ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಮುಗ್ಗರಿಸಿದ ರೆನಾಲ್ಟ್ ಡಸ್ಟರ್..!!

ಹೊಸ ಕಾರು ಬಿಡುಗಡೆಗೂ ಮುನ್ನ ಸುರಕ್ಷಾ ವಿಚಾರವಾಗಿ ನಡೆಸಲಾಗುವ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ರೆನಾಲ್ಟ್ ಸಂಪೂರ್ಣವಾಗಿ ಮುಗ್ಗರಿಸಿದೆ.

By Praveen

ಹೊಸ ಕಾರು ಖರೀದಿಗೂ ಮುನ್ನ ಅದರ ವಿನ್ಯಾಸ ಮತ್ತು ಬೆಲೆಗಳು ಎಷ್ಟು ಮುಖ್ಯವೋ ಸುರಕ್ಷಾ ವಿಧಾನಗಳು ಅಷ್ಟೇ ಮುಖ್ಯ. ಆದ್ರೆ ಸುರಕ್ಷಾ ವಿಚಾರದಲ್ಲಿ ರೆನಾಲ್ಟ್ ಡಸ್ಟರ್ ಹೊಸ ಮಾದರಿಯ ರೇಟಿಂಗ್ ಸೊನ್ನೆ ಸುತ್ತಿದೆ.

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಮುಗ್ಗರಿಸಿದ ರೆನಾಲ್ಟ್ ಡಸ್ಟರ್..!!

ಏನಿದು ಕ್ರ್ಯಾಶ್ ಟೆಸ್ಟಿಂಗ್

ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‌ಸಿಎಪಿಯು, ಕಾರುಗಳಲ್ಲಿನ ಸುರಕ್ಷತೆಗೆ ರೇಟಿಂಗ್ ನೀಡುತ್ತದೆ.

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಮುಗ್ಗರಿಸಿದ ರೆನಾಲ್ಟ್ ಡಸ್ಟರ್..!!

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 0 ಸ್ಟಾರ್ ರೇಟಿಂಗ್ ಬಂದಲ್ಲಿ ಅದು ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ.

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಮುಗ್ಗರಿಸಿದ ರೆನಾಲ್ಟ್ ಡಸ್ಟರ್..!!

ಇದೀಗ ರೆನಾಲ್ಟ್ ಡಸ್ಟರ್ ಕಾರು ಮಾದರಿ ಕೂಡಾ 0 ಸ್ಟಾರ್ ರೇಟಿಂಗ್ ಪಡೆದಿದ್ದು, ರೆನಾಲ್ಟ್‌ನ ಮತ್ತೊಂದು ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಡಸ್ಟರ್ ಕಾರು ಮಾದರಿಯೂ 2 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಮುಗ್ಗರಿಸಿದ ರೆನಾಲ್ಟ್ ಡಸ್ಟರ್..!!

ಪ್ರತಿ ಕಾರು ಮಾದರಿಗಳಿಗೂ ಜಾಗತಿಕ ಪ್ರಮಾಣ ಪತ್ರದ ಅವಶ್ಯಕತೆಯಿದ್ದು, ರೆನಾಲ್ಟ್ ಡಸ್ಟರ್ ಬೇಸಿಕ್ ಮಾದರಿ ಸುರಕ್ಷಾ ವಿಚಾರದಲ್ಲಿ ಮುಗ್ಗಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಮುಗ್ಗರಿಸಿದ ರೆನಾಲ್ಟ್ ಡಸ್ಟರ್..!!

ಹೀಗಾಗಿ ಅಪಘಾತ ಸಂದರ್ಭಗಳಲ್ಲಿ ಕಾರು ಚಾಲಕನಿಗೆ ಭಾರೀ ಪ್ರಮಾಣದ ಹಾನಿ ಉಂಟಾಗುವ ಸಾಧ್ಯತೆಗಳಿದ್ದು, ರೆನಾಲ್ಟ್ ಡಸ್ಟರ್ ಖರೀದಿಸುವುದು ಉತ್ತಮವೇ ಎಂಬ ಪ್ರಶ್ನೆ ಶುರುವಾಗಿವೆ.

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಮುಗ್ಗರಿಸಿದ ರೆನಾಲ್ಟ್ ಡಸ್ಟರ್..!!

ರೆನಾಲ್ಟ್ ಸಂಸ್ಥೆಯ ಮತ್ತೊಂದು ಕಾರು ಮಾದರಿಯಾಗಿರುವ ಕಂಪ್ಯಾಕ್ಟ್ ಸೆಡಾನ್ ಡಸ್ಟರ್‌ನಲ್ಲಿ ಏರ್‌ಬ್ಯಾಗ್ ವ್ಯವಸ್ಥೆ ಹೊಂದಿದ್ದು, 2 ಸ್ಟಾರ್ ರೇಟಿಂಗ್‌ನೊಂದಿಗೆ ಸಾಧರಣ ಪ್ರದರ್ಶನ ತೊರಿದೆ.

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಮುಗ್ಗರಿಸಿದ ರೆನಾಲ್ಟ್ ಡಸ್ಟರ್..!!

ವಿವಾದದಲ್ಲಿ ರೆನಾಲ್ಟ್ ಡಸ್ಟರ್

ಹೌದು ಈ ಹಿಂದೆ 2015ರಲ್ಲಿ ನಡೆದಿದ್ದ ಲ್ಯಾಟಿನ್ ಎನ್‌ಸಿಎಪಿ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದ್ದ ರೆನಾಲ್ಟ್ ಡಸ್ಟರ್ ಏರ್‌ಬ್ಯಾಗ್ ಮಾದರಿಯ ಈ ಭಾರೀ ಕಳಪೆ ಪ್ರದರ್ಶನ ತೋರಿದೆ.

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಮುಗ್ಗರಿಸಿದ ರೆನಾಲ್ಟ್ ಡಸ್ಟರ್..!!

ಈ ಹಿನ್ನೆಲೆ ಅನುಮಾನ ವ್ಯಕ್ತಪಡಿಸಿರೋ ಗ್ಲೋಬಲ್ ಎನ್‌ಸಿಎಪಿ ಕಾರ್ಯದರ್ಶಿ ಡೇವಿಡ್ ವಾರ್ಡ್, ಸುರಕ್ಷಾ ವಿಚಾರದಲ್ಲಿ ರೆನಾಲ್ಟ್ ಡಸ್ಟರ್ ಕ್ರಮಗಳನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ.

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಮುಗ್ಗರಿಸಿದ ರೆನಾಲ್ಟ್ ಡಸ್ಟರ್..!!

ಅಲ್ಲದೇ ರೆನಾಲ್ಟ್ ಡಸ್ಟರ್ ಕಳಪೆ ಪ್ರದರ್ಶನಕ್ಕೆ ಬೇಸರ ವ್ಯಕ್ತಪಡಿಸಿರುವ ಡೇವಿಡ್ ವಾರ್ಡ್, ಭಾರತೀಯ ಮಾರುಕಟ್ಟೆಯ ಬೇಡಿಕೆ ಅನುಗುಣವಾಗಿ ಗುಣಮಟ್ಟದ ಕಾರು ಪೂರೈಕೆ ಅವಶ್ಯಕತೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಮುಗ್ಗರಿಸಿದ ರೆನಾಲ್ಟ್ ಡಸ್ಟರ್..!!

ಇನ್ನು ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿನ ಕಳಪೆ ಪ್ರದರ್ಶನ ಕುರಿತು ಭಾರತದಲ್ಲೂ ಭಾರೀ ಚರ್ಚೆಗಳು ಶುರುವಾಗಿದ್ದು, ರೆನಾಲ್ಟ್ ಖರೀದಿಗೆ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಮುಗ್ಗರಿಸಿದ ರೆನಾಲ್ಟ್ ಡಸ್ಟರ್..!!

ಈಗಲಾದ್ರೂ ಎಚ್ಚೆತ್ತುಕೊಳ್ಳಬೇಕಿರುವ ರೆನಾಲ್ಟ್ ಡಸ್ಟರ್ ಸಂಸ್ಥೆಯು, ಗ್ರಾಹಕರ ಪರ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸುವ ಅವಶ್ಯಕತೆ ಇದೆ.

ಗ್ಲೋಬಲ್ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟಿಂಗ್ ವೀಡಿಯೋ ಇಲ್ಲಿದೆ ನೋಡಿ.

Most Read Articles

Kannada
English summary
The basic variant of the Indian Renault Duster has scored zero stars in the crash tests conducted by Global NCAP.
Story first published: Saturday, May 13, 2017, 20:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X