ಟೊಯೋಟಾ ಲಗ್ಷುರಿ ಬ್ರಾಂಡ್ 'ಲೆಕ್ಸಸ್' ಭಾರತಕ್ಕೆ ಯಾವಾಗ ಎಂಟ್ರಿ ಕೊಡುತ್ತೆ ಗೊತ್ತ...?

ಮಾರ್ಚ್ ನಲ್ಲಿ ಲೆಕ್ಸಸ್ ಬ್ರಾಂಡ್ ನ ಎರಡು ಎಸ್.ಯು.ವಿ ಮತ್ತು ಒಂದು ಸೆಡಾನ್ ಮಾದರಿಯ ಕಾರುಗಳನ್ನು ಹೊರತರಲು ಟೊಯೋಟಾ ಕಂಪನಿ ಯೋಜನೆ ರೂಪಿಸಿಕೊಂಡಿದೆ.

By Girish

ಟೊಯೋಟಾ ಕಂಪನಿಯ ಲಕ್ಸುರಿ ಬ್ರಾಂಡ್ ಲೆಕ್ಸಸ್ ಸದ್ಯದರಲ್ಲೇ ಭಾರತಕ್ಕೆ ಎಂಟ್ರಿ ಕೊಡಲು ಸಿದ್ಧತೆ ಮಾಡಿಕೊಂಡಿದೆ. ಬಲ್ಲ ಮೂಲಗಳ ಪ್ರಕಾರ ಈ ವರ್ಷದ ಮಾರ್ಚ್ 24 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ.

ಟೊಯೋಟಾ ಲಗ್ಷುರಿ ಬ್ರಾಂಡ್ 'ಲೆಕ್ಸಸ್' ಭಾರತಕ್ಕೆ ಯಾವಾಗ ಎಂಟ್ರಿ ಕೊಡುತ್ತೆ ಗೊತ್ತ...?

ಲೆಕ್ಸಸ್ ಭಾರತಕ್ಕೆ ಮೂರು ಮಾದರಿಗಳಲ್ಲಿ ಎಂಟ್ರಿ ಕೊಡಲಿದ್ದು ಅದರಲ್ಲಿ ಎರಡು ಎಸ್.ಯು.ವಿ ಮತ್ತು ಒಂದು ಸೆಡಾನ್ ಮಾದರಿಯ ಕಾರು ಒಳಗೊಂಡಿರುತ್ತದೆ. ಸದ್ಯ, ಎರಡೂ ಎಸ್.ಯು.ವಿ ಕಾರುಗಳು ಆರ್.ಎಕ್ಸ್ 450ಎಚ್ ಮತ್ತು ಎಲ್ಎಕ್ಸ್ ಮಾದರಿಯಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಸೆಡಾನ್ ಮಾದರಿಯಲ್ಲಿಲೆಕ್ಸಸ್ ಇಎಸ್300ಎಚ್ ಮಾದರಿಯ ಕಾರು ಬಿಡುಗಡೆಗೊಳ್ಳುತ್ತಿದೆ.

ಟೊಯೋಟಾ ಲಗ್ಷುರಿ ಬ್ರಾಂಡ್ 'ಲೆಕ್ಸಸ್' ಭಾರತಕ್ಕೆ ಯಾವಾಗ ಎಂಟ್ರಿ ಕೊಡುತ್ತೆ ಗೊತ್ತ...?

ಐಷಾರಾಮಿ ಗ್ರಾಹಕರಿಗಂತೂ ಇದು ಸುಗ್ಗಿಯ ಕಾಲವಾಗಿರಲಿದೆ. ಇಡೀ ವಿಶ್ವದಲ್ಲೇ ಟೊಯೊಟಾದ ಲೆಕ್ಸಸ್ ಐಷಾರಾಮಿ ಕ್ರೀಡಾ ಬಳಕೆಯ ವಾಹನಗಳಿಗೆ ಅತೀವ ಬೇಡಿಕೆ ಬಂದಿದೆ.

ಟೊಯೋಟಾ ಲಗ್ಷುರಿ ಬ್ರಾಂಡ್ 'ಲೆಕ್ಸಸ್' ಭಾರತಕ್ಕೆ ಯಾವಾಗ ಎಂಟ್ರಿ ಕೊಡುತ್ತೆ ಗೊತ್ತ...?

ಈಗ ಬಿಡುಗಡೆಗೊಳ್ಳುತ್ತಿರುವ ಲೆಕ್ಸಸ್ ಸೆಡಾನ್ ಇಎಸ್300ಎಚ್ ಮಾದರಿಯ ಕಾರು ಹೆಚ್ಚು ಕಡಿಮೆ ಟೊಯೋಟಾ ಕಂಪನಿಯ ಮತ್ತೊಂದು ಐಷಾರಾಮಿ ಕಾರು ಕ್ಯಾಮ್ರಿಯ ಹೈಬ್ರಿಡ್ ಮಾದರಿ ಎನ್ನಬಹುದು.

ಟೊಯೋಟಾ ಲಗ್ಷುರಿ ಬ್ರಾಂಡ್ 'ಲೆಕ್ಸಸ್' ಭಾರತಕ್ಕೆ ಯಾವಾಗ ಎಂಟ್ರಿ ಕೊಡುತ್ತೆ ಗೊತ್ತ...?

ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರು ಜೋಡಣೆಯೊಂದಿಗೆ ಹೊರ ಬರುತ್ತಿರುವ ಆರ್.ಎಕ್ಸ್ 450ಎಚ್ ಹೈಬ್ರಿಡ್ 3.5-ಲೀಟರ್ ಮಾದರಿಯ ಕಾರಿನ ಬೆಲೆ ತಾತ್ಕಾಲಿಕವಾಗಿ ರೂ. 1.17 ಕೋಟಿ ನಿಗದಿಪಡಿಸಲಾಗಿದೆ. ಈ ಹೈಬ್ರಿಡ್ ಕಾರು ಅಂತೆಯೇ ಸಿವಿಟಿ ಗೇರ್ ಬಾಕ್ಸ್ ಮುಖಾಂತರ ಎಲ್ಲ ನಾಲ್ಕು ಚಕ್ರಗಳಿಗೆ ಶಕ್ತಿ ರವಾನೆಯಾಗಲಿದೆ, 304 ಅಶ್ವಶಕ್ತಿ ಉತ್ಪಾದಿಸುವಷ್ಟು ಶಕ್ತಿ ಹೊಂದಿದೆ.

ಟೊಯೋಟಾ ಲಗ್ಷುರಿ ಬ್ರಾಂಡ್ 'ಲೆಕ್ಸಸ್' ಭಾರತಕ್ಕೆ ಯಾವಾಗ ಎಂಟ್ರಿ ಕೊಡುತ್ತೆ ಗೊತ್ತ...?

ಇನ್ನು ಲೆಕ್ಸಸ್ ಎಲ್ಎಕ್ಸ್ ಐಷಾರಾಮಿ ಕ್ರೀಡಾ ಬಳಕೆಯ ವಾಹನ (ಎಸ್ ಯುವಿ) ವಿಚಾರಕ್ಕೆ ಬರುವುದಾದರೆ ಈ ಎಸ್ ಯುವಿ ಕಾರುಗಳಲ್ಲಿ ಟೊಯೋಟಾ ಕಂಪನಿಯ ಲ್ಯಾಂಡ್ ಕ್ರೂಸರ್ ಕಾರಿನ ಎಂಜಿನ್ ಬಳಸಲಾಗುತ್ತಿದೆ.

ಟೊಯೋಟಾ ಲಗ್ಷುರಿ ಬ್ರಾಂಡ್ 'ಲೆಕ್ಸಸ್' ಭಾರತಕ್ಕೆ ಯಾವಾಗ ಎಂಟ್ರಿ ಕೊಡುತ್ತೆ ಗೊತ್ತ...?

ಎಸ್ ಯುವಿ ಎಲ್ಎಕ್ಸ್ 450ಡಿ ಕಾರು ಅತ್ಯುತ್ತಮವಾದ ಟ್ವಿನ್ ಟರ್ಬೊ 4.5-ಲೀಟರ್ಸ್ ವಿ8 ಇಂಜಿನ್ ತಂತ್ರಜ್ಞಾನ ಹೊಂದಿದ್ದು 650 ಎನ್ಎಂ ತಿರುಗುಬಲದಲ್ಲಿ 265 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಟೊಯೋಟಾ ಲಗ್ಷುರಿ ಬ್ರಾಂಡ್ 'ಲೆಕ್ಸಸ್' ಭಾರತಕ್ಕೆ ಯಾವಾಗ ಎಂಟ್ರಿ ಕೊಡುತ್ತೆ ಗೊತ್ತ...?

ಎಲ್ಎಕ್ಸ್ 570ಡಿ ಕಾರು 5.7-ಲೀಟರ್ಸ್ ವಿ8 ಇಂಜಿನ್ ತಂತ್ರಜ್ಞಾನ ಹೊಂದಿದ್ದು 546 ಎನ್ಎಂ ತಿರುಗುಬಲದಲ್ಲಿ 378 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಎಸ್ ಯುವಿ ಎಲ್ಎಕ್ಸ್ 450ಡಿ ಯ ಬೆಲೆ ರೂ. 2 ಕೋಟಿ ಮತ್ತು ಎಸ್ ಯುವಿ ಎಲ್ಎಕ್ಸ್ 570ಡಿ ನ ಬೆಲೆ ರೂ.2.15 ನಿಗದಿಪಡಿಸಲಾಗಿದೆ.

ಟೊಯೋಟಾ ಲಗ್ಷುರಿ ಬ್ರಾಂಡ್ 'ಲೆಕ್ಸಸ್' ಭಾರತಕ್ಕೆ ಯಾವಾಗ ಎಂಟ್ರಿ ಕೊಡುತ್ತೆ ಗೊತ್ತ...?

ವಿವಿಧ ಚಾಲನಾ ಪರಿಸ್ಥಿತಿಗೆ ಹೊಂದಿಕೆಯಾಗುವ ಡ್ರೈವಿಂಗ್ ಮೋಡ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಹೊಂದಾಣಿಸುವ ಸ್ಟೀರಿಂಗ್ ವಿಲ್, ಹೀಟಡ್ ಸೀಟು, ಎಲ್ ಇಡಿ ಹೆಡ್ ಲ್ಯಾಂಪ್, ರಿವರ್ಸ್ ಕ್ಯಾಮೆರಾ ಇತ್ಯಾದಿ ಸೌಲಭ್ಯಗಳನ್ನು ಪಡೆಯಲಿದೆ.

ಟೊಯೋಟಾ ಲಗ್ಷುರಿ ಬ್ರಾಂಡ್ 'ಲೆಕ್ಸಸ್' ಭಾರತಕ್ಕೆ ಯಾವಾಗ ಎಂಟ್ರಿ ಕೊಡುತ್ತೆ ಗೊತ್ತ...?

ಇನ್ನುಳಿದಂತೆ ಸನ್ ರೂಫ್, ಪಾರ್ಕ್ ಅಸಿಸ್ಟ್ ಜೊತೆ ಆಟೋ ಬ್ರೇಕಿಂಗ್, ಇನ್ಪೋಟೈನ್ಮೆಂಟ್ ಜೊತೆ ನೇವಿಗೇಷನ್ ವ್ಯವಸ್ಥೆಯು ದೊರಕಲಿದೆ.ಸುರಕ್ಷತೆಯತ್ತ ಗಮನ ಹಾಯಿಸಿದಾಗ ಏರ್ ಬ್ಯಾಗ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಇತ್ಯಾದಿ ವ್ಯವಸ್ಥೆಗಳನ್ನು ಪಡೆಯಲಿದೆ. ಲೆಕ್ಸನ್ ನೂತನ ಎಸ್ ಯುವಿ ಪ್ರಮುಖವಾಗಿಯೂ ಮರ್ಸಿಡಿಸ್ ಜಿಎಲ್ ಸಿ, ಆಡಿ ಕ್ಯೂ5 ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ. ಪ್ರತಿಸ್ಪರ್ಧಿಗಳನ್ನು ಹೋಲಿಸಿದಾಗ ದೇಶದಲ್ಲಿ ಲೆಕ್ಸಸ್ ಹೈಬ್ರಿಡ್ ಕಾರು ಕೊಂಚ ದುಬಾರಿ ಎನ್ನಬಹುದು.

ಲೆಕ್ಸಸ್ LS500 ಇತ್ತೀಚಿನ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಫೋಟೋ ಗ್ಯಾಲರಿ ಕ್ಲಿಕ್ ಮಾಡಿ.

Most Read Articles

Kannada
English summary
Lexus is set to enter India in the very near future and will arrive with three new cars — two SUVs and a sedan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X