2020ಕ್ಕೆ ಬರಲಿದೆ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರ್
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು 2020ರ ವೇಳೆಗೆ ಬಿಡುಗಡೆಗೊಳಿಸುವುದರ ಬಗ್ಗೆ ಸುಳಿವು ನೀಡಿದೆ.
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು 2020ರ ವೇಳೆಗೆ ಬಿಡುಗಡೆಗೊಳಿಸುವುದರ ಬಗ್ಗೆ ಸುಳಿವು ನೀಡಿದ್ದು, ಸಂಸ್ಥೆಯು ತಮ್ಮ ಪ್ರಥಮ ಎಲೆಕ್ಟ್ರಿಕ್ ಕಾರಾದ ವ್ಯಾಗನ್‍ಆರ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ತಯಾರಿಸಲಿದೆ. ಮಾರುತಿ ಸುಜುಕಿಯು ಇ-ವರ್ಷನ್ ವ್ಯಾಗನ್‍ಆರ್ ಕಾರನ್ನು ಟೊಯೊಟಾ ಜೊತೆ ಕೈ ಜೋಡಿಸಿ ಉತ್ಪಾದಿಸಲಿದೆ ಎನ್ನಲಾಗಿದೆ.

ವ್ಯಾಗನ್ಆರ್ ಇವಿ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರ್ ಆಗಿರಲಿದ್ದು, ಇದು 2020ರಲ್ಲಿ ಬಿಡುಗಡೆಗೊಳ್ಳಲಿದೆ. ಈ ಕಾರು ಗುಜರಾತ್‍ನಲ್ಲಿರುವ ಸುಜುಕಿ ಪ್ಲಾಂಟ್‍ನಲ್ಲಿ ತಯಾರಾಗಲಿದ್ದು, ಇದರ ಬ್ಯಾಟರಿಯ ಉತ್ಪಾದನೆಯನ್ನು ಟೊಯೊಟಾ ಜೊತೆಗಿನ ಪಾಲುದಾರಿಕೆಯಲ್ಲಿ ಉತ್ಪಾದಿಸುತ್ತೆವೆ ಎಂದು ಮಾರುತಿ ಸುಜುಕಿ ಸಂಸ್ಥೆಯು ಹೇಳಿಕೊಂಡಿದೆ.

ಎಲೆಕ್ಟ್ರಿಕ್ ಮಾದರಿಯ ವ್ಯಾಗನ್‍ಆರ್ ಕಾರು ಮಾರುತಿ ಸುಜುಕಿ ಮತ್ತು ಟೊಯೊಟಾ ಪಾಲುದಾರಿಕೆಯಲ್ಲಿ ತಯಾರಾಗಲಿರುವ ಮೊದಲ ಎಲೆಕ್ಟ್ರಿಕ್ ಕಾರಾಗಿದು, ಟೊಯೊಟಾ ಈಗಾಗಲೆ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರಿಗಾಗಿ ಅಲ್ಟ್ರಾ ಹೈ ಎಫಿಶಿಯೆನ್ಸಿ ಪವರ್‍ಟ್ರೈನ್ ಬ್ಯಾಟರಿಯನ್ನು ತಯಾರಿಸುವುದಾಗಿ ಹೇಳಿಕೊಂಡಿದೆ.

ಜೊತೆಗೆ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಮುಂದಿನ ತಲೆಮಾರಿನ ವ್ಯಾಗನ್‍ಆರ್ ಕಾರನ್ನು ಇದೇ ವರ್ಷದಲ್ಲಿ ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಎಲೆಕ್ಟ್ರಿಕ್ ಮಾದರಿಯ ವ್ಯಾಗನ್‍ಆರ್ ಕಾರು ಕಡಿಮೆ ತೂಕದ ಪ್ಲಾಟ್‍ಫಾರ್ಮ್ ಅನ್ನು ಆಧರಿಸಲಿದೆ. ಈ ಹೊಸ ಪ್ಲಾಟ್‍ಫಾರ್ಮ್ ಕಾರಿನ ತೂಕವನ್ನು ಕಡಿಮೆಗೊಳಿಸಲು ಸಹಕಾರಿಯಾಗಿದೆ.

ವ್ಯಾಗನ್ಆರ್ ಇವಿ ಉತ್ಪಾದನೆಗೆ ಯಾವ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದು ಮಾರುತಿ ಯೋಚಿಸುತಿದ್ದು, ಪ್ರಸ್ಥುತ ತಲೆಮಾರಿನ ವ್ಯಾಗನ್‍ಆರ್ ಕಾರನ್ನು ಹರಿಯಾಣದ ಗುರ್‍ಗ್ರಾಮ್ ಪ್ಲಾಂಟ್‍ನಲ್ಲಿ ಉತ್ಪಾದಿಸುತ್ತಿದೆ.

ಮಾಹಿತಿಗಳ ಪ್ರಕಾರ ಎಲೆಕ್ಟ್ರಿಕ್ ಮಾದರಿಯ ವ್ಯಾಗನ್‍ಆರ್ ಕಾರುಗಳನ್ನು ಕೂಡ ಅದೇ ಪ್ಲಾಂಟ್‍ನಲ್ಲಿ ಉತ್ಪಾದಿಸಲಿದೆ ಎಂದು ಹೇಳಲಾಗಿದ್ದು, ಕಾರಿನ ಬ್ಯಾಟರಿಯನ್ನು ಗುಜರಾತ್‍ನಿಂದ ತರಸಿಕೊಳ್ಳಲಾಗುತ್ತದೆ.

ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರು 1999ರಲ್ಲಿ ಬಿಡುಗಡೆಗೊಂಡಿದ್ದು, ಈ ಹಾಚ್‍ಬ್ಯಾಕ್ ಕಾರು 20 ಲಕ್ಷಕ್ಕು ಹೆಚ್ಚು ಯೂನಿಟ್ ಮಾರಾಟಗೊಂಡಿವೆ. ಈ ಕಾರು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಆಯ್ಕೆಯಲ್ಲಿ ಲಭ್ಯವಿದ್ದು, ಹೊಸ ತಲೆಮಾರಿನ ವ್ಯಾಗನ್‍ಆರ್ ಕಾರು ಇದೇ ವರ್ಷ ಬಿಡುಗಡೆಗೊಳ್ಳಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಈ MLA ಮಾಡಿದ ಕೆಲಸವನ್ನು ನಿಜವಾಗಿಯೂ ಮೆಚ್ಚಲೇಬೇಕು..
ಒಲ್ಲೆ ಒಲ್ಲೆ ಎನ್ನುತ್ತಲೇ 1 ಕೋಟಿ ಮೌಲ್ಯದ ಕಾರ್ ಗಿಫ್ಟ್ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ..!
120 ಕಿ.ಮೀ ವೇಗದಲ್ಲಿದ್ದ ಫೆರಾರಿ ಕಾರು ಒಂದೇ ಹೊಡೆತಕ್ಕೆ ಪುಡಿ ಪುಡಿ...


Click it and Unblock the Notifications








