ಬಿಡುಗಡೆಗಾಗಿ ಸಿದ್ಧಗೊಂಡ ಮಹೀಂದ್ರಾ ಟಿಯುವಿ300 ಪ್ಲಸ್ ಸ್ಪೆಷಲ್ ಏನು?

Written By:

ಎಸ್‌ಯುವಿ ಕಾರುಗಳ ವಿಭಾಗದಲ್ಲಿ ತನ್ನದೇ ಪ್ರಾಬಲ್ಯ ಹೊಂದಿರುವ ಮಹೀಂದ್ರಾ ಸಂಸ್ಥೆಯು ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ಉದ್ದೇಶದೊಂದಿಗೆ ಟಿಯುವಿ300 ಪ್ಲಸ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ತಾಂತ್ರಿಕ ಮಾಹಿತಿಗಳು ಇಲ್ಲಿವೆ.

To Follow DriveSpark On Facebook, Click The Like Button
ಬಿಡುಗಡೆಗಾಗಿ ಸಿದ್ಧಗೊಂಡ ಮಹೀಂದ್ರಾ ಟಿಯುವಿ300 ಪ್ಲಸ್ ಸ್ಪೆಷಲ್ ಏನು?

ಟಿಯುವಿ 500 ಶ್ರೇಣಿಗಳ ಮೂಲಕ ಈಗಾಗಲೇ ಎಸ್‌ಯುವಿ ವಿಭಾಗದಲ್ಲಿ ಹೊಸ ಅಲೆ ಸೃಷ್ಠಿಸಿರುವ ಮಹೀಂದ್ರಾ ಸಂಸ್ಥೆಯು, ಇದೀಗ ಟಿಯುವಿ300 ಪ್ಲಸ್ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದ್ದು ಹಲವು ವಿಶೇಷತೆ ಕಾರಣವಾಗಿದೆ.

ಬಿಡುಗಡೆಗಾಗಿ ಸಿದ್ಧಗೊಂಡ ಮಹೀಂದ್ರಾ ಟಿಯುವಿ300 ಪ್ಲಸ್ ಸ್ಪೆಷಲ್ ಏನು?

ಈ ಹಿಂದೆ ಟಿಯುವಿ 300 ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿದ್ದ ಮಹೀಂದ್ರಾ ಸಂಸ್ಥೆಯು, ಟಿಯುವಿ300 ಬಿಡುಗಡೆಗೂ ಮುನ್ನವೇ ಟಿಯುವಿ300 ಪ್ಲಸ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

ಬಿಡುಗಡೆಗಾಗಿ ಸಿದ್ಧಗೊಂಡ ಮಹೀಂದ್ರಾ ಟಿಯುವಿ300 ಪ್ಲಸ್ ಸ್ಪೆಷಲ್ ಏನು?

ಹೀಗಾಗಿ ಹೊಸ ಕಾರಿನ ಎಂಜಿನ್ 1.5-ಲೀಟರ್ ಅಥವಾ 2.2-ಲೀಟರ್ ಡೀಸೆಲ್ ಎಂಜಿನ್ ಹೊಂದಿರಬಹುದೆಂದು ಅಂದಾಜಿಸಲಾಗಿದ್ದು, ಬಹುತೇಕ ಟಿಯುವಿ300 ವಿನ್ಯಾಸಗಳನ್ನೇ ಟಿಯುವಿ300 ಪ್ಲಸ್ ಮಾದರಿಯಲ್ಲೂ ಮುಂದುವರಿಸಲಾಗಿದೆ.

Recommended Video
Tata Tiago XTA AMT Launched In India | In Kannada - DriveSpark ಕನ್ನಡ
ಬಿಡುಗಡೆಗಾಗಿ ಸಿದ್ಧಗೊಂಡ ಮಹೀಂದ್ರಾ ಟಿಯುವಿ300 ಪ್ಲಸ್ ಸ್ಪೆಷಲ್ ಏನು?

ಇದೇ ಕಾರಣಕ್ಕೆ ಹೊಸ ಮಾದರಿಗಳಿಗೆ ಪ್ರಿಮಿಯಂ ಲುಕ್ ನೀಡಿರುವ ಮಹೀಂದ್ರಾ, ಸ್ಕಾರ್ಪಿಯೋ ಫೇಸ್‌ಲಿಫ್ಟ್ ಬಿಡುಗಡೆ ನಂತರವಷ್ಟೇ ಟಿಯುವಿ300 ಪ್ಲಸ್ ಮಾದರಿಯನ್ನು ಪರಿಚಯಿಸುವ ನೀರಿಕ್ಷೆಯಿದೆ.

ಬಿಡುಗಡೆಗಾಗಿ ಸಿದ್ಧಗೊಂಡ ಮಹೀಂದ್ರಾ ಟಿಯುವಿ300 ಪ್ಲಸ್ ಸ್ಪೆಷಲ್ ಏನು?

ಆದ್ರೆ ಬೆಲೆಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲವಾದರೂ ಟಿಯುವಿ300 ಪ್ಲಸ್ ಎಂಜಿನ್ ಸಾಮರ್ಥ್ಯದ ಅನುಗುಣವಾಗಿ 10 ರಿಂದ 14 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಸದ್ಯದಲ್ಲೇ ಗ್ರಾಹಕರ ಸೇರುವುದು ಖಚಿತವಾಗಿದೆ.

ಬಿಡುಗಡೆಗಾಗಿ ಸಿದ್ಧಗೊಂಡ ಮಹೀಂದ್ರಾ ಟಿಯುವಿ300 ಪ್ಲಸ್ ಸ್ಪೆಷಲ್ ಏನು?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

2002ರಲ್ಲಿ ಮೊದಲ ಬಾರಿಗೆ ಸ್ಕಾರ್ಪಿಯೋ ಬಿಡುಗಡೆ ಮಾಡುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಬೇಡಿಕೆ ಹೊಂದಿರುವ ಮಹೀಂದ್ರಾ, ಸದ್ಯದ ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ಹಲವು ಎಸ್‌ಯುವಿ ಮಾದರಿಗಳನ್ನು ಹೊರತಂದು ಯಶಸ್ವಿಯಾಗಿದೆ. ಹೀಗಾಗಿ ಬಿಡುಗಡೆಯಾಗುತ್ತಿರುವ ಟಿಯುವಿ300 ಪ್ಲಸ್ ಕೂಡಾ ಹೆಚ್ಚಿನ ನೀರಿಕ್ಷೆ ಹೊಂದಿದೆ ಎಂದರೇ ತಪ್ಪಾಗಲಾರದು.

English summary
Read in Kannada about Mahindra Trademarks ‘TUV300 Plus’ Name.
Story first published: Monday, August 21, 2017, 16:02 [IST]
Please Wait while comments are loading...

Latest Photos