ಬಿಡುಗಡೆಗೆ ಸಿದ್ಧಗೊಂಡ ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್

ಮಾರುತಿ ಸುಜುಕಿ ನಿರ್ಮಾಣದ ಎಸ್ ಕ್ರಾಸ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಗೆ ಸಿದ್ಧಗೊಂಡಿದ್ದು, ಬಿಡುಗಡೆ ಮುನ್ನ ಹೊಸ ಮಾದರಿಯೂ ಪರೀಕ್ಷಾರ್ಥ ವೇಳೆ ಕಾಣಿಸಿಕೊಳ್ಳುವ ಮೂಲಕ ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

By Praveen

ಮಾರುತಿ ಸುಜುಕಿ ನಿರ್ಮಾಣದ ಎಸ್ ಕ್ರಾಸ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಗೆ ಸಿದ್ಧಗೊಂಡಿದ್ದು, ಬಿಡುಗಡೆ ಮುನ್ನ ಹೊಸ ಮಾದರಿಯೂ ಪರೀಕ್ಷಾರ್ಥ ವೇಳೆ ಕಾಣಿಸಿಕೊಳ್ಳುವ ಮೂಲಕ ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ಇದರೊಂದಿಗೆ ಮಾರುತಿ ಸುಜುಕಿ ಫ್ಯಾಬ್ಲೆಟ್ ಮಾದರಿಯೂ ಶೀಘ್ರದಲ್ಲೇ ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಕಾರಿನ ವಿನ್ಯಾಸಗಳ ಕುರಿತು ಸಾಕಷ್ಚು ಚರ್ಚೆಗಳು ಕೂಡಾ ನಡೆಯುತ್ತಿವೆ.

ಬಿಡುಗಡೆಗೆ ಸಿದ್ಧಗೊಂಡ ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್

ಈಗಾಗಲೇ ಯುರೋಪ್ ರಾಷ್ಟ್ರಗಳಲ್ಲಿ ಎಸ್ ಕ್ರಾಸ್ ಫೇಸ್‌ಲಿಫ್ಟ್ ಆವೃತ್ತಿಯು ಬಿಡುಗಡೆಯಾಗಿದ್ದು, ಸದ್ಯದಲ್ಲೇ ಭಾರತದಲ್ಲೂ ಬಿಡುಗಡೆಗೆ ಮಾಡಲಿರುವ ಮಾರುತಿ ಸುಜುಕಿ ಸಂಸ್ಥೆಯೂ ಹೊಸ ಕಾರುಗಳನ್ನು ನೆಕ್ಸಾ ಕಾರು ಶೋರಂಗಳಲ್ಲಿ ಪ್ರದರ್ಶನಕ್ಕೆ ಇಡಲಿದೆ.

ಬಿಡುಗಡೆಗೆ ಸಿದ್ಧಗೊಂಡ ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್

ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಎಸ್ ಕ್ರಾಸ್ ಆವೃತ್ತಿಯೂ ಅಭಿವೃದ್ಧಿಯಾಗಿದ್ದು, ಐಷಾರಾಮಿ ಕಾರುಗಳ ಹೊರನೋಟವನ್ನು ಪಡೆದುಕೊಂಡಿದೆ. ಇದರಿಂದಾಗಿ ಕಡಿಮೆ ಬಜೆಟ್‌ನಲ್ಲಿ ಉತ್ತಮ ಕಾರು ಖರೀದಿಸುವ ಗ್ರಾಹಕರಿಗೆ ಇದು ಸಹಕಾರಿಯಾಗಿದೆ.

ಬಿಡುಗಡೆಗೆ ಸಿದ್ಧಗೊಂಡ ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್

ಎಂಜಿನ್ ಸಾಮರ್ಥ್ಯ

ಡೀಸೆಲ್ ಮತ್ತು ಪೆಟ್ರೋಲ್ ಎರಡು ಮಾದರಿಯಲ್ಲೂ ಎಸ್ ಕ್ರಾಸ್ ಲಭ್ಯವಿರಲಿದ್ದು, ಪೆಟ್ರೋಲ್ ಆವೃತ್ತಿಯು 1.2-ಲೀಟರ್ ಎಂಜಿನ್ ಹಾಗೂ ಡೀಸೆಲ್ ಆವೃತ್ತಿಯು 1.6-ಲೀಟರ್ ಎಂಜಿನ್‌ನೊಂದಿಗೆ ಅಭಿವೃದ್ಧಿಯಾಗಿವೆ.

ಬಿಡುಗಡೆಗೆ ಸಿದ್ಧಗೊಂಡ ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್

ಎಬಿಎಸ್, ರಿರ್ ವ್ಯೂವ್ ಕ್ಯಾಮೆರಾ, ಪಾರ್ಕಿಂಗ್ ಸೆನ್ಸಾರ್ ಮತ್ತು 7-ಇಂಚ್ ಇನ್ಪೋಟೈನ್‌ಮೆಂಟ್ ಡಿಸ್‌ಫೈ ಇರಿಸಲಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಗಳನ್ನು ಪರಿಚಯಿಸಲಾಗುತ್ತಿದೆ.

ಬಿಡುಗಡೆಗೆ ಸಿದ್ಧಗೊಂಡ ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್

ಇದರೊಂದಿಗೆ ಎಸ್ ಕ್ರಾಸ್ ಫೇಸ್‌ಲಿಫ್ಟ್‌‌ನಲ್ಲಿ ಸುರಕ್ಷಾ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದಕೊಂಡಿವೆ. ಹೀಗಾಗಿ ಎಸ್ ಕ್ರಾಸ್ ಫೇಸ್‌ಲಿಫ್ಟ್ ಕಾರಿನ ಬೆಲೆಗಳು ಸ್ಪರ್ಧಾತ್ಮಕವಾಗಿದ್ದು, ರೂ.9 ಲಕ್ಷದಿಂದ 13 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಬಿಡುಗಡೆಗೆ ಸಿದ್ಧಗೊಂಡ ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹತ್ತು ಹಲವು ವಿಶೇಷತೆಗಳಿಂದ ಕೂಡಿರುವ ಎಸ್‌ ಕ್ರಾಸ್ ಆವೃತ್ತಿಯು ಮುಂಬರುವ ಹಬ್ಬದ ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಬಿಡುಗಡೆಗೂ ಮುನ್ನವೇ ಹೊಸ ಕಾರಿನ ಕುರಿತು ನಡೆಯುತ್ತಿರುವ ಚರ್ಚೆಗಳು ಕೂಡಾ ಭಾರೀ ನೀರಿಕ್ಷೆ ಹುಟ್ಟುಹಾಕಿವೆ.

Most Read Articles

Kannada
English summary
Read in Kannada about 2017 Maruti Suzuki S-Cross FaceLift Car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X