4000 ಬುಕ್ಕಿಂಗ್ ಗುರಿ ತಲುಪಿದ ಜೀಪ್ ಕಂಪಾಸ್ ಎಸ್‌ಯುವಿ ಕಾರು

Written By:

ಭಾರತದ ವಿಶೇಷ ಆವೃತಿಯಾದ 2017 ಜೀಪ್ ಕಂಪಾಸ್ ಕಾರು ಈಗಾಗಲೇ ಸಾಕಷ್ಟು ಸಂಚಲನ ಉಂಟು ಮಾಡಿದ್ದು, ಜೂನ್ ತಿಂಗಳಿನಲ್ಲಿ ಕಾರು 1,000 ಬುಕಿಂಗ್ ಪಡೆದುಕೊಂಡಿದೆ ಎಂಬ ವರದಿ ಬಂದಿದೆ.

To Follow DriveSpark On Facebook, Click The Like Button
4000 ಬೂಕಿಂಗ್ಸ್ ಗುರಿ ತಲುಪಿದ ಜೀಪ್ ಕಂಪಾಸ್ ಎಸ್‌ಯುವಿ ಕಾರು

ಇತ್ತೀಚಿನ ವರದಿಗಳ ಪ್ರಕಾರ 2017 ಜೀಪ್ ಕಂಪಾಸ್ ಕಾರು ಈಗಾಗಲೇ 4000ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿದ್ದು, ಇದು ಪ್ರೀಮಿಯಂ ಎಸ್‌ಯುವಿ ವಿಭಾಗದಲ್ಲಿ ಪ್ರಭಾವಿ ಸಂಖ್ಯೆ ಎಂದು ಪರಿಗಣಿಸಲಾಗಿದೆ.

4000 ಬೂಕಿಂಗ್ಸ್ ಗುರಿ ತಲುಪಿದ ಜೀಪ್ ಕಂಪಾಸ್ ಎಸ್‌ಯುವಿ ಕಾರು

ಕಂಪಾಸ್ ಎಸ್‌ಯುವಿ ಕಾರು ಭಾರತದಲ್ಲಿಯೇ ಅಗ್ಗವಾದ ವಾಹನದ ಎಂಬ ಖ್ಯಾತಿ ಪಡೆದುಕೊಂಡಿದ್ದು, ಕಂಪನಿಯು ಫಿಯೆಟ್ ಸಹಭಾಗಿತ್ವದೊಂದಿಗೆ ಮಾರಾಟ ಜಾಲವನ್ನು ವಿಸ್ತರಿಸುವ ಬಗ್ಗೆ ಹೆಚ್ಚು ಗಮನಹರಿಸಿದೆ.

4000 ಬೂಕಿಂಗ್ಸ್ ಗುರಿ ತಲುಪಿದ ಜೀಪ್ ಕಂಪಾಸ್ ಎಸ್‌ಯುವಿ ಕಾರು

ಜೀಪ್ ಕಂಪಾಸ್ ಕಾರನ್ನು ಜುಲೈ31 ರಂದು ಭಾರತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಬಿಡುಗಡೆಯ ನಂತರ ಈ ಕಾರು ಹುಂಡೈ ಟಕ್ಸನ್, ಮಹೀಂದ್ರಾ ಮತ್ತು ಟಾಟಾ ಹೆಕ್ಸಾ XUV500 ಕಾರುಗಳೊಂದಿಗೆ ಪ್ರಬಲ ಹೋರಾಟ ನೀಡುವ ನಿರೀಕ್ಷೆ ಇದೆ.

4000 ಬೂಕಿಂಗ್ಸ್ ಗುರಿ ತಲುಪಿದ ಜೀಪ್ ಕಂಪಾಸ್ ಎಸ್‌ಯುವಿ ಕಾರು

ಕಾರಿನ ಹೊರಭಾಗದ ವಿಚಾರದಲ್ಲಿ, ಗ್ರ್ಯಾಂಡ್ ಚೆರೋಕಿ ಕಾರಿನ ಸಣ್ಣ ಆವೃತ್ತಿಯಂತೆ ತೋರುತ್ತಿದೆ. ಈ ಕಾರು ಹೆಚ್ಐಡಿ ಲ್ಯಾಂಪುಗಳ, 17 ಇಂಚಿನ ಮಿಶ್ರಲೋಹದ ಚಕ್ರಗಳು ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಮತ್ತು 221 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

4000 ಬೂಕಿಂಗ್ಸ್ ಗುರಿ ತಲುಪಿದ ಜೀಪ್ ಕಂಪಾಸ್ ಎಸ್‌ಯುವಿ ಕಾರು

ಒಳಭಾಗದಲ್ಲಿ ಪ್ರೀಮಿಯಂ ಚರ್ಮದ ಸೀಟುಗಳು ಹೊಂದಿದ್ದು, 7 ಇಂಚಿನ ಟಿವಿ ವ್ಯವಸ್ಥೆ, ಆಪಲ್ ಕಾರ್‌ಪ್ಲೇ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ವಿದ್ಯುತ್ ಪಾರ್ಕಿಂಗ್ ಬ್ರೇಕ್ ಮತ್ತು ಗಾಜಿನ ಸನ್ರೂಫ್ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

4000 ಬೂಕಿಂಗ್ಸ್ ಗುರಿ ತಲುಪಿದ ಜೀಪ್ ಕಂಪಾಸ್ ಎಸ್‌ಯುವಿ ಕಾರು

ಭಾರತ ದೇಶಕ್ಕೆ ತಕ್ಕಂತೆ ಈ ಕಾರನ್ನು ವಿನ್ಯಾಸಗೊಳಿಸಲಾಗಿದ್ದು, ಕಂಪಾಸ್ ಎಸ್‌ಯುವಿ ಕಾರು 1.4-ಲೀಟರ್ ಮಲ್ಟಿಏರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 2.0-ಲೀಟರ್ ಮಲ್ಟಿಜೆಟ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಎಂಬ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ.

4000 ಬೂಕಿಂಗ್ಸ್ ಗುರಿ ತಲುಪಿದ ಜೀಪ್ ಕಂಪಾಸ್ ಎಸ್‌ಯುವಿ ಕಾರು

ಪೆಟ್ರೋಲ್ ಆವೃತ್ತಿಯು 162 ಬಿಎಚ್‌ಪಿ ಗರಿಷ್ಠ ಶಕ್ತಿ ಮತ್ತು 250 ಎನ್ಎಮ್ ಟಾರ್ಕ್ ಉತ್ಪಾದಿಸುತ್ತದೆ. ಇನ್ನು, ಡೀಸೆಲ್ ವಿದ್ಯುತ್ ಘಟಕ 173 ಬಿಎಚ್‌ಪಿ ಗರಿಷ್ಠ ಶಕ್ತಿ ಮತ್ತು 350 ಎನ್ಎಮ್ ಟಾರ್ಕ್ ಉತ್ಪಾದಿಸುತ್ತದೆ.

Read more on ಜೀಪ್ jeep
English summary
In June, the company reported that it has received 1,000 pre-bookings, which is considered to be an impressive number in the premium SUV segment.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark