ದೇಶದಲ್ಲೇ ಮೊದಲ ಲಿಥಿಯಮ್ ಅಯಾನ್ ಬ್ಯಾಟರಿ ಉತ್ಪಾದನಾ ಘಟಕಕ್ಕೆ ಚಾಲನೆ

ದೇಶದಲ್ಲೇ ಮೊದಲ ಬಾರಿಗೆ ಲಿಥಿಯಮ್ ಅಯಾನ್ ಬ್ಯಾಟರಿ ಉತ್ಪಾದನಾ ಘಟಕವನ್ನು ಆರಂಭಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ಹೊಸ ಉತ್ಪಾದನಾ ಘಟಕ ನಿರ್ಮಾಣಕ್ಕೆ ಚಾಲನೆ ನೀಡಿದರು.

By Praveen

ಇಂಡೋ-ಜಪಾನ್ ಆಟೋ ಉತ್ಪಾದನಾ ಸಂಸ್ಥೆಗಳಾದ ಮಾರುತಿ ಸುಜುಕಿ ಸಂಸ್ಥೆಗಳು ದೇಶದಲ್ಲೇ ಮೊದಲ ಬಾರಿಗೆ ಲಿಥಿಯಮ್ ಅಯಾನ್ ಬ್ಯಾಟರಿ ಉತ್ಪಾದನಾ ಘಟಕವನ್ನು ಆರಂಭಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ಹೊಸ ಉತ್ಪಾದನಾ ಘಟಕ ನಿರ್ಮಾಣಕ್ಕೆ ಚಾಲನೆ ನೀಡಿದರು.

ದೇಶದಲ್ಲೇ ಮೊದಲ ಲಿಥಿಯಮ್ ಅಯಾನ್ ಬ್ಯಾಟರಿ ಉತ್ಪಾದನಾ ಘಟಕಕ್ಕೆ ಚಾಲನೆ

2030ರ ವೇಳೆಗೆ ಜಗತ್ತಿನಾದ್ಯಂತ ಶೇ. 90 ರಷ್ಟು ವಾಹನಗಳು ಎಲೆಕ್ಟ್ರಿಕ್‌ಕರಣಗೊಳಿಸುವ ನಿಟ್ಟಿನಲ್ಲಿ ಎಲ್ಲ ಆಟೋ ಉತ್ಪಾದಕರು ಬೃಹತ್ ಯೋಜನೆಗಳನ್ನು ರೂಪಿಸುತ್ತಿದ್ದು, ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಸಿರುವ ಮಾರುತಿ ಸುಜುಕಿ ಅತ್ಯುತ್ತಮ ಗುಣಮಟ್ಟದ ಲಿಥಿಯಮ್ ಅಯಾನ್ ಬ್ಯಾಟರಿ ಉತ್ಪಾದನಾ ಘಟಕವನ್ನು ತೆರೆಯುತ್ತಿದೆ.

ದೇಶದಲ್ಲೇ ಮೊದಲ ಲಿಥಿಯಮ್ ಅಯಾನ್ ಬ್ಯಾಟರಿ ಉತ್ಪಾದನಾ ಘಟಕಕ್ಕೆ ಚಾಲನೆ

ಇಂಡಸ್ಟ್ರಿಯಲ್ ಹಬ್ ಎಂದೇ ಖ್ಯಾತಿ ಪಡೆದಿರುವ ಗುಜರಾತಿನಲ್ಲೇ ಲಿಥಿಯಮ್ ಅಯಾನ್ ಬ್ಯಾಟರಿ ಉತ್ಪಾದನಾ ಘಟಕ ಆರಂಭಗೊಳ್ಳುತ್ತಿದ್ದು, ಮಾರುತಿ ಸುಜುಕಿ ಹನ್ಸಲ್ಪುರ್ ಉತ್ಪಾದನಾ ಘಟಕದ ಬಳಿಯೇ ಬ್ಯಾಟರಿ ಉತ್ಪಾದನಾ ಘಟಕವೂ ತಲೆ ಎತ್ತಲಿದೆ.

ದೇಶದಲ್ಲೇ ಮೊದಲ ಲಿಥಿಯಮ್ ಅಯಾನ್ ಬ್ಯಾಟರಿ ಉತ್ಪಾದನಾ ಘಟಕಕ್ಕೆ ಚಾಲನೆ

ಲಿಥಿಲಿಯ್ ಅಯಾನ್ ಬ್ಯಾಟರಿ ಉತ್ಪಾದನಾ ಘಟಕಕ್ಕೆ ಮಾರುತಿ ಸುಜುಕಿ ಸಂಸ್ಥೆಯು ರೂ.1,137 ಕೋಟಿ ಹೂಡಿಕೆ ಮಾಡುತ್ತಿದ್ದು, 2020ರ ವೇಳೆಗೆ ಲಿಥಿಯನ್ ಅಯಾನ್ ಬ್ಯಾಟರಿ ಉತ್ಪಾದನೆಯನ್ನು ಆರಂಭಗೊಳಿಸುವ ಯೋಜನೆ ಹೊಂದಲಾಗಿದೆ.

ದೇಶದಲ್ಲೇ ಮೊದಲ ಲಿಥಿಯಮ್ ಅಯಾನ್ ಬ್ಯಾಟರಿ ಉತ್ಪಾದನಾ ಘಟಕಕ್ಕೆ ಚಾಲನೆ

ಇನ್ನು ಈ ಬೃಹತ್ ಯೋಜನೆಗೆ ಜಪಾನ್ ಮೂಲದ ಪ್ರತಿಷ್ಠಿತ ಸಂಸ್ಥೆಗಳಾದ ತೋಷಿಬಾ ಹಾಗೂ ಡೆನ್ಸೋ ಸಂಸ್ಥೆಗಳು ಕೂಡಾ ಕೈಜೋಡಿಸಿದ್ದು, ಮಾರುತಿ ಸುಜುಕಿ(ಶೇ.50), ತೋಷಿಬಾ(ಶೇ.40) ಮತ್ತು ಡೆನ್ಸೋ(ಶೇ.10) ರಷ್ಟು ಬಂಡವಾಳ ಹೂಡಿಕೆ ಮಾಡುತ್ತಿವೆ.

ದೇಶದಲ್ಲೇ ಮೊದಲ ಲಿಥಿಯಮ್ ಅಯಾನ್ ಬ್ಯಾಟರಿ ಉತ್ಪಾದನಾ ಘಟಕಕ್ಕೆ ಚಾಲನೆ

ಮಾರುತಿ ಸುಜುಕಿಯ ಬೃಹತ್ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಲಿರುವ ತೋಷಿಬಾ ಹಾಗೂ ಡೆನ್ಸೋ ಸಂಸ್ಥೆಗಳು ತಂತ್ರಜ್ಞಾನ ಮತ್ತು ಸಂಶೋಧನಾ ವಿಭಾಗದಲ್ಲಿ ಸಹಾಯ ಮಾಡಲಿವೆ. ಈ ಮೂಲಕ ಅದೇ ಉತ್ಪನ್ನಗಳನ್ನು ಬಳಕೆ ಮಾಡಿಕೊಂಡು ಅತ್ಯುತ್ತಮ ಮಾದರಿಯಎಲೆಕ್ಟ್ರಿಕ್ ಕಾರುಗಳನ್ನು ಮಾರುತಿ ಸುಜುಕಿ ನಿರ್ಮಾಣ ಮಾಡಲಿದೆ.

ದೇಶದಲ್ಲೇ ಮೊದಲ ಲಿಥಿಯಮ್ ಅಯಾನ್ ಬ್ಯಾಟರಿ ಉತ್ಪಾದನಾ ಘಟಕಕ್ಕೆ ಚಾಲನೆ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಸದ್ಯ ಮಾರುಕಟ್ಟೆಯಲ್ಲಿ ಲಿಥಿಯಮ್ ಅಯಾನ್ ಬ್ಯಾಟರಿಗಳಿಗೆ ಭಾರೀ ಬೇಡಿಕೆ ಇದ್ದು, ಇವುಗಳು ಒಂದು ಚಾರ್ಜ್ ಮಾಡಿದ್ದಲ್ಲಿ ಸರಾಸರಿ 350 ರಿಂದ 450 ಕಿಮಿ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿವೆ.

ದೇಶದಲ್ಲೇ ಮೊದಲ ಲಿಥಿಯಮ್ ಅಯಾನ್ ಬ್ಯಾಟರಿ ಉತ್ಪಾದನಾ ಘಟಕಕ್ಕೆ ಚಾಲನೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಉತ್ತಮ ಕಾರ್ಯಕ್ಷಮತೆವುಳ್ಳ ಲಿಥಿಮ್ ಅಯಾನ್ ಬ್ಯಾಟರಿಗಳಿಗೆ ಸಾಕಷ್ಟು ಬೇಡಿಕೆಯಿದ್ದು, ಇದೇ ಉದ್ದೇಶದಿಂದ ತೋಷಿಬಾ ಮತ್ತು ಡೆನ್ಸೋ ಸಂಸ್ಥೆಗಳ ಜೊತೆ ಕೈಜೋಡಿಸಿರುವ ಮಾರುತಿ ಸುಜುಕಿಯು, ಸುಧಾರಿತ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಾಣ ಮಾಡಲಿದೆ.

Most Read Articles

Kannada
English summary
Read in Kannada about India's First Lithium Ion Battery Plant To Be Setup And Ready By 2020.
Story first published: Friday, September 15, 2017, 13:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X