ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ಸೆಲೆರಿಯೊ ಫೇಸ್‌ಲಿಫ್ಟ್

ಮಾರುತಿ ಸುಜುಕಿ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ದೀಪಾವಳಿ ವಿಶೇಷ ಹಿನ್ನೆಲೆ ಸೆಲೆರಿಯೊ ಮುಂದುವರಿದ ಕಾರು ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಸುಧಾರಿತ ವಿನ್ಯಾಸ ಮತ್ತು ತಂತ್ರಜ್ಞಾನ ಸೌಲಭ್ಯಗಳ ಜೊತೆ ಆಕರ್ಷಕ ಬೆಲೆಗಳಲ್ಲಿ ಲಭ್ಯವಾಗಿದೆ.

By Praveen

ಆಕರ್ಷಕ ಬೆಲೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಸೆಲೆರಿಯೊ ಫೇಸ್‌ಲಿಫ್ಟ್

ಸೆಲೆರಿಯೊ ಹ್ಯಾಚ್‌ಬ್ಯಾಕ್ ಆವೃತ್ತಿಗಳು ಈಗಾಗಲೇ ಸಾಕಷ್ಟು ಜನಪ್ರಿಯತೆ ಹೊಂದಿದ್ದು, ಈ ಹಿನ್ನೆಲೆ ಪ್ರಸಕ್ತ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸುಧಾರಿತ ಮಾದರಿಯನ್ನು ಪರಿಚಯಿಸಿರುವ ಮಾರುತಿ ಸುಜುಕಿಯು ಹೊಸ ಕಾರಿನ ಆರಂಭಿಕ ಬೆಲೆಗಳನ್ನು ರೂ.4.15 ಲಕ್ಷಕ್ಕೆ ಹಾಗೂ ಉನ್ನತ ಮಾದರಿಯ ಕಾರಿನ ಬೆಲೆಯನ್ನು ರೂ.5.25 ಲಕ್ಷಕ್ಕೆ ನಿಗದಿ ಮಾಡಿದೆ.

ಆಕರ್ಷಕ ಬೆಲೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಸೆಲೆರಿಯೊ ಫೇಸ್‌ಲಿಫ್ಟ್

ಈ ಹಿಂದೆ 2014ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಸೆಲೆರಿಯೊ ಆವೃತ್ತಿಗಳು ಸದ್ಯದ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಮಹತ್ತರ ಬದಲಾವಣೆಗಳೊಂದಿದೆ ಮರುಬಿಡುಗಡೆಯಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಸೆಲೆರಿಯೊ ಆವೃತ್ತಿಯಲ್ಲೇ ವಿವಿಧ ಮಾದರಿಗಳನ್ನು ಪರಿಚಯಿಸಲಾಗಿದೆ.

Recommended Video

Datsun rediGO Gold 1.0-Litre Launched In India - DriveSpark
ಆಕರ್ಷಕ ಬೆಲೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಸೆಲೆರಿಯೊ ಫೇಸ್‌ಲಿಫ್ಟ್

ಕಾರು ಮಾದರಿಗಳು ಇಂಧನ ಪ್ರಕಾರ ಗೇರ್‌ಬಾಕ್ಸ್ ಬೆಲೆಗಳು (ದೆಹಲಿ ಎಕ್ಸ್‌ಶೋರಂ ಪ್ರಕಾರ)
ಎಲ್‌ಎಕ್ಸ್ಐ ಪೆಟ್ರೋಲ್ ಮ್ಯಾನುವಲ್ ರೂ. 415,273
ಎಲ್ಎಕ್ಸ್ಐ(ಒ) ಪೆಟ್ರೋಲ್ ಮ್ಯಾನುವಲ್ ರೂ. 429,289
ವಿಎಕ್ಸ್ಐ ಪೆಟ್ರೋಲ್ ಮ್ಯಾನುವಲ್ ರೂ. 448,418
ವಿಎಕ್ಸ್ಐ ಪೆಟ್ರೋಲ್ ಆಟೋಮ್ಯಾಟಿಕ್ ರೂ. 491,418
ವಿಎಕ್ಸ್ಐ(ಒ) ಪೆಟ್ರೋಲ್ ಮ್ಯಾನುವಲ್ ರೂ. 463,908
ವಿಎಕ್ಸ್ಐ(ಒ) ಪೆಟ್ರೋಲ್ ಆಟೋಮ್ಯಾಟಿಕ್ ರೂ. 506,908
ಜಿಎಕ್ಸ್ಐ ಪೆಟ್ರೋಲ್ ಮ್ಯಾನುವಲ್ ರೂ. 473,934
ಜಿಎಕ್ಸ್ಐ ಪೆಟ್ರೋಲ್ ಆಟೋಮ್ಯಾಟಿಕ್ ರೂ. 516,934
ಜಿಎಕ್ಸ್ಐ(ಒ) ಪೆಟ್ರೋಲ್ ಮ್ಯಾನುವಲ್ ರೂ. 522,043
ಜಿಎಕ್ಸ್ಐ(ಒ) ಪೆಟ್ರೋಲ್ ಆಟೋಮ್ಯಾಟಿಕ್ ರೂ. 534,043
ವಿಎಕ್ಸ್ಐ ಸಿಎನ್‌ಜಿ ಮ್ಯಾನುವಲ್ ರೂ. 510,438
ವಿಎಕ್ಸ್ಐ(ಒ) ಸಿಎನ್‌ಜಿ ಮ್ಯಾನುವಲ್ ರೂ. 525,577

ಆಕರ್ಷಕ ಬೆಲೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಸೆಲೆರಿಯೊ ಫೇಸ್‌ಲಿಫ್ಟ್

ಸೆಲೆರಿಯೊ ಫೇಸ್‌ಲಿಫ್ಟ್ ವಿನ್ಯಾಸಗಳು

ಸೆಲೆರಿಯೊ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಒಳ ವಿನ್ಯಾಸಗಳ ಹೊರತಾಗಿ ಯಾವುದೇ ತಾಂತ್ರಿಕ ಬದಲಾವಣೆಗಳನ್ನು ತರದ ಮಾರುತಿ ಸುಜುಕಿ ಸಂಸ್ಥೆಯು ಈ ಹಿಂದಿನ ಕಾರು ಆವೃತ್ತಿಯ ವೈಶಿಷ್ಟ್ಯತೆಗಳ ಜೊತೆಗೆ ಗುರುತರ ಬದಲಾವಣೆ ತಂದಿದೆ.

ಆಕರ್ಷಕ ಬೆಲೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಸೆಲೆರಿಯೊ ಫೇಸ್‌ಲಿಫ್ಟ್

ಇದಲ್ಲದೇ ಸೆಲೆರಿಯೊದ ಹೊಸ ರೂಪಾಂತರದ ಹೊರಮೈಯಲ್ಲಿ ಪರಿಷ್ಕೃತ ಫ್ರಂಟ್ ಗ್ರಿಲ್, ಕ್ರೋಮ್ ಸ್ಪರ್ಶತೆ, ಹೊಸ ಫಾಗ್ ಲ್ಯಾಂಪ್, ರಿಯರ್ ಬಂಪರ್ ಇತ್ಯಾದಿ ವ್ಯವಸ್ಥೆಗಳು ಕಂಡುಬರಲಿದೆ. ಹಾಗೆಯೇ ಕಾರಿನ ಒಳಗಡೆ ಹೊಸ ಬ್ಲ್ಯಾಕ್ ಇಂಟಿರಿಯರ್, ಪ್ರೀಮಿಯಂ ಸೀಟು ವ್ಯವಸ್ಥೆಗಳು ಇರಲಿದೆ.

ಆಕರ್ಷಕ ಬೆಲೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಸೆಲೆರಿಯೊ ಫೇಸ್‌ಲಿಫ್ಟ್

ಎಂಜಿನ್ ಸಾಮರ್ಥ್ಯ

ಸೆಲೆರಿಯೊ ಫೇಸ್‌ಲಿಫ್ಟ್ ಆವೃತ್ತಿಯು 1.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 67-ಬಿಎಚ್‌ಪಿ ಮತ್ತು 90-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ.

ಆಕರ್ಷಕ ಬೆಲೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಸೆಲೆರಿಯೊ ಫೇಸ್‌ಲಿಫ್ಟ್

ಸುರಕ್ಷಾ ವಿಧಾನಗಳು

ಮಾರುತಿ ಸುಜುಕಿ ನಿರ್ಮಾಣದ ಬಲೆನೊ, ಇಗ್ನಿಸ್, ಎಸ್ ಕ್ರಾಸ್ ಮಾದರಿಗಳಂತೆ ಸೆಲೆರಿಯೊ ಫೇಸ್‌ಲಿಫ್ಟ್ ಆವೃತ್ತಿಯಲ್ಲೂ ಚಾಲಕನ ಭಾಗದಲ್ಲಿ ಏರ್‌ಬ್ಯಾಗ್, ಪ್ಯಾಸೆಂಜರ್ ಏರ್‍‌ಬ್ಯಾಗ್, ಸೀಟ್ ಬೆಲ್ಟ್ ರಿಮೈಂಡರ್ , ಎಬಿಎಸ್ ತಂತ್ರಜ್ಞಾನಗಳನ್ನು ಒದಗಿಸಲಾಗಿದೆ.

ಆಕರ್ಷಕ ಬೆಲೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಸೆಲೆರಿಯೊ ಫೇಸ್‌ಲಿಫ್ಟ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

2014ನೇ ಇಸವಿಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಮಾರುತಿ ಸೆಲೆರಿಯೊ ಸದ್ಯ ಫೇಸ್‌ಲಿಫ್ಟ್ ವೈಶಿಷ್ಟ್ಯತೆಗಳೊಂದಿಗೆ ಆಟೋ ಗೇರ್ ಶಿಫ್ಟ್ (ಎಜಿಎಸ್) ತಂತ್ರಜ್ಞಾನವನ್ನೊಳಗೊಂಡಿರುವ ಮೊತ್ತ ಮೊದಲ ಕಾರು ಇದಾಗಿದ್ದು, ಇದುವರೆಗೆ ಮೂರು ಲಕ್ಷಕ್ಕೂ ಹೆಚ್ಚು ಮಾರಾಟವನ್ನು ದಾಖಲಿದೆ. ಹೀಗಾಗಿ ಇದು ಇನ್ನಷ್ಟು ಜನಪ್ರಿಯತೆ ಸಾಧಿಸುವಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

Most Read Articles

Kannada
English summary
Read in Kannada about Maruti Celerio Facelift Launched In India. Prices Start At Rs 4.15 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X