ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಮಹೀಂದ್ರಾ ಮೊದಲ ಐಷಾರಾಮಿ ಕಾರಿನ ವಿಶೇಷತೆ ಏನು?

ದೇಶಿಯ ಕಾರು ಉತ್ಪಾದನಾ ಸಂಸ್ಥೆಯಾದ ಮಹೀಂದ್ರಾ ಸಂಸ್ಥೆಯು ಕಳೆದ ತಿಂಗಳ ಹಿಂದಷ್ಟೆ ಹೊಚ್ಚ ಹೊಸ ಮರಾಜೊ ಎಂಪಿವಿ ಕಾರನ್ನು ಬಿಡುಗಡೆಗೊಳಿಸಿದ್ದು, ಇದೀಗ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಪೈಪೋಟಿ ನೀಡಬಲ್ಲ ವಿನೂತನ ಐಷಾರಾಮಿ ಎಸ್‌ಯುವಿ ಕಾರು ಮಾದರಿಯೊಂದನ್ನು ಬಿಡುಗಡೆಗೊಳಿಸಲು ವೇದಿಕೆ ಸಜ್ಜುಗೊಳಿಸುತ್ತಿದೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಮಹೀಂದ್ರಾ ಮೊದಲ ಐಷಾರಾಮಿ ಕಾರಿನ ವಿಶೇಷತೆ ಏನು?

ದಕ್ಷಿಣ ಕೊರಿಯಾದ ಮೂಲದ ಸ್ಯಾಂಗ್‌ಯಾಂಗ್‌ ಆಟೋ ಉತ್ಪಾದನಾ ಸಂಸ್ಥೆಯ ಜೊತೆಗೂಡಿರುವ ಮಹೀಂದ್ರಾ ಸಂಸ್ಥೆಯು ಭಾರತದಲ್ಲಿ ಸುಧಾರಿತ ಮಾದರಿಯ ಎಸ್‌ಯುವಿ ಕಾರುಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಿದ್ದು, ವೈ400 ಎನ್ನುವ ಕೋಡ್‌ನೆಮ್ ಆಧಾರದಲ್ಲಿ ಸಿದ್ದಗೊಳಿಸಲಾಗಿರುವ ಪ್ರೀಮಿಯಂ ಎಸ್‌ಯುವಿಯನ್ನು ಅಕ್ಟೋಬರ್ 19ಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಮಹೀಂದ್ರಾ ಮೊದಲ ಐಷಾರಾಮಿ ಕಾರಿನ ವಿಶೇಷತೆ ಏನು?

ಮಹೀಂದ್ರಾ ಹೊಸ ಕಾರು ಎಕ್ಸ್‌ಯುವಿ 500 ಕಾರಿಗಿಂತಲೂ ಹೆಚ್ಚಿನ ಮಟ್ಟದ ಐಷಾರಾಮಿ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಂಡಿದ್ದು, ಹೊಸ ಕಾರಿಗೆ ಎಕ್ಸ್‌ಯುವಿ700 ಎಂದು ನಾಮಕರಣ ಮಾಡುವ ಸಾಧ್ಯತೆಗಳಿವೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಮಹೀಂದ್ರಾ ಮೊದಲ ಐಷಾರಾಮಿ ಕಾರಿನ ವಿಶೇಷತೆ ಏನು?

ಮಹೀಂದ್ರಾ ಸಂಸ್ಥೆಯು ವೈ400 ಕಾರನ್ನು ಕ್ವಾಡ್ ಫ್ರೇಮ್ ತಂತ್ರಜ್ಞಾನದಡಿ ನಿರ್ಮಾಣ ಮಾಡಿದ್ದು, ಸ್ಯಾಂಗ್‌ಯಾಂಗ್‌ ಸಂಸ್ಥೆಯ ಜಿ4 ರೆಕ್ಸ್‌ಸ್ಟನ್ ಕಾರುಗಳ ರೀತಿಯಲ್ಲಿ ಕೆಲವು ಹೊರ ವಿನ್ಯಾಸಗಳಿರುವುದನ್ನು ಚಿತ್ರದಲ್ಲಿ ನೋಡಬಹುದಾಗಿದೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಮಹೀಂದ್ರಾ ಮೊದಲ ಐಷಾರಾಮಿ ಕಾರಿನ ವಿಶೇಷತೆ ಏನು?

ಇದರಿಂದ ಕಾರಿನ ತೂಕವು ಸಾಕಷ್ಟು ಹಗುರವಾಗಿರುವುಲ್ಲದೇ ಎಂಜಿನ್ ಮತ್ತು ಇಂಧನ ಕಾರ್ಯಕ್ಷಮತೆ ಹೆಚ್ಚಲು ಸಹಕಾರಿಯಾಗಲಿದ್ದು, ಎಸ್‌ಯುವಿ ಪ್ರಿಯರಿಗೆ ಇದು ಉತ್ತಮ ಚಾಲನಾ ಅನುಭವ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಮಹೀಂದ್ರಾ ಮೊದಲ ಐಷಾರಾಮಿ ಕಾರಿನ ವಿಶೇಷತೆ ಏನು?

ಜೊತೆಗೆ ವೈ400 ಕಾರು ಮಾದರಿಯು 7 ಸೀಟರ್ ಮಾದರಿಯಾಗಿದ್ದು, ಆಪ್ ರೋಡ್ ಕೌಶಲ್ಯದೊಂದಿಗೆ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, 8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಪ್ರಿಮಿಯಂ ಲೆದರ್ ಸೀಟುಗಳು, 360 ಡಿಗ್ರಿ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಮಹೀಂದ್ರಾ ಮೊದಲ ಐಷಾರಾಮಿ ಕಾರಿನ ವಿಶೇಷತೆ ಏನು?

ಇದಷ್ಟೇ ಅಲ್ಲದೇ ಎಲೆಕ್ಟ್ರಿಕ್ ಸನ್ ರೂಫ್, ಪವರ್ಡ್ ಟೈಲ್‌ಗೆಟ್ ಸೇರಿದಂತೆ ಅತ್ಯಾಧುನಿಕ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಲಿದ್ದು, ಎಸ್‌ಯುವಿ ಕಾರು ಮಾದರಿಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಮಹೀಂದ್ರಾ ಮೊದಲ ಐಷಾರಾಮಿ ಕಾರಿನ ವಿಶೇಷತೆ ಏನು?

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಳ್ಳಲಿರುವ ಹೊಸ ಮಹೀಂದ್ರಾ ವೈ400 ಕಾರುಗಳು ಯೂರೊ 2.2-ಲೀಟರ್(2,200ಸಿಸಿ) 4 ಸಿಲಿಂಡರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದುಕೊಳ್ಳಬಹುದು ಎನ್ನಲಾಗಿದ್ದು, 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ 183-ಬಿಹೆಚ್‍‍ಪಿ ಮತ್ತು 420-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿವೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಮಹೀಂದ್ರಾ ಮೊದಲ ಐಷಾರಾಮಿ ಕಾರಿನ ವಿಶೇಷತೆ ಏನು?

ಜೊತೆಗೆ ಪೆಟ್ರೋಲ್ ಆವೃತ್ತಿಗಳು ಸಹ ಲಭ್ಯವಿರಲಿವೆ ಎನ್ನಲಾಗಿದ್ದು, 2 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 222-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದಿಸಲಿವೆ ಎಂದು ಹೇಳಲಾಗಿದೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಮಹೀಂದ್ರಾ ಮೊದಲ ಐಷಾರಾಮಿ ಕಾರಿನ ವಿಶೇಷತೆ ಏನು?

ಇನ್ನು ಆಫ್ ರೋಡ್ ವೈಶಿಷ್ಟ್ಯತೆ ಹೊಂದಿರುವ ವೈ400 ಕಾರುಗಳಲ್ಲಿ ಹಿಂಬದಿ ಚಕ್ರಗಳಿಗೂ ಗೇರ್‌ಬಾಕ್ಸ್ ಶಕ್ತಿ ಪೂರೈಕೆಯ ಸೌಲಭ್ಯವಿದ್ದು, ಇದು ಕಠಿಣ ಪರಿಸ್ಥಿತಿಗಳಲ್ಲೂ ಸರಾಗವಾಗಿ ನುಗ್ಗಬಲ್ಲ ಬಲಿಷ್ಠ ಕಾರು ಮಾದರಿಯಾಗಲಿದೆ.

MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಮಹೀಂದ್ರಾ ಮೊದಲ ಐಷಾರಾಮಿ ಕಾರಿನ ವಿಶೇಷತೆ ಏನು?

ಇದರೊಂದಿಗೆ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 9 ಏರ್‍‍ಬ್ಯಾಗ್, ಎಬಿಎಸ್, ಇಬಿಡಿ, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಅಡ್ವಾನ್ಸ್ಡ್ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್, ಲೇನ್ ಡಿಪಾರ್ಚುರ್ ವಾರ್ನಿಂಗ್, ಲೇನ್ ಚೇಂಜ್ ಅಸ್ಸಿಸ್ಟ್, ಟ್ರಾಫಿಕ್ ಸೇಫ್ಟಿ ಅಸ್ಸಿಸ್ಟ್ ಮತ್ತು ಹೈ ಬೀಮ್ ಅಸ್ಸಿಸ್ಟ್ ಅನ್ನು ಅಳವಡಿಸಲಾಗಿದೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಮಹೀಂದ್ರಾ ಮೊದಲ ಐಷಾರಾಮಿ ಕಾರಿನ ವಿಶೇಷತೆ ಏನು?

ಕಾರಿನ ಬೆಲೆ(ಅಂದಾಜು)

ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿರುವ ಮಹೀಂದ್ರಾ ಹೊಸ ಕಾರು 7 ಆಸನಗಳೊಂದಿಗೆ ಹೊತ್ತು ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಐಷಾರಾಮಿ ಮಾದರಿಯಾಗಿದ್ದು, ಬೆಲೆಗಳು ಕೂಡಾ ತುಸು ದುಬಾರಿ ಎನ್ನಿಸಲಿವೆ. ಕೆಲವು ಮಾಹಿತಿ ಪ್ರಕಾರ ಹೊಸ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.23 ಲಕ್ಷದಿಂದ ರಿಂದ ರೂ. 27 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಮಹೀಂದ್ರಾ ಮೊದಲ ಐಷಾರಾಮಿ ಕಾರಿನ ವಿಶೇಷತೆ ಏನು?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸದ್ಯ ಕಾರು ಉತ್ಪಾದನೆಯಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಸ್ಯಾಂಗ್‌ಯಾಂಗ್‌ ಜೊತೆಗೂಡಿ ವಿವಿಧ ನಮೂನೆಯ ಹೊಸ ಕಾರುಗಳನ್ನು ಸಿದ್ದಗೊಳಿಸುತ್ತಿದ್ದು, ಮೊದಲ ಹಂತವಾಗಿ ಬಿಡುಗಡೆಯಾಗುತ್ತಿರುವ ವೈ400 ಹೆಸರಿನ ಕಾರು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಜೊತೆಗೆ ಅಕ್ಟೋಬರ್ 19ರಂದು ನಡೆಯುವ ಬಿಡುಗಡೆಯ ಕಾರ್ಯಕ್ರಮದಲ್ಲೇ ಹೊಸ ಕಾರಿನ ಅಧಿಕೃತ ಹೆಸರು ಬಹಿರಂಗವಾಗಲಿದೆ.

Most Read Articles

Kannada
Read more on mahindra suv new car
English summary
Mahindra Y400 Premium SUV Launch Details Revealed.
Story first published: Friday, October 12, 2018, 19:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X