ್ಯಗಳನ್ನು ಹೊಂದಿರುವ ಪ್ರೀಮಿಯಂ ವಾಹನವಾಗಿದ್ದು, ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.

ವಿ-ಕ್ರಾಸ್ ಕಾರು ಆಟೋ ಕ್ಲೈಮೇಟ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ನಿಯಂತ್ರಣ, 6 ರೀತಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್‌ನಂತಹ ಸಾಮಾನ್ಯ ವೈಶಿಷ್ಟ್ಯಗಳನ್ನು ಹೊಂದಿದೆ.

ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಒಂದು ಸಮರ್ಥವಾಗಿರುವ ಪಿಕಪ್ ಪ್ರೀಮಿಯಂ ಟ್ರಕ್ ಆಗಿದ್ದು, ಶಿಫ್ಟ್-ಆನ್-ದಿ-ಫ್ಲೈ 4WD ಸಿಸ್ಟಮ್ ಒಳಗೊಡಿದ್ದು, ಈ ಸಿಸ್ಟಮ್ 2ಹೆಚ್ ನಿಂದ 4ಹೆಚ್ ಮೋಡ್‌ಗೆ ಬದಲಿಸಲು ಅನುಮತಿ ನೀಡಲಿದೆ.

ಇನ್ನು ಈ ಕಾರಿನ ಎಂಜಿನ್ ಬಗ್ಗೆ ಹೇಳುವುದಾದರೆ, ಹೊಸ ಆವೃತ್ತಿಯ ಈ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೀಡಲಾಗಿದ್ದು, ಈ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ 2.5-ಲೀಟರ್ ಕಾರು 320 ಎನ್ಎಂ ತಿರುಗುಬಲದಲ್ಲಿ 134 ಬಿಎಚ್‌ಪಿ ಅಶ್ವಶಕ್ತಿ ಉತ್ಪಾದನೆ ಮಾಡಲಿದೆ.

ಅಡ್ವೆಂಚರ್ ಯುಟಿಲಿಟಿ ವೆಹಿಕಲ್ ಆಗಿರುವ ಈ ವಾಹನ ಡ್ಯೂಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್(ಬಿಎ) ಜೊತೆಗೆ ಮಗುವಿನ ಸೀಟಿನಲ್ಲಿ ಐಎಸ್ಐಎಫ್ಎಕ್ಸ್ ಆಂಕಾರೇಜ್ ಸೌಲಭ್ಯ ಪಡೆದುಕೊಂಡಿದೆ.


Click it and Unblock the Notifications








