ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಕಾರು ಬಿಡುಗಡೆ- ಆರಂಭಿಕ ಕಾರಿನ ಬೆಲೆ ರೂ.4.39 ಲಕ್ಷ..!!

ಸಣ್ಣ ಗಾತ್ರದ ಎಸ್‌ಯುವಿ ಕಾರು ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿರುವ ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಮಾದರಿಯು ಬಿಡುಗಡೆಗೊಂಡಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

By Praveen

ಸಣ್ಣ ಗಾತ್ರದ ಎಸ್‌ಯುವಿ ಕಾರು ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿರುವ ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಮಾದರಿಯು ಬಿಡುಗಡೆಗೊಂಡಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

 ಬಹುನೀರಿಕ್ಷಿತ ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಕಾರು ಬಿಡುಗಡೆ

ದೇಶಿಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಜನಪ್ರಿಯಗೊಂಡಿರುವ ಮಹೀಂದ್ರಾ ಸಂಸ್ಥೆಯು ಇದೀಗ ಎಸ್‌ಯುವಿ ವಿಭಾಗಕ್ಕೆ ಮತ್ತೊಂದು ಹೊಸ ಆವೃತ್ತಿಯನ್ನು ಪರಿಚಯಿಸಿದ್ದು, ಹೊಸ ಕಾರಿನ ಆರಂಭಿಕ ಆವೃತ್ತಿಯ ಬೆಲೆಯು ರೂ. 4.39 ಲಕ್ಷಕ್ಕೆ ಹಾಗೂ ಉನ್ನತ ಆವೃತ್ತಿಯ ಬೆಲೆಯು 7.33 ಲಕ್ಷಕ್ಕೆ ಖರೀದಿಸಬಹುದಾಗಿದೆ.

 ಬಹುನೀರಿಕ್ಷಿತ ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಕಾರು ಬಿಡುಗಡೆ

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೆಯುವಿ100 ನೆಕ್ಸ್ಟ್ ಆವೃತ್ತಿಯಲ್ಲಿ ಕೆ2, ಕೆ2 ಪ್ಲಸ್, ಕೆ4 ಪ್ಲಸ್, ಕೆ6 ಪ್ಲಸ್, ಕೆ8 ಎಂಬ ವಿವಿಧ ಮಾದರಿಗಳನ್ನು ಪರಿಚಯಿಸಲಾಗಿದ್ದು, ಬೆಲೆಗೆ ಅನುಗುಣವಾಗಿ ಉನ್ನತ ಶ್ರೇಣಿಯ ತಂತ್ರಜ್ಞಾನ ವ್ಯವಸ್ಥೆಗಳನ್ನು ಪಡೆದುಕೊಂಡಿವೆ.

Recommended Video

Mahindra XUV Aero Concept First Look - Interior, Specs, Features | DriveSpark
 ಬಹುನೀರಿಕ್ಷಿತ ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಕಾರು ಬಿಡುಗಡೆ

ಇದಲ್ಲದೇ ಕೆಯುವಿ100 ನೆಕ್ಸ್ಟ್ ಆವೃತ್ತಿಗಳು ಡೀಸೆಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಮೈಕ್ರೊ ಹೈಬ್ರಿಡ್ ತಂತ್ರಜ್ಞಾನ ಬಳಕೆ ಮಾಡಿ ಎಂಜಿನ್ ಅಭಿವೃದ್ಧಿ ಮಾಡಲಾಗಿದೆ.

 ಬಹುನೀರಿಕ್ಷಿತ ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಕಾರು ಬಿಡುಗಡೆ

ಕಾರು ಮಾದರಿಗಳು ಬೆಲೆ (ಪೆಟ್ರೋಲ್ ಆವೃತ್ತಿ) ಬೆಲೆ (ಡಿಸೇಲ್ ಆವೃತ್ತಿ)
ಕೆ2 ರೂ. 4.39 ಲಕ್ಷ ರೂ. 5.39 ಲಕ್ಷ
ಕೆ2 ಪ್ಲಸ್ ರೂ. 4.79 ಲಕ್ಷ ರೂ. 5.63 ಲಕ್ಷ
ಕೆ4 ಪ್ಲಸ್ ರೂ. 5.24 ಲಕ್ಷ ರೂ. 6.11 ಲಕ್ಷ
ಕೆ6 ಪ್ಲಸ್ ರೂ. 6.04 ಲಕ್ಷ ರೂ. 6.95 ಲಕ್ಷ
ಕೆ8 ರೂ. 6.40 ಲಕ್ಷ ರೂ. 7.33 ಲಕ್ಷ

 ಬಹುನೀರಿಕ್ಷಿತ ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಕಾರು ಬಿಡುಗಡೆ

ಎಂಜಿನ್ ಸಾಮರ್ಥ್ಯ

ಕೆಯುವಿ100 ನೆಕ್ಸ್ಟ್ ಆವೃತ್ತಿಗಳು 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.2-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಮಾದರಿಗಳು 82-ಬಿಎಚ್‌ಪಿ, 115-ಎನ್ಎಂ ಟಾರ್ಕ್ ಮತ್ತು ಡೀಸೆಲ್ ಆವೃತ್ತಿಗಳು 77-ಬಿಎಚ್‌ಪಿ, 190-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

 ಬಹುನೀರಿಕ್ಷಿತ ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಕಾರು ಬಿಡುಗಡೆ

ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದ್ದು, ಕ್ರೋಮ್ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್‌ಇಡಿ ಡಿಆರ್‌ಎಲ್ಎಸ್, ಕ್ಲಿಯರ್ ಲೆನ್ಸ್ ಟೈಲ್‌ಮ್ಯಾಪ್, ಡ್ಯುಯಲ್ ಏರ್‌ಬ್ಯಾಗ್, ಅಲಾಯ್ ಚಕ್ರಗಳನ್ನು ಹೊಂದಿರುವುದು ಖರೀದಿಗೆ ಉತ್ತಮವಾಗಿದೆ.

 ಬಹುನೀರಿಕ್ಷಿತ ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಕಾರು ಬಿಡುಗಡೆ

ಇನ್ನೊಂದು ಪ್ರಮುಖ ವಿಚಾರವೆಂದರೆ ಮುಂದಿನ ವರ್ಷ ಇದೇ ಆವೃತ್ತಿಯು ಎಲೆಕ್ಟ್ರಿಕ್ ಎಂಜಿನ್‌ನಲ್ಲೂ ಲಭ್ಯವಾಗುವ ಬಗ್ಗೆ ಮಹೀಂದ್ರಾ ಸುಳಿವು ನೀಡಿದ್ದು, ಎಬಿಎಸ್, ಇಬಿಡಿ, 7-ಇಂಚಿನ ಟಚ್ ಸ್ಕ್ರಿನ್ ಇನ್ಪೋಟೈನ್‌ಮೆಂಟ್ ವ್ಯವಸ್ಥೆ ಇರಿಸಿರುವುದು ಕೆಯುವಿ100 ನೆಕ್ಸ್ಟ್ ಆವೃತ್ತಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗಿದೆ.

 ಬಹುನೀರಿಕ್ಷಿತ ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಕಾರು ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಹಿಂದೆ ಕೆಯುವಿ100 ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದ ಮಹೀಂದ್ರಾ ಸಂಸ್ಥೆಯು ಇದೀಗ ನೂತನ ತಂತ್ರಜ್ಞಾನವನ್ನು ಹೊಂದಿರುವ ಕೆಯುವಿ100 ನೆಕ್ಸ್ಟ್ ಆವೃತ್ತಿಯನ್ನು ಪರಿಚಯಿಸುತ್ತಿದ್ದು, ಸಣ್ಣ ಗಾತ್ರದ ಎಸ್‌ಯುವಿ ಮಾದರಿಯಲ್ಲಿ ಅತ್ಯುತ್ತಮ ಮಾದರಿಯಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.

Most Read Articles

Kannada
English summary
Read in Kannada about Mahindra KUV100 NXT Launched In India. Prices Start At Rs 4.39 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X