ಗೋವಾದಲ್ಲಿ ಆರಂಭಗೊಂಡ ಮರ್ಸಿಡಿಸ್ ಬೆಂಝ್ ಅತಿ ದೊಡ್ಡ ಮಾರಾಟ ಮಳಿಗೆ

Written By:

ಐಷಾರಾಮಿ ಕಾರುಗಳಲ್ಲಿ ತನ್ನದೇ ಆದ ಬೇಡಿಕೆ ಹೊಂದಿರುವ ಪ್ರತಿಷ್ಠಿತ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿನ ಉತ್ಪಾದನೆ ಮತ್ತು ಮಾರಾಟ ಪ್ರಮಾಣವನ್ನು ಹೆಚ್ಚಿಸಿದ್ದು, ಈ ನಿಟ್ಟಿನಲ್ಲಿ ಹೊಸ ಮಾದರಿಯ ಡಿಲರ್‌ಶಿಪ್‌ಗಳನ್ನು ತೆರೆಯುತ್ತಿದೆ.

To Follow DriveSpark On Facebook, Click The Like Button
ಗೋವಾದಲ್ಲಿ ಆರಂಭಗೊಂಡ ಮರ್ಸಿಡಿಸ್ ಬೆಂಝ್ ಅತಿ ದೊಡ್ಡ ಮಾರಾಟ ಮಳಿಗೆ

ಸದ್ಯ ಪ್ರವಾಸಿಗರ ಸ್ಪರ್ಗವೆಂದೆ ಖ್ಯಾತಿಯಾಗಿರುವ ಗೋವಾದಲ್ಲೂ 3ಎಸ್ ಮಾದರಿಯ ಮರ್ಸಿಡಿಸ್ ಬೆಂಝ್ ಮಾರಾಟ ಮಳಿಗೆ ಆರಂಭಗೊಳಿಸಲಾಗಿದ್ದು, 34,000 ಚದರ ಅಡಿ ವಿಶಾಲ ಪ್ರದೇಶದಲ್ಲಿ 9 ಕಾರುಗಳನ್ನು ಪ್ರದರ್ಶಿಸಲು ಮತ್ತು 14 ಕಾರುಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ.

ಗೋವಾದಲ್ಲಿ ಆರಂಭಗೊಂಡ ಮರ್ಸಿಡಿಸ್ ಬೆಂಝ್ ಅತಿ ದೊಡ್ಡ ಮಾರಾಟ ಮಳಿಗೆ

'ಕೌಂಟೊ ಮೋಟಾರ್ಸ್' ಹೆಸರಿನಲ್ಲಿ ಮರ್ಸಿಡಿಸ್ ಬೆಂಝ್ ಹೊಸ ಮಾರಾಟ ಮಳಿಗೆ ಆರಂಭಗೊಂಡಿದ್ದು, ಆಲ್ಕನ್ ಹೌಸ್ ರಸ್ತೆಯಲ್ಲಿರುವ ಚಾಲ್ಟಾ ನಂ.72, ಪಿ.ಟಿ.ಶೀಟ್ ನಂ.19, ಎನ್‌ಎಚ್-4ಎ ರಿಬಂದರ್ ಎಂಬಲ್ಲಿ ಹೊಸ ಮಳಿಗೆ ಪ್ರಾರಂಭಗೊಂಡಿದೆ.

ಗೋವಾದಲ್ಲಿ ಆರಂಭಗೊಂಡ ಮರ್ಸಿಡಿಸ್ ಬೆಂಝ್ ಅತಿ ದೊಡ್ಡ ಮಾರಾಟ ಮಳಿಗೆ

ಹೀಗಾಗಿ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಸೇವೆಗಳನ್ನು ಒದಗಿಸುವ ಉದ್ದೇಶದೊಂದಿಗೆ ಕೌಶಲ್ಯ ತರಬೇತಿ ಪಡೆದ 53 ಸಿಬ್ಬಂದಿಯನ್ನ ನೇಮಕ ಮಾಡಿಕೊಳ್ಳಲಾಗಿದ್ದು, ಮರ್ಸಿಡಿಸ್ ಬೆಂಝ್ ಇಂಡಿಯಾ ಅಧ್ಯಕ್ಷ ರೋಲ್ಯಾಂಡ್ ಫೋಲ್ಜರ್ ಹೊಸ ಮಾರಾಟ ಮಳಿಗೆಗೆ ಚಾಲನೆ ನೀಡಿದರು.

ಗೋವಾದಲ್ಲಿ ಆರಂಭಗೊಂಡ ಮರ್ಸಿಡಿಸ್ ಬೆಂಝ್ ಅತಿ ದೊಡ್ಡ ಮಾರಾಟ ಮಳಿಗೆ

ಹೊಸ ಮಾರಾಟ ಮಳಿಗೆಗೆ ಚಾಲನೆ ನೀಡಿ ಮಾತನಾಡಿದ ರೋಲ್ಯಾಂಡ್ ಫೋಲ್ಜರ್, 'ದೇಶದಾದ್ಯಂತದ ನಮ್ಮ ಗ್ರಾಹಕರಿಗೆ ಹತ್ತಿರವಾಗಿರುವ ನವೀನ ಮಾರ್ಗಗಳನ್ನು ಸೃಷ್ಟಿಸಲು ನಾವು ಶ್ರಮಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವ ಮೂಲಕ ಮಾರುಕಟ್ಟೆಗಳಿಗೆ ಗ್ರಾಹಕ ಸ್ನೇಹಿಯಾಗುವ ಉತ್ಸಾಹದಲ್ಲಿದ್ದೇವೆ' ಎಂದಿದ್ದಾರೆ.

ಗೋವಾದಲ್ಲಿ ಆರಂಭಗೊಂಡ ಮರ್ಸಿಡಿಸ್ ಬೆಂಝ್ ಅತಿ ದೊಡ್ಡ ಮಾರಾಟ ಮಳಿಗೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರಮುಖ ಮಾದರಿಯ ಐಷಾರಾಮಿ ಕಾರು ಆವೃತ್ತಿಗಳ ಮೂಲಕ ಭಾರತೀಯ ಗ್ರಾಹಕರಿಗೆ ಹತ್ತಿರವಾಗಿರೋ ಮರ್ಸಿಡಿಸ್ ಸಂಸ್ಥೆಯು ಹೊಸ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದು, ಇದಕ್ಕೆ ಪೂರಕವಾಗಿ ಮಾರಾಟಗಾರರ ಜಾಲವನ್ನು ಕೂಡಾ ವಿಸ್ತರಣೆ ಮಾಡುತ್ತಿದೆ.

English summary
Read in Kannada about Goa’s Largest Mercedes Benz 3S Dealership Inaugurated.
Story first published: Tuesday, September 5, 2017, 13:26 [IST]
Please Wait while comments are loading...

Latest Photos