48ವಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸಲಿದೆ ಮಹೀಂದ್ರಾ..!

Written By:

ಅತಿಹೆಚ್ಚು ಶಕ್ತಿ ಉತ್ಪಾದನಾ ಸಾಮರ್ಥ್ಯ ಹೊಂದಿರುವ 48 ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸಲು ಮುಂದಾಗಿರುವ ಮಹೀಂದ್ರಾ ಸಂಸ್ಥೆಯು, ಮುಂಬರುವ ಹೈಬ್ರಿಡ್ ಮಾದರಿಗಳನ್ನು ಉನ್ನತಿಕರಿಸುವ ಯೋಜನೆ ಹೊಂದಿದೆ.

48ವಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸಲಿದೆ ಮಹೀಂದ್ರಾ..!

ಸದ್ಯ ಮಹೀಂದ್ರಾ ಕಾರು ಮಾದರಿಗಳಾದ ಸ್ಕಾರ್ಪಿಯೋ ಮತ್ತು ಎಕ್ಸ್‌ಯುವಿ 500ನಲ್ಲಿ 12ವಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ವ್ಯವಸ್ಥೆ ಅಳವಡಿಕೆ ಇದ್ದು, ಮುಂಬರುವ ಹೈಬ್ರಿಡ್ ಮಾದರಿಗಳು 48ವಿ ಮೈಲ್ಡ್ ತಂತ್ರಜ್ಞಾನವನ್ನು ಪಡೆದುಕೊಳ್ಳಲಿವೆ.

48ವಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸಲಿದೆ ಮಹೀಂದ್ರಾ..!

48ವಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಅಳವಡಿಕೆಯಾದಲ್ಲಿ ಕಾರಿನ ಮೈಲೇಜ್ ಮತ್ತು ಇಂಧನ ಕಾರ್ಯಕ್ಷಮತೆ ಹೆಚ್ಚಲಿದ್ದು, ಇದು ಗ್ರಾಹಕರಿಗೂ ವರದಾನವಾಗಲಿದೆ.

48ವಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸಲಿದೆ ಮಹೀಂದ್ರಾ..!

ಮೈಲ್ಡ್ ಹೈಬ್ರಿಡ್ ಕಾರು ಮಾದರಿಗಳಲ್ಲಿ ನಿರ್ದಿಷ್ಟ ಪ್ರಮಾಣದ ದೂರದವರೆಗೆ ಸಾಗಿದ ನಂತರ ಎಂಜಿನ್ ಮೂಡ್‌ ಪ್ರಕ್ರಿಯೆಗಳು ಬದಲಾಗಲಿದ್ದು, ಎಲೆಕ್ಟ್ರಿಕ್‌ನಿಂದ ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ ಕಾರ್ಯನಿರ್ವಹಿಸುತ್ತದೆ.

48ವಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸಲಿದೆ ಮಹೀಂದ್ರಾ..!

ಹೀಗಾಗಿಯೇ ಅತ್ಯುತ್ತಮ ಗುಣಮಟ್ಟದ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸಲು ಮುಂದಾಗಿರುವ ಮಹೀಂದ್ರಾ, ಸದ್ಯ ಜಾರಿಯಾಗಿರುವ ಜಿಎಸ್‌ಟಿ ಕಾಯ್ದೆಗೆ ಪೂರಕವಾಗಿ ಕಾರ್ಯನಿರ್ವಹಿಸಲಿದೆ.

48ವಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸಲಿದೆ ಮಹೀಂದ್ರಾ..!

ಇನ್ನು ಜಿಎಸ್‌ಟಿ ಪ್ರಕಾರ ಹೈಬ್ರಿಡ್ ಕಾರುಗಳ ಮೇಲಿನ ಶೇಕಡಾ 44ರಷ್ಟಿದ್ದ ತೆರಿಗೆಯನ್ನು ಶೇ.30.3ಕ್ಕೆ ಇಳಿಕೆ ಮಾಡಲಾಗಿದ್ದು, 48 ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಮಹೀಂದ್ರಾ ಸ್ಕಾರ್ಪಿಯೋ ಮತ್ತು ಎಕ್ಸ್‌ಯುವಿ 500 ಮಾದರಿಗಳಿಗೆ ಮತ್ತಷ್ಟು ಶಕ್ತಿ ತುಂಬಲಿವೆ.

English summary
Read in Kannada about Mahindra Developing 48V Mild-Hybrid Technology.
Story first published: Friday, July 7, 2017, 18:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark