ಪಾರ್ಕಿಂಗ್ ಶುಲ್ಕ ನಾಲ್ಕು ಪಟ್ಟು ಹೆಚ್ಚಳ- ರಾಜಧಾನಿಯಲ್ಲಿ ವಾಹನ ಪ್ರಿಯರಿಗೆ ಶಾಕ್

Written By:

ಕಳೆದ ಒಂದು ವಾರದಿಂದ ರಾಷ್ಟ್ರ ರಾಜಧಾನಿಯು ವಿಷಾನಿಲ ತುಂಬಿದ ಗ್ಯಾಸ್‌ ಚೇಂಬರ್‌ನಂತಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸರಕಾರ ಈಗ ಸಮರೋಪಾದಿಯಲ್ಲಿ ಹಲವು ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ.

ಪಾರ್ಕಿಂಗ್ ಶುಲ್ಕ ನಾಲ್ಕು ಪಟ್ಟು ಹೆಚ್ಚಳ- ರಾಜಧಾನಿಯಲ್ಲಿ ವಾಹನ ಪ್ರಿಯರಿಗೆ ಶಾಕ್

ವಾಯು ಮಾಲಿನ್ಯ ನಿಯಂತ್ರಿಸುವುದಕ್ಕಾಗಿ ಅಧಿಕಾರಿಗಳು ವಾಹನಗಳ ಪಾರ್ಕಿಂಗ್ ಶುಲ್ಕವನ್ನು ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚು ಮಾಡುವ ಮೂಲಕ ವಾಹನ ಪ್ರಿಯರಿಗೆ ಶಾಕ್ ನೀಡಿದ್ದು, ಖಾಸಗಿ ವಾಹನ ಬಳಕೆಯನ್ನು ಕಡಿಮೆ ಮಾಡುವುದಕ್ಕಾಗಿ ಇಂತದೊಂದು ಕಠಿಣ ಕ್ರಮ ಜಾರಿ ಮಾಡಲಾಗಿದೆ.

ಪಾರ್ಕಿಂಗ್ ಶುಲ್ಕ ನಾಲ್ಕು ಪಟ್ಟು ಹೆಚ್ಚಳ- ರಾಜಧಾನಿಯಲ್ಲಿ ವಾಹನ ಪ್ರಿಯರಿಗೆ ಶಾಕ್

ಈ ವರ್ಷ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿದ್ದು, ತೀವ್ರ ಹೊಗೆ ಹಾಗೂ ಮಂಜಿನಿಂದಾಗಿ ಸಂಚಾರ ವ್ಯವಸ್ಥೆಯು ಕೂಡಾ ಸಂಪೂರ್ಣ ಹದಗೆಟ್ಟು ಹೊಗಿದೆ.

ಪಾರ್ಕಿಂಗ್ ಶುಲ್ಕ ನಾಲ್ಕು ಪಟ್ಟು ಹೆಚ್ಚಳ- ರಾಜಧಾನಿಯಲ್ಲಿ ವಾಹನ ಪ್ರಿಯರಿಗೆ ಶಾಕ್

ಇದರಿಂದ ಈ ಹಿಂದೆ ಇದ್ದ ಕಾರ್ ಪಾರ್ಕಿಂಗ್ ಶುಲ್ಕವನ್ನು 4 ಪಟ್ಟು ಹೆಚ್ಚಳ ಮಾಡಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿನ ಸಂಚಾರ ದಟ್ಟಣೆ ತಗ್ಗಿಸುಲು ಈ ಕ್ರಮ ಕೈಗೊಳ್ಳಲಾಗಿದೆ.

ಪಾರ್ಕಿಂಗ್ ಶುಲ್ಕ ನಾಲ್ಕು ಪಟ್ಟು ಹೆಚ್ಚಳ- ರಾಜಧಾನಿಯಲ್ಲಿ ವಾಹನ ಪ್ರಿಯರಿಗೆ ಶಾಕ್

ಈ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬಳಕೆಗೆ ಉತ್ತೇಜಿಸುವ ಮತ್ತು ಮಾಲಿನ್ಯ ಪ್ರಮಾಣ ತಗ್ಗಿಸುವ ಉದ್ದೇಶದಿಂದ ಈ ಕ್ರಮ ಅಗತ್ಯ ಎಂದಿರುವ ದೆಹಲಿ ಸರ್ಕಾರವು ಚಲಿಗಾಲ ಅವಧಿ ಮುಗಿಯುವ ತನಕ ಇನ್ನು ಕೆಲವು ಕಠಿಣ ನಿಯಮಗಳನ್ನು ಮುಂದುವರಿಸುವ ಬಗ್ಗೆ ಸುಳಿವು ನೀಡಿದೆ.

ತಪ್ಪದೇ ಓದಿ- ನಂಬಿದರೆ ನಂಬಿ ಬಿಟ್ಟರೆ ಬಿಡಿ... 10ನೇ ತರಗತಿ ಹುಡುಗ ಕಂಡು ಹಿಡಿದ ಈ ಬೈಕ್ ನೀರಿನಿಂದ ಚಲಿಸುತ್ತೆ !!

ಪಾರ್ಕಿಂಗ್ ಶುಲ್ಕ ನಾಲ್ಕು ಪಟ್ಟು ಹೆಚ್ಚಳ- ರಾಜಧಾನಿಯಲ್ಲಿ ವಾಹನ ಪ್ರಿಯರಿಗೆ ಶಾಕ್

ಮತ್ತೆ ಜಾರಿಯಾಗುತ್ತಾ ಸಮ-ಬೆಸ ಸಂಚಾರ ನಿಯಮ?

ಹೌದು.. ಸದ್ಯ ಪರಿಸ್ಥಿತಿಯಲ್ಲಿ ಧೂಮ ಕವಿದ ಮಂಜಿನ ವಾತಾವರಣದಿಂದ ಜನರಲ್ಲಿ ಉಸಿರಾಟದ ಸಮಸ್ಯೆಗಳು ಕಾಣಿಸತೊಡಗಿವೆ. ಇದರಿಂದ ಮಕ್ಕಳು, ವಯೋವೃದ್ಧರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದೆ.

ಪಾರ್ಕಿಂಗ್ ಶುಲ್ಕ ನಾಲ್ಕು ಪಟ್ಟು ಹೆಚ್ಚಳ- ರಾಜಧಾನಿಯಲ್ಲಿ ವಾಹನ ಪ್ರಿಯರಿಗೆ ಶಾಕ್

ಇಂತಹ ವಿಷಮ ಪರಿಸ್ಥಿತಿಯಿಂದ ಪಾರಾಗಲು ದಿಲ್ಲಿ ಸರಕಾರ ಸಮ-ಬೆಸ ವಾಹನ ಸಂಚಾರ ನಿಯಮವನ್ನು ಮತ್ತೆ ಜಾರಿಗೆ ತರಲಿದೆ ಎನ್ನಲಾಗಿದ್ದು, ಈ ಮೂಲಕ ಹೆಚ್ಚುತ್ತಿರುವ ಮಾಲಿನ್ಯವನ್ನು ತಗ್ಗಿಸುವ ಯೋಜನೆ ಹೊಂದಲಾಗಿದೆ.

Trending On DriveSpark Kannada:

ಕಾರು ಶುಚಿಯಾಗಿಡಲು 10 ಸುಲಭ ವಿಧಾನಗಳು

ತಮ್ಮ ಹುಟ್ಟುಹಬ್ಬದಂದು ಕಾರ್ ಡ್ರೈವರ್ ಗೆ ದುಬಾರಿ ಗಿಫ್ಟ್ ಕೊಟ್ಟ ಅನುಷ್ಕಾ ಶೆಟ್ಟಿ..!!

English summary
Read in Kannada: Parking Charges Must Be Hiked By 4 Times In Delhi To Curb Air Pollution.
Story first published: Friday, November 10, 2017, 14:39 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark