ಟಿಯುವಿ300 ಟಿ10 ಬಗೆಗಿನ ತಾಂತ್ರಿಕ ಅಂಶಗಳನ್ನು ಬಿಚ್ಚಿಟ್ಟ ಮಹೀಂದ್ರಾ..!!

Written By:

ಎಸ್‌ಯುವಿ ವಿಭಾಗಕ್ಕೆ ಮತ್ತೊಂದು ಹೊಸ ಆವೃತ್ತಿಯನ್ನು ಪರಿಚಯಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಟಿಯುವಿ300 ಟಿ10 ಮಾದರಿಯನ್ನು ಅಭಿವೃದ್ಧಿಗೊಳಿಸಿದ್ದು, ಹೊಸ ಕಾರಿನ ಕುರಿತಾದ ತಾಂತ್ರಿಕ ಅಂಶಗಳನ್ನು ಬಿಡುಗಡೆಗೊಳಿಸಿದೆ.

ಟಿಯುವಿ300 ಟಿ10 ಬಗೆಗಿನ ತಾಂತ್ರಿಕ ಅಂಶಗಳನ್ನು ಬಿಚ್ಚಿಟ್ಟ ಮಹೀಂದ್ರಾ

ಈ ಹಿಂದಿನ ಟಿಯುವಿ300 ಟಿ8 ಮಾದರಿಗಿಂತ ಟಿಯುವಿ300 ಟಿ10 ಕಾರು ಮಾದರಿಯಲ್ಲಿ ಸಾಕಷ್ಟು ಬದಲಾವಣೆ ತಂದಿರುವ ಮಹೀಂದ್ರಾ, ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ತಂತ್ರಜ್ಞಾನವನ್ನು ಒದಗಿಸುತ್ತಿದೆ.

ಟಿಯುವಿ300 ಟಿ10 ಬಗೆಗಿನ ತಾಂತ್ರಿಕ ಅಂಶಗಳನ್ನು ಬಿಚ್ಚಿಟ್ಟ ಮಹೀಂದ್ರಾ

ಹೊಸ ಕಾರು ಆವೃತ್ತಿಯಲ್ಲಿ ಮಾಹಿತಿ ಮತ್ತು ಮನರಂಜನೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 7 ಇಂಚಿನ ಟಚ್ ಸ್ಕೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಯುಎಸ್‌ಬಿ ವಿಡಿಯೋ, ಇಮೇಜ್ ಪ್ಲೇ ಬ್ಯಾಕ್, ಬ್ಲೂಟೂಥ್ ಮ್ಯೂಜಿಕ್, ಆಡಿಯೋ ಕಾಲಿಂಗ್, ಮಹೀಂದ್ರಾ ಬ್ಯೂ ಸೆನ್ಸ್, ಡ್ರೈವರ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಅಳವಡಿಕೆ ಹೊಂದಿದೆ.

ಟಿಯುವಿ300 ಟಿ10 ಬಗೆಗಿನ ತಾಂತ್ರಿಕ ಅಂಶಗಳನ್ನು ಬಿಚ್ಚಿಟ್ಟ ಮಹೀಂದ್ರಾ

ಇನ್ನು ಟಿಯುವಿ300 ಟಿ10 ಕಾರು ಮಾದರಿಯ ಮುನ್ನೋಟವನ್ನು ಹೆಚ್ಚು ಆಕರ್ಷಣೆಗೊಳಿಸಲಾಗಿದ್ದು, ಬ್ಲ್ಯಾಕ್ ಕ್ರೋಮ್, ಫಾಂಗ್ ಲ್ಯಾಂಪ್, ಅಲಾಯ್ ವೀಲ್ಹ್, ರೂಫ್ ರೈಲ್ಸ್ ಮತ್ತು ಸ್ಟಾಟಿಕ್ ಬ್ಲೆಂಡಿಂಗ್ ಹೆಡ್‌ಲ್ಯಾಂಪ್ ಜೋಡಣೆ ನೀಡಲಾಗಿದೆ.

ಟಿಯುವಿ300 ಟಿ10 ಬಗೆಗಿನ ತಾಂತ್ರಿಕ ಅಂಶಗಳನ್ನು ಬಿಚ್ಚಿಟ್ಟ ಮಹೀಂದ್ರಾ

ಇದರ ಜೊತೆಗೆ ಹೊಸ ಕಾರು ವಿವಿಧ ಆರು ಬಣ್ಣಗಳಲ್ಲಿ ಖರೀದಿಸಬಹುದಾಗಿದ್ದು, ನಾಲ್ಕು ಹೊಸ ಮಾದರಿಯ ಡ್ಯುಯಲ್ ಕಲರ್ ಆವೃತ್ತಿಗಳನ್ನು ಆಯ್ಕೆ ಮಾಡುವ ಅವಕಾಶವಿದೆ. ಹೀಗಾಗಿ ಸುಧಾರಿತ ಅಂಶಗಳಿಗೆ ಟಿಯುವಿ300 ಟಿ10 ಕಾರಿನಲ್ಲಿ ಹೆಚ್ಚಿನ ಗಮನಹರಿಸಲಾಗಿದೆ.

ಟಿಯುವಿ300 ಟಿ10 ಬಗೆಗಿನ ತಾಂತ್ರಿಕ ಅಂಶಗಳನ್ನು ಬಿಚ್ಚಿಟ್ಟ ಮಹೀಂದ್ರಾ

ಎಂಜಿನ್

1.5-ಲೀಟರ್ ಎಂ ಹ್ವಾಕ್ 100 ಡೀಸೆಲ್ ಎಂಜಿನ್ ಜೊತೆ ಟಿಯುವಿ300 ಟಿ10 ಕಾರು ಅಭಿವೃದ್ಧಿಯಾಗಿದ್ದು, 99-ಬಿಎಚ್‌ಪಿ ಮತ್ತು 240-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಅಲ್ಲದೇ ಹೊಸ ಕಾರು ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅಳವಡಿಕೆಯ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ.

ಟಿಯುವಿ300 ಟಿ10 ಬಗೆಗಿನ ತಾಂತ್ರಿಕ ಅಂಶಗಳನ್ನು ಬಿಚ್ಚಿಟ್ಟ ಮಹೀಂದ್ರಾ

ಬೆಲೆ

ಟಿಯುವಿ300 ಟಿ10 ಕಾರಿನ ಬೆಲೆಗಳ ಬಗ್ಗೆ ಮಹೀಂದ್ರಾ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲವಾದರೂ ಕೆಲವು ಮೂಲಗಳ ಪ್ರಕಾರ ಈ ಹಿಂದಿನ ಆವೃತ್ತಿಗಿಂತ ರೂ.50 ಸಾವಿರ ಹೆಚ್ಚಳ ಮಾಡುವ ಸಾಧ್ಯತೆಗಳಿದ್ದು, ರೂ.9.20ಲಕ್ಷಕ್ಕೆ ಲಭ್ಯವಾಗಲಿವೆ ಎನ್ನಲಾಗಿದೆ.

ಟಿಯುವಿ300 ಟಿ10 ಬಗೆಗಿನ ತಾಂತ್ರಿಕ ಅಂಶಗಳನ್ನು ಬಿಚ್ಚಿಟ್ಟ ಮಹೀಂದ್ರಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ದೇಶಿಯ ಕಾರು ಉತ್ಪಾದನಾ ಮಾರುಕಟ್ಟೆಯಲ್ಲಿ ಮಹೀಂದ್ರಾ ನಿರ್ಮಿತ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆಯಿದ್ದು, ಟಿಯುವಿ300 ಟಿ10 ಹೊಸ ಆವೃತ್ತಿ ಮೂಲಕ ಮಹೀಂದ್ರಾ ಸಂಸ್ಥೆಯು ಎಸ್‌ಯುವಿ ವಿಭಾಗದಲ್ಲಿ ಹೊಸ ದಾಖಲೆ ಕಾಣುವುದು ಖಚಿತ.

English summary
Read in Kannada about New Mahindra TUV300 T10 Variant Features & Specifications Revealed.
Story first published: Monday, September 18, 2017, 20:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark