ಭಾರತದಲ್ಲಿ 5,000 ಸರ್ವಿಸ್ ಸೆಂಟರ್‌ಗಳ ಸ್ಥಾಪನೆಯ ಗುರಿ : ಮಾರುತಿ ಸುಜುಕಿ

ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ ತನ್ನ ಜಾಲವನ್ನು ವಿಸ್ತರಿಸಲು ಯೋಜನೆ ರೂಪಿಸಿದ್ದು, ತನ್ನ ಸರ್ವಿಸ್ ಸೆಂಟರ್‌ಗಳ ಸಂಖ್ಯೆಗಳನ್ನು 5,000ಕ್ಕೆ ಏರಿಕೆ ಮಾಡಲು ನಿರ್ಧರಿಸಿದೆ.

By Girish

ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ ತನ್ನ ಜಾಲವನ್ನು ವಿಸ್ತರಿಸಲು ಯೋಜನೆ ರೂಪಿಸಿದ್ದು, ತನ್ನ ಸರ್ವಿಸ್ ಸೆಂಟರ್‌ಗಳ ಸಂಖ್ಯೆಗಳನ್ನು 5,000ಕ್ಕೆ ಏರಿಕೆ ಮಾಡಲು ನಿರ್ಧರಿಸಿದೆ.

ಭಾರತದಲ್ಲಿ 5,000 ಸರ್ವಿಸ್ ಸೆಂಟರ್‌ಗಳ ಸ್ಥಾಪನೆಯ ಗುರಿ : ಮಾರುತಿ

ಭಾರತದಲ್ಲಿ ವ್ಯಾಪಕ ಮಾರಾಟ ಮತ್ತು ಸೇವಾ ಜಾಲದ ಲಾಭವನ್ನು ಮಾರುತಿ ಸುಜುಕಿ ಪಡೆದುಕೊಳ್ಳಲು ನಿರ್ಧರಿಸಿದೆ ಮತ್ತು ಈ ಯಶಸ್ಸನ್ನು ಮುಂದುವರೆಸಲು ನಿರ್ಧರಿಸಿರುವ ಪ್ರಸಿದ್ಧ ವಾಹನ ಉತ್ಪಾದಕ ಸಂಸ್ಥೆ ತನ್ನ ಮಾರಾಟ ಜಾಲವನ್ನು ಹೆಚ್ಚಿಸಿಕೊಳ್ಳುವ ಈಗಾಗಲೇ ಕ್ರಮ ಕೈಗೊಂಡಿದೆ.

ಭಾರತದಲ್ಲಿ 5,000 ಸರ್ವಿಸ್ ಸೆಂಟರ್‌ಗಳ ಸ್ಥಾಪನೆಯ ಗುರಿ : ಮಾರುತಿ

ಕಂಪನಿಯ ಷೇರುದಾರರ ಪ್ರೆಶ್ನೆಗಳಿಗೆ ಉತ್ತರಿಸುವ ಸಮಯದಲ್ಲಿ ಈ ವಿಚಾರವನ್ನು ಸುಜುಕಿ ಮೋಟಾರ್ ಕಾರ್ಪ್‌ನ ಅಧ್ಯಕ್ಷ ಮತ್ತು ಸಿಇಓ ತೊಷಿಹಿರೊ ಸುಜುಕಿ ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ 5,000 ಸರ್ವಿಸ್ ಸೆಂಟರ್‌ಗಳ ಸ್ಥಾಪನೆಯ ಗುರಿ : ಮಾರುತಿ

ಸುಝುಕಿ ಮೊಟಾರ್ ಸಂಸ್ಥೆಗೆ ಭಾರತವು ಪ್ರಮುಖ ಮಾರುಕಟ್ಟೆಯಾಗಿದ್ದು, ತನ್ನ ಅಂತರರಾಷ್ಟ್ರೀಯ ಮಾರಾಟದಲ್ಲಿ ಶೇಕಡಾ 50% ರಷ್ಟು ಕೊಡುಗೆಯನ್ನು ಭಾರತದಿಂದ ಪಡೆದುಕೊಳ್ಳುತ್ತಿದೆ.

ಭಾರತದಲ್ಲಿ 5,000 ಸರ್ವಿಸ್ ಸೆಂಟರ್‌ಗಳ ಸ್ಥಾಪನೆಯ ಗುರಿ : ಮಾರುತಿ

ಭಾರತದಲ್ಲಿ ಸಂಸ್ಥೆಯ 5,000 ಸೇವಾ ಕೇಂದ್ರಗಳಲ್ಲಿ, ಹೆಚ್ಚು ಕಡಿಮೆ 3,000 ಸರ್ವಿಸ್ ಸೆಂಟರ್‌ಗಳು ಮಾರಾಟಗಾರರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ, 1,667 ಸರ್ವಿಸ್ ಸ್ಟೇಷನ್‌ಗಳು ನಗರಗಳಲ್ಲಿ ಮತ್ತು 3,200 ಸರ್ವಿಸ್ ಸ್ಟೇಷನ್‌ಗಳು ದೇಶದಾದ್ಯಂತ ಹರಡಿಕೊಂಡಿವೆ.

ಭಾರತದಲ್ಲಿ 5,000 ಸರ್ವಿಸ್ ಸೆಂಟರ್‌ಗಳ ಸ್ಥಾಪನೆಯ ಗುರಿ : ಮಾರುತಿ

ಮುಂದಿನ ಮೂರು ವರ್ಷಗಳಲ್ಲಿ, ಮಾರುತಿ 1000ಕ್ಕೂ ಹೆಚ್ಚು ಮಾರಾಟ ಷೋ ರೂಂ ಮತ್ತು 1,800 ಸೇವಾ ಕೇಂದ್ರಗಳನ್ನು ತೆರೆಯಲಿದೆ, ಇದೆಲ್ಲದರ ಜೊತೆ ಕಂಪೆನಿಯು ಅದರ ನೆಕ್ಸಾ ಔಟ್‌ಲೆಟ್ ಮೂಲಕ ಹೆಚ್ಚುವರಿಯಾಗಿ 250 ಪ್ರೀಮಿಯಂ ಡೀಲರ್‌ಶಿಪ್ ಹೊಂದಿದೆ.

ಭಾರತದಲ್ಲಿ 5,000 ಸರ್ವಿಸ್ ಸೆಂಟರ್‌ಗಳ ಸ್ಥಾಪನೆಯ ಗುರಿ : ಮಾರುತಿ

ಸದ್ಯ ಭಾರತದಲ್ಲಿ ಮಾರುತಿ ಸುಜುಕಿ ಸೇವಾ ಜಾಲದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಈ ಹೊಸ ತಂತ್ರಗಾರಿಕೆಗಳಿಂದ ಭಾರತದಲ್ಲಿ ಮತ್ತಷ್ಟು ಜನರಿಗೆ ತಲುಪಲಿದೆ ಎನ್ನಬಹುದು.

Most Read Articles

Kannada
English summary
India's largest carmaker wants to continue the trend as it plans to expand its network by 56 percent taking its entire service centre to 5,000.
Story first published: Friday, June 30, 2017, 17:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X