ಭಾರತದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಬಿಡುಗಡೆ- ಬೆಲೆ ರೂ. 2.23 ಕೋಟಿ..!!

Written By:

ಈ ಹಿಂದೆ ಕೇವಲ 2 ನಿಮಿಷ 09 ಸೇಕೆಂಡುಗಳಲ್ಲಿ ಬಿಐಸಿ ಟ್ರ್ಯಾಕ್ ಸುತ್ತಿ ಹೊಸ ದಾಖಲೆ ನಿರ್ಮಾಣ ಮಾಡಿದ್ದ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಹೊಸ ಕಾರಿನ ಬೆಲೆಯನ್ನು ರೂ.2.23 ಕೋಟಿಗೆ ನಿಗದಿಗೊಳಿಸಲಾಗಿದೆ.

ಭಾರತದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಬಿಡುಗಡೆ

ಬಿಸ್ಟ್ ಆಫ್ ದಿ ಗ್ರಿನ್ ಹೆಲ್ ಎಂದೇ ಖ್ಯಾತಿ ಪಡೆದಿರುವ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಕಾರು ಬಿಡುಗಡೆಯಾಗಿದ್ದು, ರೇಸ್ ಟ್ರ್ಯಾಕ್‌ಗಳಿಗೆ ಅನುಕೂಲಕರವಾಗುವಂತಹ ಹಲವು ವೈಶಿಷ್ಟ್ಯತೆಗಳೊಂದಿಗೆ ಎಎಂಜಿ ಜಿಟಿ ಆರ್ ಕಾರನ್ನು ಪರಿಚಯಿಸಲಾಗಿದೆ.

ಭಾರತದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಬಿಡುಗಡೆ

ಮೊನ್ನೆಯಷ್ಟೇ ಅಂತರಾಷ್ಟ್ರೀಯ ಖ್ಯಾತಿಯ ಬುದ್ದಾ ಇಂಟರ್‌ನ್ಯಾಷನಲ್ ಸರ್ಕಿಟ್‌ನಲ್ಲಿ ನಡೆದ ಟ್ರ್ಯಾಕ್ ರೇಸಿಂಗ್‌ನಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿರುವ ಎಎಂಜಿ ಜಿಟಿ ಆರ್, ಕೇವಲ 2 ನಿಮಿಷ 09 ಸೇಕೆಂಡುಗಳಲ್ಲಿ ನಿಗದಿ ಗುರಿ ತಲಪುವ ಮೂಲಕ ಹೊಸ ಭರವಸೆ ಮೂಡಿಸಿದೆ.

ಭಾರತದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಬಿಡುಗಡೆ

ಎಎಂಜಿ ಜಿಟಿ ಆರ್ ವೈಶಿಷ್ಟ್ಯತೆಗಳು

ಮರ್ಸಿಡಿಸ್ ಎಎಂಜಿ ಜಿಟಿ ಆರ್ ಕಾರು ಆವೃತ್ತಿಗಳು 4-ಲೀಟರ್ ಟ್ವಿನ್ ಟರ್ಬೋ ವಿ8 ಎಂಜಿನ್ ಹೊಂದಿದ್ದು, 577-ಬಿಎಚ್‌ಪಿ ಮತ್ತು 700-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿರುವುದು ಮತ್ತೊಂದು ವಿಶೇಷ.

ಭಾರತದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಬಿಡುಗಡೆ

ಇದರ ಜೊತೆಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವ್ಯವಸ್ಥೆ ಕೂಡಾ ಇದ್ದು, ಮುಂಬದಿಯ ಚಕ್ರಗಳಂತೆ ಹಿಂಬದಿಯ ಚಕ್ರಗಳಿಗೂ ಎಂಜಿನ್ ಶಕ್ತಿ ಪೂರೈಕೆ ವಿಧಾನವನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಬಿಡುಗಡೆ

ಹೀಗಾಗಿಯೇ ಕೇವಲ 3.6 ಸೇಕೆಂಡುಗಳಲ್ಲಿ 100ಕಿಮಿ ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಗರಿಷ್ಠ ಮಟ್ಟದಲ್ಲಿ ಪ್ರತಿ ಗಂಟೆಗೆ 316 ಕಿಮಿ ವೇಗ ಕ್ರಮಿಸಬಲ್ಲವು.

Recommended Video - Watch Now!
2018 Hyundai Verna Indian Model Unveiled | In Kannada - DriveSpark ಕನ್ನಡ
ಭಾರತದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಬಿಡುಗಡೆ

ಎಎಂಜಿ ಜಿಟಿ ಆರ್ ಮಾದರಿಯನ್ನು ಸ್ಪೋರ್ಟ್ ಕಾರು ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಳಿಸಲಾಗಿದ್ದು, ಹಿಂಬದಿಯಲ್ಲಿ ಸ್ಟಿರಿಂಗ್ ವೀಲ್ಹ್‌ಗಳು, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಅನುಕೂಲಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸೀಟುಗಳು, ಕಾರ್ಬನ್ ಫೈಬರ್ ರೂಫ್‌ಗಳನ್ನು ನೀಡಲಾಗಿದೆ.

ಭಾರತದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಬಿಡುಗಡೆ

ವಿನ್ಯಾಸಗಳು

ಮರ್ಸಿಡಿಸ್ ಎಎಂಜಿ ಜಿಟಿ ಆರ್ ಅನ್ನು ಎಎಂಜಿ ಜಿಟಿ ಎಸ್ ಗೆ ಹೋಲಿಸಿದರೆ ಟ್ರ್ಯಾಕ್‌ ರೇಸಿಂಗ್‌ಗೆ ಎಂಜಿ ಜಿಟಿ ಆರ್ ಉತ್ತಮವಾಗಿದ್ದು, ಜಿಟಿ3 ಸೂಪರ್ ಕಾರು ಮಾದರಿಯ ಪ್ರೇರಣೆಯೊಂದಿಗೆ ಎಎಂಜಿ ಜಿಟಿ ಆರ್ ವಿನ್ಯಾಸಗಳನ್ನು ರಚನೆಗೊಳಿಸಲಾಗಿದೆ.

ಭಾರತದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಬಿಡುಗಡೆ

ಅಕ್ರಮಣಶೀಲ ಹೊಸ ಲಂಬವಾದ ಸ್ಲ್ಯಾಟ್ ಪ್ಯಾನಮೆರಿಕ್ ಗ್ರಿಲ್‌ಗಳು ಕೂಡಾ ಇದ್ದು, ಇದು ಲೌವ್ರೆಯನ್ನು ಒಳಗೊಂಡಿರುತ್ತದೆ. ಹೀಗಾಗಿ ಸೂಪರ್ ಕಾರುಗಳಲ್ಲಿ ಉತ್ಪತ್ತಿಯಾಗುವ ಎಂಜಿನ್ ತಾಪಮಾನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಭಾರತದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಬಿಡುಗಡೆ

ಸ್ಪೋರ್ಟ್ ಕಾರು ಪ್ರಿಯರಿಗಾಗಿಯೇ ಹೊಸ ಆವೃತ್ತಿಯನ್ನು ಹೊರ ತಂದಿರುವ ಮರ್ಸಿಡಿಸ್, ಎಎಂಜಿ ಜಿಟಿ ಆರ್ ಮಾದರಿಗಳಲ್ಲಿ ಬೃಹತ್ ಸ್ಥಿರ ಕಾರ್ಬನ್ ಫೈಬರ್ ಸ್ಪಾಯ್ಲರ್ ಮತ್ತು ಡಬಲ್ ರೇರ್ ಡಿಫ್ಯೂಸರ್ ಅನ್ನು ಜೋಡಣೆ ಮಾಡಿದೆ.

ಭಾರತದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿರುವ ಪೋರ್ಷೆ 911 ಜಿಟಿಆರ್ ಆರ್‌ಎಸ್ ಮಾದರಿಗೆ ಪ್ರತಿಸ್ಪರ್ಧಿಯಾಗಿ ಎಎಂಜಿ ಜಿಟಿ ಆರ್ ಬಿಡುಗಡೆ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಹೊಸ ಮಾದರಿಗೆ ಯಾವ ರೀತಿ ಬೇಡಿಕೆ ಸೃಷ್ಠಿಯಾಗಲಿದೆ ಎಂಬುವುದನ್ನು ಕಾಯ್ದುನೋಡಬೇಕಿದೆ.

English summary
Read in Kannada about Mercedes AMG GT R Launched In India.
Story first published: Monday, August 21, 2017, 15:18 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark