ಬರಲಿದೆ ಮಹಿಂದ್ರಾ ಸಂಸ್ಥೆಯಿಂದ ಮತ್ತೊಂದು ಎಲೆಕ್ಟ್ರಿಕ್ ಕಾರು..

By Rahul Ts

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ಹೆಚ್ಚಾಗಿದ್ದು, ಎಲ್ಲಾ ಆಟೋಮೇಕರ್ ಸಂಸ್ಥೆಗಳು 2020ರ ವೇಳೆಗೆ ಎಲೆಕ್ಟ್ರಿಕ್ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಮುಂದಾಗಿದ್ದು, ಜನಪ್ರಿ ಮಹಿಂದ್ರಾ ಕೂಡಾ ಮತ್ತಷ್ಟು ಹೊಸ ನಮೂನೆಯ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ತವಕದಲ್ಲಿದೆ.

ಬರಲಿದೆ ಮಹಿಂದ್ರಾ ಸಂಸ್ಥೆಯಿಂದ ಮತ್ತೊಂದು ಎಲೆಕ್ಟ್ರಿಕ್ ಕಾರು..

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಿರುವ ಮಹಿಂದ್ರಾ ಸಂಸ್ಥೆಯು ಇದೀಗ ಫೋರ್ಡ್ ಇಂಡಿಯಾ ಜೊತೆಗೂಡಿ ಫೀಗೊ ಆಸ್ಫೈರ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸುವ ಯೋಜನೆ ರೂಪಿಸಿದೆ.

ಬರಲಿದೆ ಮಹಿಂದ್ರಾ ಸಂಸ್ಥೆಯಿಂದ ಮತ್ತೊಂದು ಎಲೆಕ್ಟ್ರಿಕ್ ಕಾರು..

ಮಾಹಿತಿಗಳ ಪ್ರಕಾರ ಸಂಸ್ಥೆಯು ಫೋರ್ಡ್‍ ಇಂಡಿಯಾ ಸಂಸ್ಥೆಯು ಬಿ562 ಫ್ಯಾಟ್‌ಫಾರ್ಮ್ ಅಡಿ ಹೊಸ ಎಲೆಕ್ಟ್ರಿಕ್ ಸೆಡಾನ್ ಕಾರನ್ನು ನಿರ್ಮಾಣಗೊಳಿಸಿದ್ದು, ಇದರ ಬಗ್ಗೆ ಮುಂಬರುವ ದಿನಗಳಲ್ಲಿ ಮಹೀಂದ್ರಾ ಮತ್ತಷ್ಟು ಮಾಹಿತಿಯನ್ನು ಹೊರಹಾಕಲಿದೆ.

ಬರಲಿದೆ ಮಹಿಂದ್ರಾ ಸಂಸ್ಥೆಯಿಂದ ಮತ್ತೊಂದು ಎಲೆಕ್ಟ್ರಿಕ್ ಕಾರು..

ಇದಲ್ಲದೇ ಮಾರುಕಟ್ಟೆಯಲ್ಲಿ ಈಗಾಗಲೇ ಫೋರ್ಡ್ ಫಿಗೊ ಆಸ್ಫೈರ್ ಕಾರಿನ ಪೆಟ್ರೋಲ್ ಮತ್ತು ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಆವೃತ್ತಿಯಲ್ಲಿ ಲಭ್ಯವಿದ್ದು, ಎಲೆಕ್ಟ್ರಿಕ್ ಆವೃತ್ತಿಯನ್ನು ತಯಾರಿಸಲು ಹೆಚ್ಚು ವೆಚ್ಚ ಬೇಕಾಗಿಲ್ಲ ಎನ್ನಬಹುದು.

ಬರಲಿದೆ ಮಹಿಂದ್ರಾ ಸಂಸ್ಥೆಯಿಂದ ಮತ್ತೊಂದು ಎಲೆಕ್ಟ್ರಿಕ್ ಕಾರು..

ಹೊಸ ಫೋರ್ಡ್ ಎಲೆಕ್ಟ್ರಿಕ್ ಸೆಡಾನ್ ಕಾರು ಮಹಿಂದ್ರಾ ಸಂಸ್ಥೆಯ ಎಲೆಕ್ಟ್ರಿಕ್ ವೆಹಿಕಲ್ ಟೆಕ್ನಾಲಜಿಯನ್ನು ನಿಯೊಜಿಸಲಾಗಿದ್ದು, ಇ-ವೆರಿಟೊ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿ ಇಇಎಸ್ ಸರಕಾರಿ ಸಂಸ್ಥೆಗೆ ಸರಬರಾಜು ಮಾಡಲಾಗುತ್ತಿದೆ.

ಬರಲಿದೆ ಮಹಿಂದ್ರಾ ಸಂಸ್ಥೆಯಿಂದ ಮತ್ತೊಂದು ಎಲೆಕ್ಟ್ರಿಕ್ ಕಾರು..

ಮಹಿಂದ್ರಾ ವೆರಿಟೊ ಕಾರುಗಳು ಭಾರತೀಯ ಮಾರುಕಟ್ಟಯಲ್ಲಿ ಸದ್ಯಕ್ಕೆ ರೆನಾಲ್ಟ್ ಲೋಗನ್ ಆಧರಿತವಾಗಿ ಸಿದ್ದವಾಗಲಿದ್ದು, ಇದಕ್ಕೆ ಭಿನ್ನವಾಗಿರುವ ಪೋರ್ಡ್ ಫಿಗೋ ಆಸ್ಫೈರ್ ಸೆಡಾನ್ ಕಾರುಗಳು ಹೊಸ ರೂಪದೊಂದಿಗೆ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಲಿದೆ.

ಬರಲಿದೆ ಮಹಿಂದ್ರಾ ಸಂಸ್ಥೆಯಿಂದ ಮತ್ತೊಂದು ಎಲೆಕ್ಟ್ರಿಕ್ ಕಾರು..

ಜೊತೆಗೆ ಎಲೆಕ್ಟ್ರಿಕ್ ಆವೃತ್ತಿಯ ಫಿಗೋ ಆಸ್ಫೈರ್ ಕಾರು ಮಾರುಕಟ್ಟೆಯಲ್ಲಿ ಕೈಗಟ್ಟುವ ಬೆಲೆಯಲ್ಲಿ ದೊರೆಯಲಿದೆ ಎಂದು ಊಹಿಸಲಾಗಿದ್ದು, ಈ ಮೂಲಕ ಇವಿ ಕಾರುಗಳ ಮಾರುಕಟ್ಟೆಯಲ್ಲಿ ಮಹೀಂದ್ರಾ ಮತ್ತಷ್ಟು ಮುನ್ನಡೆ ಕಾಯ್ದುಕೊಳ್ಳಲಿದೆ.

ಬರಲಿದೆ ಮಹಿಂದ್ರಾ ಸಂಸ್ಥೆಯಿಂದ ಮತ್ತೊಂದು ಎಲೆಕ್ಟ್ರಿಕ್ ಕಾರು..

ಇನ್ನು ಫೋರ್ಡ್ ಮತ್ತು ಮಹಿಂದ್ರಾ ಸಂಸ್ಥೆಗಳ ಮಾದರಿಯಲ್ಲೇ ಟೊಯೊಟಾ ಹಾಗು ಮಾರುತಿ ಸುಜುಕಿ ಸಂಸ್ಥೆಗಳು ಸಹ ಸಹಭಾಗಿತ್ವದಲ್ಲಿ ಇವಿ ಕಾರನ್ನು ಅಭಿವೃದ್ಧಿ ಮಾಡುತ್ತಿದ್ದು, ಉತ್ತಮ ಮೈಲೇಜ್ ನೀಡಬಲ್ಲ ಲಿಥಿಯಂ ಅಯಾನ್ ಬ್ಯಾಟರಿ ಮಾದರಿಯನ್ನು ಬಳಸಲಾಗುತ್ತಿರುವುದು ಗ್ರಾಹಕರ ಸ್ನೇಹಿಯಾಗಲಿವೆ.

Most Read Articles

Kannada
English summary
Mahindra Developing New Electric Compact Sedan.
Story first published: Tuesday, March 20, 2018, 10:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X