ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರು..
ದೇಶಿಯಾ ವಾಹನ ತಯಾರಕ ಸಂಸ್ಥೆಯಾದ ಮಹಿಂದ್ರಾ ತಮ್ಮ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರನ್ನು ಇಂದು ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಳಿಸಿದೆ.
ದೇಶಿಯಾ ವಾಹನ ತಯಾರಕ ಸಂಸ್ಥೆಯಾದ ಮಹಿಂದ್ರಾ ತಮ್ಮ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರನ್ನು ಇಂದು ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಳಿಸಿದ್ದು, ಏಳು ಆಸನವುಳ್ಳ ಹೊಸ 2018ರ ಎಕ್ಸ್‌ಯುವಿ500 ಎಸ್‍ಯುವಿ ಕಾರುಗಳಲ್ಲಿ ಮೂರನೆಯ ಫೇಸ್‍ಲಿಫ್ಟ್ ಕಾರು ಹಳೆಯ ಮಾದರಿಗಿಂತ ಹೊಸ ಎಂಜಿನ್ ಮತ್ತು ವಿನ್ಯಾಸವನ್ನು ಪಡೆದುಕೊಂಡಿದೆ.

ಹೊಸದಾಗಿ ಬಿಡುಗಡೆಗೊಂಡ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ 12.32 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದಿದ್ದು, ಒಟ್ಟು ಆರು ವೇರಿಯಂಟ್‍ಗಳಲ್ಲಿ ಖರೀದಿಗೆ ಲಭ್ಯವಿದೆ.

ಕಾರಿನ ವಿನ್ಯಾಸ
ಹೊಸ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರು ಹೊಸ ಹೆಡ್‍ಲ್ಯಾಂಪ್ ಮತ್ತು ಟೈಲ್‍ಲ್ಯಾಂಪ್ ಅನ್ನು ಪಡೆದಿದ್ದು, ಎಲ್ಇಡಿ ಡಿಎಲ್ಆರ್ ಗಳನ್ನು ಅಳವಡಿಸಲಾಗಿದೆ. ಮುಂಭಾಗದ ಗ್ರೀಲ್ ಹಾಗು ಬಂಪರ್‍ಗಳು ಈಗ ಮುಂದಿಗಿಂತ ಅಗಲವಾಗಿಯು ಮತ್ತೆ ಆಕರ್ಷಕವಾಗಿದೆ.

ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರುಗಳು ಪ್ರೀಮಿಯಂ ಹಾಗು ಕಪ್ಪು ಬಣ್ಣದಿಂದ ಸಜ್ಜುಗೊಂಡಿದ್ದು, ಕಾರಿನ ಸೀಟ್‍ಗಳು ಲೆಥರ್‍ನಿಂದ ಸಜ್ಜುಗೊಂಡಿದೆ.

| Diesel | ||
| Variant | MT
| AT |
| W5 | ರೂ 12.32 ಲಕ್ಷ | |
| W7 | ರೂ 13.58 ಲಕ್ಷ | ರೂ 14.78 ಲಕ್ಷ |
| W9 | ರೂ 15.23 ಲಕ್ಷ | ರೂ 16.43 ಲಕ್ಷ |
| W11 | ರೂ 16.43 ಲಕ್ಷ | ರೂ 17.63 ಲಕ್ಷ |
| W11 (O) | ರೂ 16.68 ಲಕ್ಷ | ರೂ 17.88 ಲಕ್ಷ |
| Petrol | |
| G AT | ರೂ 15.43 ಲಕ್ಷ |

ಎಂಜಿನ್ ಸಾಮರ್ಥ್ಯ
ಹೊಸ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರುಗಳು ಆರನೆ ತಲೆಮಾರಿನ 2.2 ಲೀಟರ್ ಎಮ್‍ಹವ್ಕ್ ಡೀಸೆಲ್ ಎಂಜಿನ್ ಸಹಾಯದಿಂದ 155ಬಿಹೆಚ್‍ಪಿ ಹಾಗು 360ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು 6 ಸ್ಪೀಡ್ ಮ್ಯಾನುವಲ್ ಅಥವ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍ನೊಂದಿಗೆ ಜೋಡಿಸಲಾಗಿದೆ. ಜೊತೆಗೆ ಪೆಟ್ರೋಲ್ ಮಾದರಿಗಳು ಕೂಡ 140 ಬಿಹೆಚ್‍ಯನ್ನು ಉತ್ಪಾದಿಸುತ್ತವೆ.

ಹೊಸ ಕಾರಿನ ವೈಶಿಷ್ಟ್ಯತೆಗಳು
ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರುಗಳು ಮಾರುಕಟ್ಟೆಯಲ್ಲಿ ಮೊದಲಬಾರಿಗೆ ಸ್ಮಾರ್ಟ್‍ವಾಚ್ ಕನೆಕ್ಟಿವಿಟಿಯನ್ನು ಪಡೆದಿರುವ ಎಸ್‍ಯುವಿ ಕಾರಾಗಿದ್ದು, ಇದರಿಂದ ಕಾರಿನಲ್ಲಿನ ಆಡಿಯೊ, ಎಸಿ, ಬಾಗಿಲುಗಳು, ಎಮರ್ಜನ್ಸಿ ಅಸ್ಸಿಸ್ಟ್ಸ್, ಲೊಕೇಶನ್ ಸರ್ವೀಸ್‍ಗಳಂತಹ ವೈಶಿಷ್ಟ್ಯತೆಗಳನ್ನು ನಿಯಂತ್ರಿಸಬಹುದು.

ಇದಲ್ಲದೆ ಆಂಡ್ರಾಯ್ಡ್ ಆಟೋ ಹಾಗು ಇಕೊಸೆನ್ಸ್ ಆಯ್ಕೆಗಳುಳ್ಳ ಏಳು ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆದಿದೆ. ಜೊತೆಗೆ ಮಹಿಂದ್ರಾ ಸಂಸ್ಥೆಯು ಅರ್ಕ್‍ಮಾರ್ಕ್‍ನ ಆಡಿಯೊವನ್ನು ಕೂಡ ಪಡೆದುಕೊಂಡಿದ್ದು, ಟೈರ್ ಪ್ರೆಶುರ್ ಮಾನಿಟರಿಂಗ್ ಸಿಸ್ಟಂ ಅನ್ನು ಕೂಡ ಪಡೆದುಕೊಂಡಿದೆ.

ಹೊಸ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರುಗಳಲ್ಲಿ ಪ್ರಯಾಣಿಕರ ಸೇಫ್ಟಿಗಾಗಿ ಆರು ಏರ್‍ಭ್ಯಾಗ್‍ಗಳು, ಎಬಿಎಸ್‍ನೊಂದಿಗೆ ಇಬಿಡಿ, ಡಿಸ್ಕ್ ಬ್ರೇಕ್, ಹಿಲ್ ಹೋಲ್ಡ್ ಅಸ್ಸಿಸ್ಟ್, ಹಿಲ್ ಡೆಸ್ಸೆಂಟ್ ಮತ್ತು ಬೇರೆ ಯಾವ ಕಾರುಗಳಲ್ಲಿ ಕಾಣಲಾಗದಂತಹ ಕ್ಲಾಸ್ ಎಮರ್ಜೆನ್ಸಿ ಕಾಲ್ ಸಿಸ್ಟಂ ವೈಶಿಷ್ಟ್ಯತೆಗಳನ್ನು ಅಳಾವಡಿಸಲಾಗಿದೆ.

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರುಗಳು ಈಗಾಗಲೆ ಡೀಲರ್‍ಗಳ ಹತ್ತಿರ ಲಭ್ಯವಿದ್ದು, ಕ್ರಿಮ್‍ಸನ್ ರೆಡ್, ಮಿಸ್ಟಿಕ್ ಕಾಪರ್, ಒಪ್ಯುಲೆಂಟ್ ಪರ್ಪಲ್, ವೋಲ್ವೆನೊ ಬ್ಲಾಕ್, ಲೇಕ್ ಸೈಡ್ ಬ್ರೌನ್, ಪರ್ಲ್ ವೈಟ್ ಹಾಗು ಮೋನ್‍ಡಸ್ಟ್ ಸಿಲ್ವರ್ ಎಂಬ ಏಳು ಬಣ್ಣಗಳಲ್ಲಿ ಲಭ್ಯವಿರಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ರಸ್ಥೆ ಅಪಘಾತದಿಂದ ಪಾರಾದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ..
ಭಾರತದ ಸೇನಾಪಡೆಗಾಗಿಯೆ ವಿಶೇಷವಾಗಿ ತಯಾರಿಸಲ್ಪಟ್ಟ ಟಾಟಾ ಸಫಾರಿ ಸ್ಟೋರ್ಮ್ ಕಾರುಗಳು..
ಭಾರತದಲ್ಲಿ ನಡೆದ ಭೀಕರ 10 ರೈಲು ದುರಂತಗಳಿವು...


Click it and Unblock the Notifications