ಜಾಗ್ವಾರ್ ಎಫ್-ಟೈಪ್ ಎಸ್‍ವಿಆರ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 2.45 ಕೋಟಿ
ಪ್ರಖ್ಯಾತ ಸೂಪರ್ ಕಾರು ತಯಾರಕ ಸಂಸ್ಥೆಯಾದ ಜಾಗ್ವಾರ್ ತನ್ನ ಎಫ್-ಟೈಪ್ ಎಸ್‍ವಿಆರ್ ಮಾದರಿಯ ಎರಡು ವಿನ್ಯಾಸದ ಕಾರುಗಳನ್ನು ಭಾರತದಲ್ಲಿ ಪ್ರಾರಂಭಿಸಿದ್ದು, ಈ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಪ್ರಖ್ಯಾತ ಸೂಪರ್ ಕಾರು ತಯಾರಕ ಸಂಸ್ಥೆಯಾದ ಜಾಗ್ವಾರ್ ತನ್ನ ಎಫ್-ಟೈಪ್ ಎಸ್‍ವಿಆರ್ ಮಾದರಿಯ ಎರಡು ವಿನ್ಯಾಸದ ಕಾರುಗಳನ್ನು ಭಾರತದಲ್ಲಿ ಪ್ರಾರಂಭಿಸಿದ್ದು, ಈ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಜಾಗ್ವಾರ್ ಎಫ್-ಟೈಪ್ ಎಸ್‍ವಿಆರ್ ಭಾರತದಲ್ಲಿ ಬಿಡುಗಡೆಯಾಗಿದೆ. ಜಗ್ವಾರ್ ಎಫ್-ಟೈಪ್ ಎಸ್‍ವಿಆರ್ ಕೂಪೆ ಕಾರುನ ಬೆಲೆ ರೂ.2.45 ಕೋಟಿ ಇದ್ದು, ಪರಿವರ್ತಿಸಬಹುದಾದ ಜಗ್ವಾರ್ ಎಫ್-ಟೈಪ್ ಎಸ್‍ವಿಆರ್ ಕಾರು ರೂ. 2.63 ಕೋಟಿ(ದೆಹಲಿ ಎಕ್ಸ್ ಶೋ ರೂಂ) ಬೆಲೆ ಪಡೆದುಕೊಂಡಿವೆ.

ಜಾಗ್ವಾರ್ ಎಫ್-ಟೈಪ್ ಎಸ್‍ವಿಆರ್ ಕಾರು 5.0 ಲೀಟರ್ ಸೂಪರ್‌ಚಾರ್ಜ್ಡ್ ವಿ8 ಎಂಜಿನ್ ಪಡೆದುಕೊಂಡಿದ್ದು, ಜಾಗ್ವಾರ್ ಸ್ಪೆಷಲ್ ವೆಹಿಕಲ್ಸ್ ಅಪರೇಷನ್ಸ್ ವಿಭಾಗವು ಈ ವಿಶಿಷ್ಟ ರೀತಿಯ ಎಂಜಿನ್ ಅಭಿವೃದ್ಧಿಪಡಿಸಿದೆ.

ಈ ಕಾರು, 6,500 ಆರ್‌ಪಿಎಂನಲ್ಲಿ 567 ಬಿಎಚ್‌ಪಿ ಮತ್ತು 3,500 ಆರ್‌ಪಿಎಂನಲ್ಲಿ 700 ಏನ್‌ಎಂ ಟಾರ್ಕ್ ಉತ್ಪಾದಿಸುತ್ತದೆ ಹಾಗು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡಿದೆ.

ಎಫ್-ಟೈಪ್ ಎಸ್‍ವಿಆರ್ ಕೂಪೆ ಕಾರು ಕೇವಲ 3.7 ಸೆಕೆಂಡ್‌ಗಳಲ್ಲಿ 100 ಕಿಲೋಮೀಟರ್ ತಲುಪುವಷ್ಟು ಬಲಿಷ್ಠವಾಗಿದ್ದು, ಮುಂದುವರೆದಂತೆ ಗರಿಷ್ಠ 322 ಕಿಲೋಮೀಟರ್ ವೇಗ ಪಡೆದುಕೊಳ್ಳಬಹುದಾಗಿದೆ.

ಇನ್ನು ಪರಿವರ್ತಿಸಬಹುದಾದ ಜಗ್ವಾರ್ ಎಫ್-ಟೈಪ್ ಎಸ್‍ವಿಆರ್ ಕಾರು ಸಹ 3.7 ಸೆಕೆಂಡ್‌ಗಳಲ್ಲಿ 100 ಕಿಲೋಮೀಟರ್ ತಲುಪುವಷ್ಟು ಬಲಿಷ್ಠವಾಗಿದ್ದು, ಮುಂದುವರೆದಂತೆ ಗರಿಷ್ಠ 314 ಕಿಲೋಮೀಟರ್ ವೇಗ ಪಡೆದುಕೊಳ್ಳಬಹುದಾಗಿದೆ ಹಾಗು ಎರಡೂ ಕಾರುಗಳು ಸಹ 20 ಇಂಚಿನ ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ.

ಟೈಟಾನಿಯಂನಿಂದ ತಯಾರಿಸಿದ ಹಗುರವಾದ ಎಕ್ಸಾಸ್ಟ್ ಸಿಸ್ಟಮ್ ಸೇರಿದಂತೆ ಸಾಕಷ್ಟು ಹೆಚ್ಚುವರಿ ವೈಶಿಷ್ಟ್ಯತೆಗಳನ್ನು ಎಫ್-ಟೈಪ್ ಎಸ್‍ವಿಆರ್ ಕಾರನ್ನು ಒಳಗೊಂಡಿದೆ ಹಾಗು ಪರಿಷ್ಕೃತಗೊಂಡ ಏರೋಡೈನಾಮಿಕ್ ಹಾಗು ಹಿಂಭಾಗದಲ್ಲಿ ಸ್ಥಿರ ಕಾರ್ಬನ್-ಫೈಬರ್ ವಿಂಗ್ ನೋಡಬಹುದಾಗಿದೆ.


Click it and Unblock the Notifications








