ಭಾರತಕ್ಕೆ ಪ್ರವೇಶಿಸುವ ಬಗ್ಗೆ ಸರ್ಕಾರದೊಂದಿಗೆ ಮಾತುಕತೆಗೆ ಮುಂದಾದ ಟೆಸ್ಲಾ

Written By:

ಎಲೆಕ್ಟ್ರಿಕ್ ಕಾರು ದೈತ್ಯ ಟೆಸ್ಲಾ ಕಂಪನಿಯು ಭಾರತೀಯ ಮಾರುಕಟ್ಟೆಗೆ ತನ್ನ ಪ್ರವೇಶದ ಬಗ್ಗೆ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.

ಭಾರತಕ್ಕೆ ಪ್ರವೇಶಿಸುವ ಬಗ್ಗೆ ಸರ್ಕಾರದೊಂದಿಗೆ ಮಾತುಕತೆಗೆ ಮುಂದಾದ ಟೆಸ್ಲಾ

ಅಮೆರಿಕನ್ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಬಹಳ ಉತ್ಸುಕವಾಗಿದ್ದು, ಈ ಕಂಪನಿಯ ಕಂಪನಿಯ ಸ್ಥಾಪಕ ಎಲಾನ್ ಮುಸ್ಕ್, ಸದ್ಯದರಲ್ಲಿಯೇ ತಮ್ಮ ವಿದ್ಯುತ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಮಾಹಿತಿ ಬಹಿರಂಗಪಡಿಸಿದ್ದಾರೆ.

ಭಾರತಕ್ಕೆ ಪ್ರವೇಶಿಸುವ ಬಗ್ಗೆ ಸರ್ಕಾರದೊಂದಿಗೆ ಮಾತುಕತೆಗೆ ಮುಂದಾದ ಟೆಸ್ಲಾ

ಚಿಲ್ಲರೆ ವ್ಯಾಪಾರದ ಹಾದಿಯ ಮೂಲಕ ಟೆಸ್ಲಾ ಬ್ರಾಂಡ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಭಾರತದಲ್ಲಿ ಕಾರ್ಯ ನಿರ್ವಹಿಸಲು ತನ್ನ ಆಸಕ್ತಿಯನ್ನು ಹೊಂದಿರುವುದಾಗಿ ವಾಹನ ತಯಾರಕ ಸಂಸ್ಥೆ ಸರ್ಕಾರಕ್ಕೆ ಪಾತ್ರ ಬರೆದಿದೆ.

ಭಾರತಕ್ಕೆ ಪ್ರವೇಶಿಸುವ ಬಗ್ಗೆ ಸರ್ಕಾರದೊಂದಿಗೆ ಮಾತುಕತೆಗೆ ಮುಂದಾದ ಟೆಸ್ಲಾ

ಆಮದು ಸುಂಕದ ಮತ್ತು ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಕಾದ ಅವಶ್ಯಕತೆಗಳ ಪೂರೈಸುವ ಬಗ್ಗೆ ಮಾಸ್ಕ್ ಟ್ವೀಟ್ ಮಾಡಿದ ನಂತರ ಈ ಬೆಳವಣಿಗೆಗಳು ನೆಡೆದಿರುವುದು ಖುಷಿಯ ಸಂಗತಿಯಾಗಿದೆ.

ಭಾರತಕ್ಕೆ ಪ್ರವೇಶಿಸುವ ಬಗ್ಗೆ ಸರ್ಕಾರದೊಂದಿಗೆ ಮಾತುಕತೆಗೆ ಮುಂದಾದ ಟೆಸ್ಲಾ

2030ರ ಹೊತ್ತಿಗೆ ಪರಿಸರ ಸ್ನೇಹಿ ವಾಹನಗಳಿಗೆ ಭಾರತವನ್ನು ಬದಲಾವಣೆ ಮಾಡುವ ಸಲುವಾಗಿ ವಿದ್ಯುತ್ ವಾಹನಗಳ ಬಳಕೆಯನ್ನು ಭಾರತೀಯ ಸರ್ಕಾರವು ಪ್ರೋತ್ಸಾಹಿಸುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಭಾರತಕ್ಕೆ ಪ್ರವೇಶಿಸುವ ಬಗ್ಗೆ ಸರ್ಕಾರದೊಂದಿಗೆ ಮಾತುಕತೆಗೆ ಮುಂದಾದ ಟೆಸ್ಲಾ

ಇತ್ತೀಚೆಗೆ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಳವಣಿಗೆಯು ಕ್ಷಿಪ್ರಗತಿಯಲ್ಲಿ ಆಗುತ್ತಿರುವುದು ಟೆಸ್ಲಾ ಕಂಪನಿಗೆ ಭಾರತ ಒಂದು ಮುಖ್ಯ ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎನ್ನಬಹುದು ಹಾಗು ಮಹತ್ವಾಕಾಂಕ್ಷೆಯ ಈ ಗುರಿಯನ್ನು ಸಾಧಿಸುವಲ್ಲಿ ಟೆಸ್ಲಾನಂತಹ ಆಟೋಮೇಕರ್‌ಗಳು ಪ್ರಮುಖ ಪಾತ್ರವಹಿಸುತ್ತಾರೆ ಎನ್ನುವುದನ್ನು ಮರೆಯಬಾರದು.

ಭಾರತಕ್ಕೆ ಪ್ರವೇಶಿಸುವ ಬಗ್ಗೆ ಸರ್ಕಾರದೊಂದಿಗೆ ಮಾತುಕತೆಗೆ ಮುಂದಾದ ಟೆಸ್ಲಾ

ದೇಶದೊಳಗೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಮುಂದೆ ನಿಲ್ಲಿಸಲಾಗುವುದು ಎಂದು ಇತ್ತೀಚಿಗೆ ನಿತಿನ್ ಗಡ್ಕರಿ ಹೇಳಿಕೆ ನೀಡಿದ್ದರು. ಇದನ್ನೆಲ್ಲಾ ಗಮನಿಸಿದರೆ, ಭಾರತಕ್ಕೆ ಪ್ರವೇಶಿಸಲು ಟೆಸ್ಲಾ ಕಂಪನಿಗೆ ಉತ್ತಮ ಸಮಯ ಎಂದು ತೋರುತ್ತಿದೆ.

English summary
American electric vehicle manufacturer Tesla is very keen to enter the Indian market. The company's boss Elon Musk has already revealed that it's electric cars will be launched in India.
Story first published: Wednesday, September 27, 2017, 16:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark