ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಆಸ್ಟನ್ ಮಾರ್ಟಿನ್ ಹೊಸ ಪ್ಲ್ಯಾನ್

ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಆಸ್ಟನ್ ಮಾರ್ಟಿನ್ ಸಂಸ್ಥೆಯು ವಿಶ್ವಾದ್ಯಂತ ತನ್ನ ವಿವಿಧ ಮಾದರಿಯ ಕಾರು ಆವೃತ್ತಿಗಳ ಮೂಲಕ ಕಾರು ಪ್ರಿಯರ ಮನಸ್ಸಿನಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಂಡಿದೆ. ಆದ್ರೆ ಇತ್ತೀಚೆಗೆ ಬದಲಾಗುತ್ತಿರುವ ಕೆಲವು ಮೋಟಾರ್ ವೆಹಿಕಲ್ ನಿಯಮಗಳಿಂದ ವಿಂಟೇಜ್ ಕಾರು ಮಾಲೀಕರಿಗೆ ಸಂಕಷ್ಟ ಎದುರುರಾಗಿದ್ದು, ಇದಕ್ಕಾಗಿ ಆಸ್ಟನ್ ಮಾರ್ಟಿನ್ ಸಂಸ್ಥೆಯು ಹೊಸದೊಂದು ಪ್ಲ್ಯಾನ್ ಮಾಡಿರುವುದು ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ.

ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಆಸ್ಟನ್ ಮಾರ್ಟಿನ್ ಹೊಸ ಪ್ಲ್ಯಾನ್

ಜಗತ್ತಿನಾದ್ಯಂತ ದಿನಂಪ್ರತಿ ಲಕ್ಷಾಂತರ ಹೊಸ ವಾಹನಗಳು ರಸ್ತೆಗಿಳಿಯುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಮಾಲಿನ್ಯ ಪ್ರಮಾಣವು ಕೂಡಾ ಹೆಚ್ಚಳವಾಗುತ್ತಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯ ಇಂಧನ ಮೂಲಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದರಲ್ಲಿ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳ ಅಭಿವೃದ್ಧಿ ಮೇಲೆ ವಿಶೇಷ ಒತ್ತು ನೀಡಲಾಗುತ್ತಿದೆ.

ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಆಸ್ಟನ್ ಮಾರ್ಟಿನ್ ಹೊಸ ಪ್ಲ್ಯಾನ್

2030ರ ವೇಳೆಗೆ ವಿಶ್ವದ ಪ್ರತಿಯೊಂದು ರಾಷ್ಟ್ರವು ಸಹ ಶೇ.100ರಷ್ಟು ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡಬೇಕೆಂಬ ಉದ್ದೇಶದಿಂದ ಹಲವಾರು ಯೋಜನೆಗಳನ್ನು ತರುತ್ತಿರುವುದಲ್ಲದೇ ಪೆಟ್ರೋಲ್ ಮತ್ತು ಡಿಸೇಲ್ ಅವಲಂಬನೆ ತಗ್ಗಿಸುವ ಉದ್ದೇಶದಿಂದ ಎಲೆಕ್ಟ್ರಿಕ್ ಕಾರುಗಳು, ಬೈಕ್‌ಗಳು ಮತ್ತು ಸಾರ್ವಜನಿಕ ಬಳಕೆಯ ಎಲೆಕ್ಟ್ರಿಕ್ ಬಸ್‌ಗಳ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.

ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಆಸ್ಟನ್ ಮಾರ್ಟಿನ್ ಹೊಸ ಪ್ಲ್ಯಾನ್

ಇದರೊಂದಿಗೆ ಅವಧಿ ಮೀರಿದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಳಕೆಗೆ ನಿಷೇಧ ಕೂಡಾ ಹೇರಲಾಗುತ್ತಿದ್ದು, ಈಗಾಗಲೇ ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ 10 ವರ್ಷ ಮೇಲ್ಪಟ್ಟ ಡಿಸೇಲ್ ಕಾರುಗಳು ಮತ್ತು 15 ವರ್ಷ ಮೇಲ್ಪಟ್ಟ ಪೆಟ್ರೋಲ್ ಕಾರುಗಳನ್ನು ಬ್ಯಾನ್ ಮಾಡಲಾಗಿದೆ.

ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಆಸ್ಟನ್ ಮಾರ್ಟಿನ್ ಹೊಸ ಪ್ಲ್ಯಾನ್

ಹೀಗಿರುವಾಗ 50ರಿಂದ 60 ವರ್ಷಗಳಷ್ಟು ಹಳೆಯ ವಿಂಟೇಜ್ ಮತ್ತು ಹೆರಿಟೇಜ್ ಕಾರುಗಳ ಬಳಕೆಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಹೊಸ ನಿಯಮಗಳಿಗೆ ಅನುಸಾರವಾಗಿ ಹಳೆಯ ಕಾರುಗಳು ರಸ್ತೆಗಿಳಿಯುವುದು ಕಷ್ಟಸಾಧ್ಯ.

ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಆಸ್ಟನ್ ಮಾರ್ಟಿನ್ ಹೊಸ ಪ್ಲ್ಯಾನ್

ಆದ್ರೆ ಆಸ್ಟನ್ ಮಾರ್ಟಿನ್ ಸಂಸ್ಥೆಯು ಸಿದ್ದಗೊಳಿಸಿರುವ ಹೊಸ ಯೋಜನೆಯೊಂದು ಹೆರಿಟೇಜ್ ಕಾರುಗಳಿಗೆ ಎಲೆಕ್ಟ್ರಿಕ್ ಎಂಜಿನ್ ಮರುಜೋಡಣೆ ಮಾಡಲು ಮುಂದಾಗಿದ್ದು, ಕಾರುಗಳ ಆಯುಷ್ಯವನ್ನು ಮತ್ತಷ್ಟು ಹೆಚ್ಚಳ ಮಾಡುವ ಗುರಿಹೊಂದಿದೆ.

ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಆಸ್ಟನ್ ಮಾರ್ಟಿನ್ ಹೊಸ ಪ್ಲ್ಯಾನ್

ಹೌದು, ಆಸ್ಟನ್ ಮಾರ್ಟಿನ್ ಸಂಸ್ಥೆಯು 1950-60 ರ ಅವಧಿಯಲ್ಲಿ ಬಿಡುಗಡೆ ಮಾಡಿದ್ದ ಜನಪ್ರಿಯ ಹೆರಿಟೇಜ್ ಕಾರುಗಳನ್ನು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಮರುಬಿಡುಗಡೆ ಮಾಡುತ್ತಿದ್ದು, ಇದರಿಂದ ನಿಷೇಧ ಭೀತಿಯಲ್ಲಿದ್ದ ಹಳೆಯ ಕಾರುಗಳಿಗೆ ಪುನರ್ಜನ್ಮ ನೀಡಲಿದೆ.

ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಆಸ್ಟನ್ ಮಾರ್ಟಿನ್ ಹೊಸ ಪ್ಲ್ಯಾನ್

ಹಳೆಯ ಕಾರುಗಳು ನಿಯಮ ಮೀರಿ ಮಾಲಿನ್ಯ ಹೊರಸೂಸುವಿಕೆ ಹಿನ್ನೆಲೆ ಅಂತಹ ಕಾರುಗಳನ್ನು ನಿಷೇಧ ಮಾಡಲಾಗುತ್ತಿದ್ದು, ಅದೇ ಕಾರುಗಳಿಗೆ ಎಲೆಕ್ಟ್ರಿಕ್ ಎಂಜಿನ್ ಜೋಡಣೆ ಮಾಡುವುದರಿಂದ ಮಾಲಿನ್ಯ ಸಮಸ್ಯೆ ತಪ್ಪುವುದಲ್ಲದೇ ಕಾರುಗಳ ಆಯುಷ್ಯ ವೃದ್ಧಿಗೂ ಇದು ಸಹಕಾರಿಯಾಗಲಿದೆ.

ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಆಸ್ಟನ್ ಮಾರ್ಟಿನ್ ಹೊಸ ಪ್ಲ್ಯಾನ್

ಜಗತ್ತಿನ ಇತರೆ ರಾಷ್ಟ್ರಗಳಿಂತಲೂ ಯುರೋಪ್ ಮತ್ತು ಅಮೆರಿಕದಲ್ಲೇ ಆಸ್ಟನ್ ಮಾರ್ಟಿನ್ ಡಿಬಿ5 ಮತ್ತು ಡಿಬಿ6 ಎಂಕೆII ವ್ಯಾಂಟೆಜ್ ಕಾರುಗಳು ಭಾರೀ ಸಂಖ್ಯೆಯಲ್ಲಿದ್ದು, ನಿಗದಿತ ಅವಧಿಯಲ್ಲಿ ಈ ಎಲ್ಲಾ ಕಾರುಗಳಿಗೆ ಎಲೆಕ್ಟ್ರಿಕ್ ಎಂಜಿನ್ ಮರುಜೋಡಣೆ ಮಾಡುವುದಾಗಿ ಆಸ್ಟನ್ ಮಾರ್ಟಿನ್ ಹೇಳಿಕೊಂಡಿದೆ.

ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಆಸ್ಟನ್ ಮಾರ್ಟಿನ್ ಹೊಸ ಪ್ಲ್ಯಾನ್

ಹೆರಿಟೇಜ್ ಇವಿ ಪ್ರೋಗ್ರಾಮ್ ಎಂಬ ಯೋಜನೆ ಹಮ್ಮಿಕೊಂಡಿರುವ ಆಸ್ಟನ್ ಮಾರ್ಟಿನ್ ಸಂಸ್ಥೆಯು ಮುಂದಿನ ಎರಡು ವರ್ಷದೊಳಗಾಗಿ ವಿಶ್ವದಲ್ಲಿರುವ ಪ್ರತಿ ಆಸ್ಟನ್ ಮಾರ್ಟಿನ್ ಹೆರಿಟೇಜ್ ಕಾರಿಗೂ ಎಲೆಕ್ಟ್ರಿಕ್ ಎಂಜಿನ್ ಒದಗಿಸುವ ಭರವಸೆ ನೀಡಿದ್ದು, ಇದಕ್ಕಾಗಿ ಬೃಹತ್ ಪ್ಲ್ಯಾನ್ ಮಾಡಿದೆ.

MOST READ: ದೇಶದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆ..

ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಆಸ್ಟನ್ ಮಾರ್ಟಿನ್ ಹೊಸ ಪ್ಲ್ಯಾನ್

ಸದ್ಯ ಆಸ್ಟನ್ ಮಾರ್ಟಿನ್ ಡಿಬಿ5 ಮತ್ತು ಡಿಬಿ6 ಎಂಕೆII ವ್ಯಾಂಟೆಜ್ ಕಾರುಗಳು 4-ಲೀಟರ್ ಇನ್‌ಲೈನ್ ಸಿಕ್ಸ್ ಸಿಲಿಂಡರ್ ಡಿಸೇಲ್ ಎಂಜಿನ್ ಹೊಂದಿದ್ದು, 282-ಬಿಎಚ್‌ಪಿ ಮತ್ತು 380-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಆಸ್ಟನ್ ಮಾರ್ಟಿನ್ ಹೊಸ ಪ್ಲ್ಯಾನ್

ಈ ಮೂಲಕ 240 ಕಿ.ಮಿ ಟಾಪ್ ಸ್ಪೀಡ್ ಹೊಂದಿರುವ ಹೆರಿಟೇಜ್ ಕಾರುಗಳು ಮಾದರಿಗಳು ಹೊಗೆ ಸೂಸುವುದರಲ್ಲೂ ಎತ್ತಿದ ಕೈ. ಆದ್ರೆ ಹೆರಿಟೇಜ್ ಇವಿ ಪ್ರೋಗ್ರಾಮ್‌ನಿಂದಾಗಿ ಇಂತಹ ಇನ್ಮುಂದೆ ಇರುವುದಿಲ್ಲ ಎನ್ನುವುದು ಆಸ್ಟನ್ ಮಾರ್ಟಿನ ಭರವಸೆ.

ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಆಸ್ಟನ್ ಮಾರ್ಟಿನ್ ಹೊಸ ಪ್ಲ್ಯಾನ್

ಎಲೆಕ್ಟ್ರಿಕ್ ಎಂಜಿನ್ ಸಾಮರ್ಥ್ಯ

ಈ ಹಿಂದೆ ಪ್ರಬಲವಾದ ಎಂಜಿನ್ ಮಾದರಿಯನ್ನು ಹೊಂದಿದ್ದ ಹೆರಿಟೇಜ್ ಕಾರುಗಳಿಗೆ ಹೊಸದಾಗಿ ಅಳವಡಿಸಲು ನಿರ್ಧರಿಸಲಾಗಿರುವ ಎಲೆಕ್ಟ್ರಿಕ್ ಎಂಜಿನ್ ಮಾದರಿಯು ಕೂಡಾ ಗಮನ ಸೆಳೆಯಲಿದೆ. ಸುಧಾರಿತ ತಂತ್ರಜ್ಞಾನ ಪ್ರೇರಣೆಯ ರ‍್ಯಾಪಿಡ್-E ಎನ್ನುವ ಸೆಟ್ ಬಳಕೆ ಮಾಡಲಾಗುತ್ತಿದ್ದು, ಉತ್ತಮ ಮೈಲೇಜ್ ನೀಡಬಲ್ಲವು.

MOST READ: ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಆಸ್ಟನ್ ಮಾರ್ಟಿನ್ ಹೊಸ ಪ್ಲ್ಯಾನ್

ರ‍್ಯಾಪಿಡ್-E ಎಲೆಕ್ಟ್ರಿಕ್ ಎಂಜಿನ್ ಮಾದರಿಯು 800-ವೋಲ್ಟ್, 65ಕಿವ್ಯಾಟ್ ಬ್ಯಾಟರಿ ಸೌಲಭ್ಯವನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದ್ದಲ್ಲಿ ಬರೋಬ್ಬರಿ 320 ಕಿ.ಮಿ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯ ಹೊಂದಿವೆಯೆಂತೆ.

ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಆಸ್ಟನ್ ಮಾರ್ಟಿನ್ ಹೊಸ ಪ್ಲ್ಯಾನ್

ಹೀಗಾಗಿ ಆಸ್ಟನ್ ಮಾರ್ಟಿನ್ ಸಂಸ್ಥೆಯ ಹೊಸ ಯೋಜನೆಯು ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಜಗತ್ತಿನಲ್ಲೇ ಮೊದಲ ಬಾರಿಗೆ ಆಟೋ ಉತ್ಪಾದನಾ ಸಂಸ್ಥೆಯೊಂದು ಅಧಿಕೃತವಾಗಿ ತನ್ನ ಹೆರಿಟೇಜ್ ಕಾರುಗಳಿಗೆ ಎಲೆಕ್ಟ್ರಿಕ್ ಎಂಜಿನ್ ಮರುಜೋಡಣೆ ಮಾಡುತ್ತಿರುವ ಬೃಹತ್ ಯೋಜನೆ ಇದಾಗಿದೆ ಎಂದ್ರೆ ತಪ್ಪಾಗುವುದಿಲ್ಲ.

More from DriveSpark

Article Published On: Tuesday, December 11, 2018, 11:17 [IST]
English summary
The ‘Heritage EV’ program launches next year. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+