'ಕ್ಯಾಮ್ರಿ ಹೈಬ್ರಿಡ್' ಕಾರಿನ ಮಾರಾಟ ನಿಲ್ಲಿಸಿದ ಟೊಯೊಟಾ !! ಕಾರಣ ತಿಳ್ಕೊಳಿ

ಜಿಎಸ್‌ಟಿ ಕಾರಣದಿಂದಾಗಿ ಹೈಬ್ರಿಡ್ ಕಾರುಗಳ ಬೆಲೆ ಗಗನಕ್ಕೇರಿದ್ದು, ಈ ವಿಚಾರವನ್ನು ಮುಂದಿಟ್ಟುಕೊಂಡು ಟೊಯೊಟಾ ಸಂಸ್ಥೆಯ ಐಷಾರಾಮಿ ಕ್ಯಾಮ್ರಿ ಹೈಬ್ರಿಡ್ ಸೆಡಾನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.

By Girish

ಜಿಎಸ್‌ಟಿ ಕಾರಣದಿಂದಾಗಿ ಹೈಬ್ರಿಡ್ ಕಾರುಗಳ ಬೆಲೆ ಗಗನಕ್ಕೇರಿದ್ದು, ಈ ವಿಚಾರವನ್ನು ಮುಂದಿಟ್ಟುಕೊಂಡು ಟೊಯೊಟಾ ಸಂಸ್ಥೆಯ ಐಷಾರಾಮಿ ಕ್ಯಾಮ್ರಿ ಹೈಬ್ರಿಡ್ ಸೆಡಾನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.

'ಕ್ಯಾಮ್ರಿ ಹೈಬ್ರಿಡ್' ಕಾರಿನ ಮಾರಾಟ ನಿಲ್ಲಿಸಿದ ಟೊಯೊಟಾ ? ಕಾರಣ ತಿಳ್ಕೊಳಿ

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಕಳೆದ ಮೂರು ತಿಂಗಳುಗಳಲ್ಲಿ ಕ್ಯಾಮ್ರಿ ಹೈಬ್ರಿಡ್ ಸೆಡಾನ್ ಕಾರಿನ ಮಾರಾಟವು ಶೇಕಡಾ 73%ರಷ್ಟು ಇಳಿಕೆ ಕಂಡಿದೆ. ಕ್ಯಾಮ್ರಿ ಹೈಬ್ರಿಡ್ ಮಾರಾಟ ಸ್ಥಗಿತಗೊಳಿಸಿದ ನಂತರ ಉತ್ಪಾದನಾ ಘಟಕವನ್ನು ಕ್ಯಾಮ್ರಿ ಪೆಟ್ರೋಲ್(ಹೈಬ್ರಿಡ್ ಅಲ್ಲದ ಆವೃತ್ತಿ)ಯನ್ನು ನಿರ್ಮಿಸಲು ಉಪಯೋಗಿಸಲಿದೆ.

'ಕ್ಯಾಮ್ರಿ ಹೈಬ್ರಿಡ್' ಕಾರಿನ ಮಾರಾಟ ನಿಲ್ಲಿಸಿದ ಟೊಯೊಟಾ ? ಕಾರಣ ತಿಳ್ಕೊಳಿ

ಹೈಬ್ರಿಡ್ ಕಾರುಗಳ ಮೇಲೆ ಈ ಹಿಂದಿನ ತೆರಿಗೆ ರಚನೆಯು ಕೇವಲ 30%(12.5% ಅಬಕಾರಿ ಸುಂಕ + 14.5% ವ್ಯಾಟ್ ಮತ್ತು 1% ಎನ್‌ಸಿಸಿಡಿ)ಇತ್ತು. ಈ ತೆರಿಗೆ ನೀತಿಯಿಂದಾಗಿ ಹೈಬ್ರಿಡ್ ಕಾರುಗಳನ್ನು ಮಾರಾಟ ಮಾಡಲು ಕಂಪನಿಗಳಿಗೆ ಹೆಚ್ಚು ಅವಕಾಶವಿತ್ತು ಎನ್ನಬಹುದು.

'ಕ್ಯಾಮ್ರಿ ಹೈಬ್ರಿಡ್' ಕಾರಿನ ಮಾರಾಟ ನಿಲ್ಲಿಸಿದ ಟೊಯೊಟಾ ? ಕಾರಣ ತಿಳ್ಕೊಳಿ

ಆದರೆ, ಸದ್ಯ ಹೈಬ್ರಿಡ್ ಕಾರುಗಳ ಮೇಲೆ ಸರ್ಕಾರ ಶೇಕಡಾ 48%(28% ಜಿಎಸ್‌ಟಿ + 15% ಸೆಸ್) ಸುಂಕ ಹೇರಿಕೆ ಮಾಡಲು ನಿರ್ಧಾರ ತೆಗೆದುಕೊಂಡಿದ್ದು, ಇದರಿಂದಾಗಿ ಹೈಬ್ರಿಡ್ ಕಾರುಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರಿರುವುದಂತೂ ಖಂಡಿತ.

'ಕ್ಯಾಮ್ರಿ ಹೈಬ್ರಿಡ್' ಕಾರಿನ ಮಾರಾಟ ನಿಲ್ಲಿಸಿದ ಟೊಯೊಟಾ ? ಕಾರಣ ತಿಳ್ಕೊಳಿ

ಈ ಮೊದಲು ಟೊಯೊಟಾ ಸಂಸ್ಥೆಯ ಪೆಟ್ರೋಲ್ ಆವೃತಿಗೆ ಹೋಲಿಕೆ ಮಾಡಿದರೆ ಕ್ಯಾಮ್ರಿ ಹೈಬ್ರಿಡ್ ಕಾರಿನ ಬೆಲೆ ರೂ.1.3 ಲಕ್ಷ ಬೆಲೆ ಹೆಚ್ಚಿಗೆ ಇತ್ತು. ಆದರೆ ಈ ಕಾರುಗಳ ವ್ಯತ್ಯಾಸ ಸದ್ಯ ರೂ.7.5 ಲಕ್ಷವಿದೆ. ಇದರಿಂದಾಗಿ ಹೈಬ್ರಿಡ್ ಕಾರುಗಳ ಬದಲಾಗಿ ಪೆಟ್ರೋಲ್ ಆವೃತ್ತಿಯ ಕಾರುಗಳನ್ನು ಕೊಳ್ಳಲು ಹೆಚ್ಚಿನ ಗ್ರಾಹಕರು ಮುಂದಾಗಿರುವುದು ಈ ಮಾರಾಟ ಇಳಿಕೆಗೆ ಕಾರಣವಾಗಿದೆ.

'ಕ್ಯಾಮ್ರಿ ಹೈಬ್ರಿಡ್' ಕಾರಿನ ಮಾರಾಟ ನಿಲ್ಲಿಸಿದ ಟೊಯೊಟಾ ? ಕಾರಣ ತಿಳ್ಕೊಳಿ

ಮುಂಬರುವ ದಿನಗಳಲ್ಲಿ ಹೆಚ್ಚಿನ ಹೈಬ್ರಿಡ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವುದಿಲ್ಲವೆಂದು ಟೊಯೊಟಾ ಹೇಳಿಕೊಂಡಿದ್ದು, ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಬದಲಾಗಿ ಹೈಬ್ರಿಡ್ ಕಾರುಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಕ್ಕೆ ಕೊಂಚ ಮಟ್ಟಿನ ಹಿನ್ನಡೆಯಾಗಿದೆ ಎನ್ನಬಹುದು.

Most Read Articles

Kannada
English summary
A high tax rate on hybrids due to the new Goods and Services Tax (GST) has resulted in Toyota discontinuing the Camry Hybrid luxury sedan from the Indian market.
Story first published: Tuesday, October 24, 2017, 14:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X