ಸೆಪ್ಟೆಂಬರ್ 3ಕ್ಕೆ ಮಹೀಂದ್ರಾ ಮರಾಜೊ ಕಾರು ಬಿಡುಗಡೆಯಾಗುವುದು ಪಕ್ಕಾ..!

By Praveen Sannamani

ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಕಾರುಗಳ ವಿಭಾಗದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಮಹೀಂದ್ರಾ ಮರಾಜೊ ಕಾರುಗಳು ಮುಂದಿನ ತಿಂಗಳು ಸೆಪ್ಟೆಂಬರ್ 3ಕ್ಕೆ ಬಿಡುಗಡೆಗೊಳ್ಳುವ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಹೊಸ ಕಾರಿನ ಕುರಿತಾದ ತಾಂತ್ರಿಕ ಅಂಶಗಳ ಕುರಿತಾ ಮಾಹಿತಿ ಇಲ್ಲಿದೆ ನೋಡಿ.

ಸೆಪ್ಟೆಂಬರ್ 3ಕ್ಕೆ ಮಹೀಂದ್ರಾ ಮರಾಜೊ ಕಾರು ಬಿಡುಗಡೆಯಾಗುವುದು ಪಕ್ಕಾ..!

ಮಹೀಂದ್ರಾ ಸಂಸ್ಥೆಯು ಕಳೆದ ತಿಂಗಳು ತನ್ನ ಹೊಸ ಎಂಪಿವಿ ಮರಾಜೊ ಕಾರಿನ ಕುರಿತು ಮಾಹಿತಿ ಬಹಿರಂಗ ಪಡಿಸುವ ಮೂಲಕ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿತ್ತು. ಅದರಂತೆ ಇದೀಗ ಸೆಪ್ಟೆಂಬರ್ 3ರಂದು ಹೊಸ ಕಾರಿನ ಖರೀದಿಗೆ ಅಧಿಕೃತ ಚಾಲನೆ ನೀಡಲಿದ್ದು, ಹತ್ತು ಹಲವು ಹೊಸ ವೈಶಿಷ್ಟ್ಯತೆಗಳನ್ನ ಪಡೆದುಕೊಂಡಿರುವ ಮರಾಜೊ ಕಾರುಗಳು ಹೆಸರಿನಿಂದಲೇ ಗ್ರಾಹಕರ ಆಕರ್ಷಣೆ ಮಾಡುವಂತಿದೆ.

ಸೆಪ್ಟೆಂಬರ್ 3ಕ್ಕೆ ಮಹೀಂದ್ರಾ ಮರಾಜೊ ಕಾರು ಬಿಡುಗಡೆಯಾಗುವುದು ಪಕ್ಕಾ..!

ಸದ್ಯ ಎಂಪಿವಿ ವಿಭಾಗದಲ್ಲಿ ಟಯೊಟಾ ಇನೋವಾ ಕ್ರಿಸ್ಟಾ ಹಿಂದಿಕ್ಕುವ ಮತ್ತೊಂದು ಜನಪ್ರಿಯ ಕಾರು ಯಾವುದು ಇಲ್ಲ ಎನ್ನುವುದು ವಾಸ್ತವ. ಇದೇ ಕಾರಣಕ್ಕೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಕೈಗೆಟುಕುವ ಬೆಲೆಗಳಲ್ಲಿ 7 ಸೀಟರ್ ಎಂಪಿವಿ ಕಾರುಗಳನ್ನ ಪರಿಚಯಿಸುತ್ತಿದ್ದು, ಮಹೀಂದ್ರಾ ಪರಿಚಯಿಸುತ್ತಿರುವ ಮರಾಜೊ ಎಂಪಿವಿ ಕೂಡಾ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.

ಸೆಪ್ಟೆಂಬರ್ 3ಕ್ಕೆ ಮಹೀಂದ್ರಾ ಮರಾಜೊ ಕಾರು ಬಿಡುಗಡೆಯಾಗುವುದು ಪಕ್ಕಾ..!

ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಲಭ್ಯವಿರಲಿರುವ ಮರಾಜೊ ಕಾರುಗಳು 8-ಸೀಟರ್ ಮತ್ತು 7-ಸೀಟರ್‌ನಲ್ಲಿ ಲಭ್ಯವಾಗಲಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದ್ದು, ಸ್ವಂತದ ಬಳಕೆ ಹಾಗೂ ಟೂರಿಸ್ಟ್ ವಿಭಾಗದಲ್ಲೂ ಇದು ಸದ್ದು ಮಾಡುವ ನೀರಿಕ್ಷೆಯಿದೆ.

ಸೆಪ್ಟೆಂಬರ್ 3ಕ್ಕೆ ಮಹೀಂದ್ರಾ ಮರಾಜೊ ಕಾರು ಬಿಡುಗಡೆಯಾಗುವುದು ಪಕ್ಕಾ..!

ಇದಕ್ಕೆ ಕಾರಣ, ಬೆಲೆಗಳಲ್ಲಿ ದುಬಾರಿ ಎನ್ನಿಸುವ ಇನೋವಾ ಕಾರುಗಳನ್ನು ಖರೀದಿಸಲು ಸಾಧ್ಯವಾಗದ ಗ್ರಾಹಕರು ಸಾಮಾನ್ಯವಾಗಿ ಎರ್ಟಿಗಾ ಕಾರುಗಳ ಖರೀದಿಯತ್ತ ಮುಖ ಮಾಡುತ್ತಿದ್ದರು. ಆದ್ರೆ ಮರಾಜೊ ಕಾರುಗಳು ಹೆಚ್ಚು ಕಡಿಮೆ ಇನೋವಾ ಕಾರುಗಳಷ್ಟೇ ಸೌಲಭ್ಯ ಹೊಂದಿರುವುದು ಟೂರಿಸ್ಟ್ ವಿಭಾಗದಲ್ಲಿ ಹೆಚ್ಚಿನ ಬೇಡಿಕೆ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸೆಪ್ಟೆಂಬರ್ 3ಕ್ಕೆ ಮಹೀಂದ್ರಾ ಮರಾಜೊ ಕಾರು ಬಿಡುಗಡೆಯಾಗುವುದು ಪಕ್ಕಾ..!

ಶಾರ್ಕ್ ಡಿಸೈನ್ ಹೊಂದಿರುವ ಹೊಸ ಕಾರು ನೇರವಾಗಿ ಟಾಟಾ ಹೆಕ್ಸಾ ಮತ್ತು ಇನೋವಾ ಕ್ರಿಸ್ಟಾಗೆ ಸವಾಲು ಒಡ್ಡಲಿದ್ದು, ತ್ರಿ ಸ್ಪೋಕ್ ಸ್ಟಿರೀಂಗ್ ವೀಲ್ಹ್ ಜೊತೆ ಮಲ್ಟಿ ಕಂಟ್ರೋಲರ್, ದೊಡ್ಡದಾದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಹೊಸ ವಿನ್ಯಾಸದ ಸ್ಪೀಡೋ ಮೀಟರ್ ಮತ್ತು ಟಚ್‌ಮೀಟರ್ ಸೌಲಭ್ಯ ಹೊಂದಿದೆ.

ಸೆಪ್ಟೆಂಬರ್ 3ಕ್ಕೆ ಮಹೀಂದ್ರಾ ಮರಾಜೊ ಕಾರು ಬಿಡುಗಡೆಯಾಗುವುದು ಪಕ್ಕಾ..!

ನಾರ್ತ್ ಅಮೆರಿಕದಲ್ಲಿರುವ ಮಹೀಂದ್ರಾ ಡಿಸೈನ್ ಸೇಂಟರ್‌ನಲ್ಲಿ ಈ ಹೊಸ ಕಾರಿನ ವಿನ್ಯಾಸಗಳನ್ನು ಸಿದ್ದಪಡಿಸಲಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯ ಗುಣಲಕ್ಷಣಗಳನ್ನ ಹೊಂದಿರುವ ಮರಾಜೊ ಕಾರು ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲೂ ಬಿಡುಗಡೆಯ ಸುಳಿವು ನೀಡಿದೆ.

ಸೆಪ್ಟೆಂಬರ್ 3ಕ್ಕೆ ಮಹೀಂದ್ರಾ ಮರಾಜೊ ಕಾರು ಬಿಡುಗಡೆಯಾಗುವುದು ಪಕ್ಕಾ..!

ಇನ್ನು ಬಿಡುಗಡೆಯಾಗಲಿರುವ ಮರಾಜೊ ಎಂಪಿವಿ ಕಾರುಗಳು ಮಹಿಂದ್ರಾ ಸಂಸ್ಥೆಯ ಮೊದಲ ಮೊನೊಕ್ಯೂ ಬಾಡಿ ಕಿಟ್ ಹೊಂದಿರುವ ಕಾರು ಮಾದರಿಯಾಗಿದ್ದು, ಜೈಲೋ ಕಾರುಗಳಲ್ಲಿ ಬಳಸಲಾಗಿರುವ ಬಾಡಿ ಆನ್ ಫ್ರೇಮ್ ಶೈಲಿಗಿಂತಲೂ ಇದು ವಿಭಿನ್ನವಾಗಿರಲಿದೆ.

ಸೆಪ್ಟೆಂಬರ್ 3ಕ್ಕೆ ಮಹೀಂದ್ರಾ ಮರಾಜೊ ಕಾರು ಬಿಡುಗಡೆಯಾಗುವುದು ಪಕ್ಕಾ..!

ಸ್ಪಾಟ್ ಟೆಸ್ಟಿಂಗ್ ವೇಳೆ ಸಿಕ್ಕಿರುವ ಮಾಹಿತಿ ಪ್ರಕಾರ, ಮರಾಜೊ ಕಾರುಗಳು 6 ಸ್ಪ್ಲಿಟ್ ಸ್ಪೋಕ್ ಎರಡು ಟೋನ್‍‍ಗಳುಳ್ಳ ಅಲಾಯ್ ಚಕ್ರಗಳು, ಕಪ್ಪು ಹೆಡ್‍‍ಲ್ಯಾಂಪ್ ಬೆಜೆಲ್ಸ್ ಮತ್ತು ಮುಂಭಾಗದ ಗ್ರೀಲ್‍‍ನಲ್ಲಿ ಮಹಿಂದ್ರಾ ಸಂಸ್ಥೆಯ ಸಿಗ್ನೇಚರ್‍‍ನಿಂದ ಸಜ್ಜುಗೊಂಡಿದೆ.

ಸೆಪ್ಟೆಂಬರ್ 3ಕ್ಕೆ ಮಹೀಂದ್ರಾ ಮರಾಜೊ ಕಾರು ಬಿಡುಗಡೆಯಾಗುವುದು ಪಕ್ಕಾ..!

ಮಹೀಂದ್ರಾ ಮರಾಜೊ ಎಂಪಿವಿ ಕಾರುಗಳು ಏಳು ಲಂಬಾಕಾರದ ಗ್ರಿಲ್, ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಹೊಸ ಬಂಪರ್, ಫಾಗ್ ಲ್ಯಾಂಪ್ಸ್, ಬೂಮರಾಂಗ್ ಆಕಾರದ ಎಲ್ಇಡಿ ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್ ವೈಶಿಷ್ಟ್ಯತೆಗಳನ್ನು ಪಡೆದಿದೆ.

ಸೆಪ್ಟೆಂಬರ್ 3ಕ್ಕೆ ಮಹೀಂದ್ರಾ ಮರಾಜೊ ಕಾರು ಬಿಡುಗಡೆಯಾಗುವುದು ಪಕ್ಕಾ..!

ಕಾರಿನ ಒಳವಿನ್ಯಾಸದ ಬಗ್ಗೆ ಹೇಳುವುದಾದರೇ, ಎತ್ತರವಾದ ಏಳು ಲೆದರ್ ಸೀಟ್‍‍ಗಳು, ಆ್ಯಪಲ್ ಕಾರ್ ಪ್ಲೇ, ಎಸಿ ವೆಂಟ್, ಕ್ಲೈಮೆಟ್ ಕಂಟ್ರೋಲರ್, ಆಂಡ್ರಾಯ್ಡ್ ಆಟೋ ಆಪ್ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಅನಲಾಗ್ ಡಿಜಿಟಲ್ ಇನ್ಸ್ಟ್ರೂಮೆಂಟಲ್ ಕ್ಲಸ್ಟರ್ ಅನ್ನು ಪಡೆದಿರಲಿವೆ.

ಸೆಪ್ಟೆಂಬರ್ 3ಕ್ಕೆ ಮಹೀಂದ್ರಾ ಮರಾಜೊ ಕಾರು ಬಿಡುಗಡೆಯಾಗುವುದು ಪಕ್ಕಾ..!

ಎಂಜಿನ್ ಸಾಮರ್ಥ್ಯ

ಮಹಿಂದ್ರಾ ಮರಾಜೊ ಕಾರುಗಳು 1.6-ಲೀಟರ್ ಎಂಜಿನ್ ಸಹಾಯದಿಂದ 125-ಬಿಹೆಚ್‍ಪಿ ಮತ್ತು 305-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಯಲಿದ್ದು, 6 ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ ಎನ್ನಲಾಗಿದೆ. ಆದ್ರೆ ಪೆಟ್ರೋಲ್ ವರ್ಷನ್ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡದ ಮಹೀಂದ್ರಾ ಸಂಸ್ಥೆಯು ಹೊಸ ಕಾರಿನ ಬಿಡುಗಡೆ ನಂತರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ಸೆಪ್ಟೆಂಬರ್ 3ಕ್ಕೆ ಮಹೀಂದ್ರಾ ಮರಾಜೊ ಕಾರು ಬಿಡುಗಡೆಯಾಗುವುದು ಪಕ್ಕಾ..!

ಇದರೊಂದಿಗೆ ಎಂಪಿವಿ ಬೇಸ್ ಮಾಡೆಲ್ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್‍, ಇಬಿಡಿ ಮತ್ತು ಡ್ಯುಯಲ್ ಏರ್‍‍ಬ್ಯಾಗ್‍‍ಗಳನ್ನು ಕಾರಿನ ಎಲ್ಲಾ ವೇರಿಯಂಟ್‍‍ನಲ್ಲೂ ಅಳವಡಿಸಲಾಗಿದ್ದು, ಇನ್ನು ಟಾಪ್ ಎಂಡ್ ವೇರಿಯಂಟ್ ಕಾರುಗಳು ಕರ್ಟೈನ್ ಏರ್‍‍ಬ್ಯಾಗ್‍‍ಗಳನ್ನು ಕೂಡಾ ಪಡೆದುಕೊಂಡಿರಲಿವೆ. ಇವುಗಳಲ್ಲದೆ ಪಾರ್ಕಿಂಗ್ ಅಸ್ಸಿಸ್ಟ್, ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ.

ಸೆಪ್ಟೆಂಬರ್ 3ಕ್ಕೆ ಮಹೀಂದ್ರಾ ಮರಾಜೊ ಕಾರು ಬಿಡುಗಡೆಯಾಗುವುದು ಪಕ್ಕಾ..!

ಒಟ್ಟಿನಲ್ಲಿ ಮಹೀಂದ್ರಾ ಹೊಸ ಎಂಪಿವಿ ಕಾರು ಬಿಡಗಡೆಗೊಂಡಲ್ಲಿ ಮಾರುತಿ ಎರ್ಟಿಗಾ ಮತ್ತು ಟೊಯೊಟಾ ಇನೊವಾ ಕ್ರಿಸ್ಟಾ, ಟಾಟಾ ಹೆಕ್ಸಾ ಕಾರುಗಳಿಗೆ ಪೈಪೋಟಿಯನ್ನು ನೀಡಲಿದ್ದು, ಇನ್ನು ಕಾರಿನ ಬೆಲೆಯ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದ್ರೂ ದೆಹಲಿಯ ಎಕ್ಸ್ ಶೋರಂ ಪ್ರಕಾರ ಹೊಸ ಕಾರು 11 ರಿಂದ 16 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ. ಹೀಗಾಗಿ ಸೆಪ್ಟೆಂಬರ್ 3ರಂದು ನಡೆಯಲಿರುವ ಕಾರು ಬಿಡುಗಡೆಯಯ ಸಂಪೂರ್ಣ ಮಾಹಿತಿ ನಿಮ್ಮ ಡ್ರೈವ್‌ಸ್ಪಾರ್ಕ್‌ನಲ್ಲಿ ಲಭ್ಯವಿರಲಿದೆ.

Most Read Articles

Kannada
Read more on mahindra mpv new car
English summary
Mahindra Marazzo MPV Launch Date Revealed.
Story first published: Saturday, August 18, 2018, 10:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X