2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ರ‍್ಯಾಲಿ- ಪ್ರಶಸ್ತಿಗಾಗಿ ಅಂತಿಮ ಹಂತದಲ್ಲಿ ರೋಚಕ ಹಣಾಹಣಿ

Written By:

ಮೊಬಿಲ್ ಒನ್ ಸಂಸ್ಥೆಯ ನೇತೃತ್ವದಲ್ಲಿ ನಡೆಯುತ್ತಿರುವ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ರ‍್ಯಾಲಿಯು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ನಾಲ್ಕನೇ ದಿನ ನಡೆದ ಮೋಟಾರ್ ಸ್ಪರ್ಧೆಯ ಮಹತ್ವದ ಮಾಹಿತಿ ಇಲ್ಲಿದೆ.

4ನೇ ದಿನಕ್ಕೆ ಕಾಲಿಟ್ಟ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ರ‍್ಯಾಲಿ

ಬೆಂಗಳೂರಿನಿಂದ ಆರಂಭವಾಗಿರುವ 15ನೇ ಆವೃತ್ತಿಯ ದಕ್ಷಿಣ ಡೇರ್ ಮೋಟಾರ್ ರ‍್ಯಾಲಿಯು ಐದನೇ ದಿನಕ್ಕೆ ಕಾಲಿಟ್ಟಿದ್ದು, ನಾಲ್ಕನೇ ದಿನ ಅಂತ್ಯಕ್ಕೆ ಸೂಪರ್ ಸ್ಪೆಷಲ್ ಸ್ಪೇಜ್ ವಿಭಾಗದಲ್ಲಿ ನಡೆದ ಸ್ಪರ್ಧೆಗಳು ಭಾರೀ

ರೊಚಕತೆಯಿಂದ ಕೂಡಿದ್ದವು.

4ನೇ ದಿನಕ್ಕೆ ಕಾಲಿಟ್ಟ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ರ‍್ಯಾಲಿ

ಈ ಮೂಲಕ ಕರ್ನಾಟಕ ಗಡಿದಾಟಿರುವ ಮೋಟಾರ್ ಸ್ಪೋರ್ಟ್ ಸ್ಪರ್ಧಿಗಳು ಸದ್ಯ ಮಹಾರಾಷ್ಟ್ರದ ಕೊಲ್ಲಾಪುರ ತಲುಪಿದ್ದು, ಕುದುರೆಮಾಣಿಯಲ್ಲಿ ನಡೆದ ಕೆಸರು ಸ್ಪರ್ಧೆಗಳು ಮೋಟಾರ್ ರೇಸ್ ಸ್ಪರ್ಧಿಗಳಿಗೆ ಕುತೂಹಲ ಹುಟ್ಟಿಸಿದ್ದು ಸುಳ್ಳಲ್ಲ.

4ನೇ ದಿನಕ್ಕೆ ಕಾಲಿಟ್ಟ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ರ‍್ಯಾಲಿ

ಅಲ್ಟಿಮೆಟ್ ಕಾರು ರೇಸ್ ವಿಭಾಗ ಮತ್ತು ಅಲ್ಟಿಮೆಟ್ ಬೈಕ್ ರೇಸ್ ವಿಭಾಗಗಳಲ್ಲಿ ಸ್ಪರ್ಧೆಗಳ ನಡುವೆ ತೀವ್ರ ಹಣಾಹಣಿ ನಡೆಯುತ್ತಿದ್ದು, ನಾಲ್ಕನೇ ದಿನದ ಅಂತ್ಯಕ್ಕೆ ಒಟ್ಟು 329 ಕಿಮಿ ದೂರವನ್ನು ಕ್ರಮಿಸಿರುವ ರ‍್ಯಾಲಿಯು ಇಂದು ನಿಗದಿತ ಗುರಿ ತಲುಪಲಿದೆ.

4ನೇ ದಿನಕ್ಕೆ ಕಾಲಿಟ್ಟ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ರ‍್ಯಾಲಿ

ಅಲ್ಟಿಮೇಟ್ ಕಾರುಗಳು ವಿಭಾಗದಲ್ಲಿ ಮಾರುತಿ ಸುಜುಕಿ ತಂಡದ ಸುರೇಶ್ ರಾಣಾ, ಅಶ್ವಿನ್ ನಾಯ್ಕ್ ಪ್ರಥಮ ಸ್ಥಾನದಲ್ಲೇ ಮುನ್ನಡೆ ಕಾಯ್ದುಕೊಂಡಿದ್ದು, ಎನ್ಎಸ್ ನಿಜಾಮಿ, ಸಮರ್ಥ್ ಯಾದವ್ ಎರಡನೇ ಸ್ಥಾನಕ್ಕೆ ಮತ್ತು ಸಂದೀಪ್ ಶರ್ಮಾ, ಕರಣ್ ಆಚಾರ್ಯ ಮೂರನೇ ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

4ನೇ ದಿನಕ್ಕೆ ಕಾಲಿಟ್ಟ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ರ‍್ಯಾಲಿ

ಅದೇ ರೀತಿಯಾಗಿ ಅಲ್ಟಿಮೆಟ್ ಬೈಕ್ ವಿಭಾಗದಲ್ಲಿ ಆರ್.ನಟರಾಜ್ ಪ್ರಥಮ ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಎರಡನೇ ಸ್ಥಾನದಲ್ಲಿ ಅಬ್ದುಲ್ ವಾಹೀದ್ ಮತ್ತು ಮೂರನೇ ಸ್ಥಾನದಲ್ಲಿ ಸಂಜಯ್ ಕುಮಾರ್ ಮುನ್ನಡೆ ಸಾಧಿಸಿದ್ದಾರೆ.

4ನೇ ದಿನಕ್ಕೆ ಕಾಲಿಟ್ಟ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ರ‍್ಯಾಲಿ

ಇನ್ನು ಹತ್ತು ಹಲವು ಕಸರತ್ತುಗಳ ಮೂಲಕ ಸ್ಪರ್ಧೆಯ ಆರಂಭದ ಸ್ಥಳದಿಂದ 2 ಸಾವಿರ ಕಿ.ಮಿ ಸಾಗಿರುವ ಮೋಟಾರ್ ಸ್ಪರ್ಧಿಗಳು ಇಂದು ಅಂತಿಮ ಹಂತವನ್ನು ತಲುಪಲಿದ್ದು, ದಿನದ ಅಂತ್ಯಕ್ಕೆ ಮಹತ್ವದ ಫಲೀತಾಂಶ ಹೊರಬಿಳಲಿದೆ.

English summary
Read in Kannada about 2017 Maruti Suzuki Dakshin Dare Day 4th Updates.
Story first published: Friday, July 21, 2017, 16:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark