ಒಂದು ಬಾರಿ ಚಾರ್ಜ್ ಮಾಡಿದ್ರೆ 200 ಕಿಮಿ ಮೈಲೇಜ್ ನೀಡುತ್ತೆ ಈ ಟು ಸೀಟರ್ ಎಲೆಕ್ಟ್ರಿಕ್ ಕಾರು

Written By:

ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭವಿಷ್ಯದ ಯೋಜನೆಗಳಿಗಾಗಿ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಯು ಸಾವಿರಾರು ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿವೆ. ಈ ಮಧ್ಯೆ ಸ್ಟಾರ್ಟ್ ಅಪ್ ಕಂಪನಿಯೊಂದು ವಿಶೇಷ ವಿನ್ಯಾಸದ ಟು ಸೀಟರ್ ಎಲೆಕ್ಟ್ರಿಕ್ ಕಾರುಯೊಂದನ್ನು ನಿರ್ಮಾಣ ಮಾಡಿದೆ.

ಒಂದು ಬಾರಿ ಚಾರ್ಜ್ ಮಾಡಿದ್ರೆ 200 ಕಿಮಿ ಮೈಲೇಜ್ ನೀಡುತ್ತೆ ಈ ಟು ಸೀಟರ್ ಎಲೆಕ್ಟ್ರಿಕ್ ಕಾರು

2030ರ ವೇಳೆಗೆ ಶೇ.100ರಷ್ಟು ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳನ್ನು ರಸ್ತೆಗಿಳಿಸುವ ಯೋಜನೆಗಳನ್ನು ಕೈಗೊಳ್ಳುತ್ತಿದ್ದು, ಇದೇ ಉದ್ದೇಶದಿಂದ ಸುಧಾರಿತ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದ ಮೇಲೆ ವಿಶೇಷ ಗಮನಹರಿಸಲಾಗುತ್ತಿದೆ.

Recommended Video - Watch Now!
Fighter Jet Crash In Goa - DriveSpark
ಒಂದು ಬಾರಿ ಚಾರ್ಜ್ ಮಾಡಿದ್ರೆ 200 ಕಿಮಿ ಮೈಲೇಜ್ ನೀಡುತ್ತೆ ಈ ಟು ಸೀಟರ್ ಎಲೆಕ್ಟ್ರಿಕ್ ಕಾರು

ಆದ್ರೆ ದೆಹಲಿ ಮೂಲದ ಸ್ಟಾರ್ಟ್ ಸಂಸ್ಥೆಯೊಂದು ನಿರ್ಮಾಣ ಮಾಡಿರುವ ಟು ಸೀಟರ್ ಎಲೆಕ್ಟ್ರಿಕ್ ಕಾರು ಮಾದರಿಯು ಇತರೆ ಕಾರುಗಳಿಂತಲೂ ವಿಭಿನ್ನವಾಗಿದೆ.

ಒಂದು ಬಾರಿ ಚಾರ್ಜ್ ಮಾಡಿದ್ರೆ 200 ಕಿಮಿ ಮೈಲೇಜ್ ನೀಡುತ್ತೆ ಈ ಟು ಸೀಟರ್ ಎಲೆಕ್ಟ್ರಿಕ್ ಕಾರು

ಹ್ರಿಮಾನ್ ಎನ್ನುವ ಸ್ಟಾರ್ಟ್ ಸಂಸ್ಥೆಯೇ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಇಂತದೊಂದು ವಿಶೇಷ ಎಲೆಕ್ಟ್ರಿಕ್ ಕಾರುನ್ನು ನಿರ್ಮಾಣ ಮಾಡಿದ್ದು, ಪ್ರತಿ ಚಾರ್ಜಿಂಗ್‌ನಲ್ಲೂ ಅದ್ಬುತ ಮೈಲೇಜ್ ಅನ್ನು ಹಿಂದಿರುಗಿಸುವುದೇ ಈ ಕಾರಿನ ವಿಶೇಷ ಎನ್ನಬಹುದು.

ಒಂದು ಬಾರಿ ಚಾರ್ಜ್ ಮಾಡಿದ್ರೆ 200 ಕಿಮಿ ಮೈಲೇಜ್ ನೀಡುತ್ತೆ ಈ ಟು ಸೀಟರ್ ಎಲೆಕ್ಟ್ರಿಕ್ ಕಾರು

ವಿಭಿನ್ನ ಮಾದರಿಯ ಹೊರ ವಿನ್ಯಾಸ ಹೊಂದಿರುವ ಈ ಕಾರಿಗೆ ಆರ್‌ಟಿ90 ಎಂದು ನಾಮಕರಣ ಮಾಡಲಾಗಿದ್ದು, ಕೇವಲ 10 ನಿಮಿಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬ್ಯಾಟರಿ ರಿಚಾರ್ಜ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

Trending On DriveSpark Kannada:

60 ಸಾವಿರ ಬೆಲೆಯ ಹೆಲ್ಮೆಟ್ ಹಾಕಿದ್ರು ಆ ಯುವಕನ ಜೀವ ಉಳಿಲಿಲ್ಲ...

ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ 2018ರ ಮಾರುತಿ ಸುಜುಕಿ ಸ್ವಿಫ್ಟ್ ಬೆಲೆ ಎಷ್ಟು ಗೊತ್ತಾ?

ಗ್ರಾಹಕರ ಆಯ್ಕೆಯಲ್ಲಿ ಹೋಂಡಾ ನಂ.1 ಸ್ಥಾನ ಪಡೆದಿದ್ದು ಯಾವ ಕಾರಣಕ್ಕೆ?

ಒಂದು ಬಾರಿ ಚಾರ್ಜ್ ಮಾಡಿದ್ರೆ 200 ಕಿಮಿ ಮೈಲೇಜ್ ನೀಡುತ್ತೆ ಈ ಟು ಸೀಟರ್ ಎಲೆಕ್ಟ್ರಿಕ್ ಕಾರು

ಇನ್ನು ಕಾರಿನ ಎಸಿ ಬ್ಯಾಟರಿ ರಿಚಾರ್ಜ್‌ಗೆ ಒಂದೂವರೆ ಗಂಟೆ ಕಾಲಾವಕಾಶ ತೆಗೆದುಕೊಳ್ಳಲಿದ್ದು, ಈ ಮೂಲಕ ಬರೋಬ್ಬರಿ 200 ಕಿಮಿ ಮೈಲೇಜ್ ನೀಡುತ್ತದೆ. ಹೀಗಾಗಿ ಹ್ರಿಮಾನ್ ನಿರ್ಮಾಣ ಮಾಡಿರುವ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಒಂದು ಬಾರಿ ಚಾರ್ಜ್ ಮಾಡಿದ್ರೆ 200 ಕಿಮಿ ಮೈಲೇಜ್ ನೀಡುತ್ತೆ ಈ ಟು ಸೀಟರ್ ಎಲೆಕ್ಟ್ರಿಕ್ ಕಾರು

ಜೊತೆಗೆ ಈ ಕಾರು ಪ್ರತಿ ಕಿಲೋ ಮೀಟರ್‌ಗೆ ಕೇವಲ 50 ಪೈಸೆಯಷ್ಟು ಖರ್ಚು ಹೊಂದಿರಲಿದ್ದು, ಎಸಿ ಸೇರಿದಂತೆ 4ಜಿ ಸಂಪರ್ಕದೊಂದಿದೆ ವಲ್ಡ್ ಕ್ಲಾಸ್ ಸೌಲಭ್ಯಗಳನ್ನು ಈ ಸಣ್ಣ ಕಾರಿನಲ್ಲಿ ಒದಗಿಸಲಾಗಿದೆ.

ಒಂದು ಬಾರಿ ಚಾರ್ಜ್ ಮಾಡಿದ್ರೆ 200 ಕಿಮಿ ಮೈಲೇಜ್ ನೀಡುತ್ತೆ ಈ ಟು ಸೀಟರ್ ಎಲೆಕ್ಟ್ರಿಕ್ ಕಾರು

ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಹೊಸ ಆಯಾಮ ಕಂಡುಕೊಳ್ಳುವ ಉದ್ದೇಶದಿಂದ ವಿಶೇಷ ವಾಹನಗಳ ನಿರ್ಮಾಣಕ್ಕೆ ಕೈ ಹಾಕಿರುವ ಹ್ರಿಮಾನ್ ಸಂಸ್ಥೆಯು ಆರ್‌ಟಿ90 ಜೊತೆ ಜೊತೆಗೆ 4 ಸೀಟರ್ ಎಲೆಕ್ಟ್ರಿಕ್ ಕಾರು ಮತ್ತು 6 ಸೀಟರ್ ಎಲೆಕ್ಟ್ರಿಕ್ ಬಸ್ ನಿರ್ಮಾಣ ಕೂಡಾ ಮಾಡುತ್ತಿದೆ.

ಒಂದು ಬಾರಿ ಚಾರ್ಜ್ ಮಾಡಿದ್ರೆ 200 ಕಿಮಿ ಮೈಲೇಜ್ ನೀಡುತ್ತೆ ಈ ಟು ಸೀಟರ್ ಎಲೆಕ್ಟ್ರಿಕ್ ಕಾರು

ಸದ್ಯ ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನಿರ್ಮಾಣ ಮಾಡಲಾಗಿರುವ ಆರ್‌ಟಿ90 ಕಾರನ್ನು ಇದೇ ವರ್ಷವೇ ಬಿಡುಗಡೆ ಮಾಡಲಿರುವ ಹ್ರಿಮಾನ್ ಸಂಸ್ಥೆಯು ಹೊಸ ಕಾರಿನ ಬೆಲೆ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಒಂದು ಬಾರಿ ಚಾರ್ಜ್ ಮಾಡಿದ್ರೆ 200 ಕಿಮಿ ಮೈಲೇಜ್ ನೀಡುತ್ತೆ ಈ ಟು ಸೀಟರ್ ಎಲೆಕ್ಟ್ರಿಕ್ ಕಾರು

ಒಂದು ವೇಳೆ ನಿಗದಿತ ಅವಧಿಯಲ್ಲಿ ಬಿಡುಗಡೆಯಾಗಿ ಕಡಿಮೆ ಬೆಲೆ ಹೊಂದಿದ್ದೇ ಆದಲ್ಲಿ ಆರ್‌ಟಿ90 ಹೊಸ ಟ್ರೆಂಡ್ ಸೃಷ್ಠಿಸಲಿದ್ದು, ನಗರ ಪ್ರದೇಶಗಳಲ್ಲಿನ ವಾಸಿಗಳಿಗೆ ಇದೊಂದು ಉತ್ತಮ ಆಯ್ಕೆಯಾಗುವ ಸಾಧ್ಯತೆಗಳಿವೆ.

ಒಂದು ಬಾರಿ ಚಾರ್ಜ್ ಮಾಡಿದ್ರೆ 200 ಕಿಮಿ ಮೈಲೇಜ್ ನೀಡುತ್ತೆ ಈ ಟು ಸೀಟರ್ ಎಲೆಕ್ಟ್ರಿಕ್ ಕಾರು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭವಿಷ್ಯದ ಭಾರತಕ್ಕಾಗಿ ಘೋಷಣೆ ಮಾಡಲಾಗಿರುವ ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಆರಂಭಗೊಂಡಿರುವ ಹ್ರಿಮಾನ್ ಸಂಸ್ಥೆಯು ಕಳೆದ ಕೆಲ ದಿನಗಳಿಂದ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದ್ದ, ಮೊದಲ ಹಂತದಲ್ಲಿ ಆರ್‌ಟಿ90 ಎನ್ನುವ ಟು ಸೀಟರ್ ಕಾರುನ್ನು ಪರಿಚಯಿಸುತ್ತಿದೆ.

Trending On DriveSpark Kannada:

ಹೇಗಿದೆ ನೋಡ್ರಿ ಸ್ವಾಮಿ- ಬೊಲೆರೊದಲ್ಲೇ ನಿರ್ಮಾಣವಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‌ಯುವಿ

ನೀವು ಬೈಕ್ ಮಾಡಿಫೈ ಮಾಡ್ಸಿದ್ದೀರಾ? ಹಾಗಾದ್ರೆ ತಪ್ಪದೇ ಈ ಸುದ್ದಿ ಓದಿ...

Trending DriveSpark YouTube Videos

Subscribe To DriveSpark Kannada YouTube Channel - Click Here

English summary
India’s First Two-Seater Electric Car To Be Revealed This Year.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark