ವಿನೂತನ ಮಾದರಿಯ ಎಕ್ಸ್‌ಯುವಿ ಎರೋ ಉತ್ಪಾದನೆಗೆ ಮಹೀಂದ್ರಾ ಗ್ರೀನ್ ಸಿಗ್ನಲ್

Written By:

ಭಾರತೀಯ ಆಟೋ ವಲಯದಲ್ಲಿ ತನ್ನದೇ ಛಾಪು ಮೂಡಿಸಿರುವ ಮಹೀಂದ್ರಾ ಸಂಸ್ಥೆಯು, ಹೊಸ ಮಾದರಿಯ ಎಕ್ಸ್‌ಯುವಿ ಎರೋ ಕಾರು ಉತ್ಪಾದನೆಗೆ ಗ್ರೀನ್ ಸಿಗ್ನಲ್ ತೊರಿದೆ.

ವಿನೂತನ ಎಕ್ಸ್‌ಯುವಿ ಎರೋ ಉತ್ಪಾದನೆಗೆ ಮಹೀಂದ್ರಾ ಗ್ರೀನ್ ಸಿಗ್ನಲ್

ಈ ಹಿಂದೆ 2016ರ ಆಟೋ ಎಕ್ಸ್‌ಪೋದಲ್ಲಿ ಎಕ್ಸ್‌ಯುವಿ ಎರೋ ಮಾದರಿಯನ್ನು ಪ್ರದರ್ಶನ ಮಾಡಿದ್ದ ಮಹೀಂದ್ರಾ, ಇದೀಗ ಹೊಸ ಕಾರು ಮಾದರಿಯನ್ನು ಉತ್ಪಾದನೆಗೆ ಮಹತ್ವದ ನಿರ್ಧಾರ ಕೈಗೊಂಡಿದೆ.

ವಿನೂತನ ಎಕ್ಸ್‌ಯುವಿ ಎರೋ ಉತ್ಪಾದನೆಗೆ ಮಹೀಂದ್ರಾ ಗ್ರೀನ್ ಸಿಗ್ನಲ್

ಹೀಗಾಗಿ 2018ರ ಫೆಬ್ರುವರಿ ವೇಳೆಗೆ ಎಕ್ಸ್‌ಯುವಿ ಎರೋ ಉತ್ಪಾದನೆ ಶುರುವಾಗಲಿದ್ದು, ಅದೇ ವರ್ಷದ ಕೊನೆಯಲ್ಲಿ ಮಾರಾಟ ಲಭ್ಯವಾಗುವ ಸಾಧ್ಯತೆಗಳಿವೆ.

ವಿನೂತನ ಎಕ್ಸ್‌ಯುವಿ ಎರೋ ಉತ್ಪಾದನೆಗೆ ಮಹೀಂದ್ರಾ ಗ್ರೀನ್ ಸಿಗ್ನಲ್

ಇನ್ನು ಮಹೀಂದ್ರಾ ದೇಶಿಯ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಪುಣೆ ಬಳಿ ಇರುವ ಚಾಕನ್ ಕಾರು ಉತ್ಪಾದನಾ ಘಟಕದಲ್ಲೇ ಎಕ್ಸ್‌ಯುವಿ ಎರೋ ಕಾರುಗಳು ಅಭಿವೃದ್ಧಿಗೊಳ್ಳಲಿವೆ.

ವಿನೂತನ ಎಕ್ಸ್‌ಯುವಿ ಎರೋ ಉತ್ಪಾದನೆಗೆ ಮಹೀಂದ್ರಾ ಗ್ರೀನ್ ಸಿಗ್ನಲ್

ಎಕ್ಸ್‌ಯುವಿ 500 ಎಸ್‌ಯುವಿ ಹೋಲಿಕೆಯನ್ನು ಹೊಂದಿರುವ ಎಕ್ಸ್‌ಯುವಿ ಏರೋ, 2.2-ಲೀಟರ್ ಎಂ-ಹ್ವಾಕ್ ಡೀಸೆಲ್ ಎಂಜಿನ್‌ನೊಂದಿಗೆ ಸಿದ್ಧಗೊಳ್ಳಲಿದೆ.

ವಿನೂತನ ಎಕ್ಸ್‌ಯುವಿ ಎರೋ ಉತ್ಪಾದನೆಗೆ ಮಹೀಂದ್ರಾ ಗ್ರೀನ್ ಸಿಗ್ನಲ್

ಈ ಮೂಲಕ ಭಾರತದಲ್ಲಿ ಮಧ್ಯಮ ವರ್ಗಗಳ ಎಸ್‌ಯುವಿ ಕಾರು ಖರೀದಿಗೆ ಉತ್ತಮ ಅವಕಾಶ ಒದಗಿಸಲು ಮುಂದಾಗಿರುವ ಮಹೀಂದ್ರಾ, ಎಕ್ಸ್‌ಯುವಿ ಎರೋ ಮೂಲಕ ಮತ್ತೊಮ್ಮೆ ದಾಖಲೆಯ ಮಾರಾಟ ಗುರಿಹೊಂದಿದೆ.

English summary
Read in Kannada about Mahindra XUV Aero Production To Commence By 2018.
Story first published: Friday, June 30, 2017, 20:09 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark