120 ಕಿ.ಮೀ ವೇಗದಲ್ಲಿದ್ದ ಫೆರಾರಿ ಕಾರು ಒಂದೇ ಹೊಡೆತಕ್ಕೆ ಪುಡಿ ಪುಡಿ...
120 ಕಿ.ಮೀ ವೇಗದಲ್ಲಿದ್ದ ಫೆರಾರಿ ಕಾರು ಒಂದೇ ಹೊಡೆತಕ್ಕೆ ಪುಡಿ ಪುಡಿ...
ದೇಶಾದ್ಯಂತ ದಿನಂಪ್ರತಿ ಹತ್ತಾರು ಅಪಘಾತ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ. ಆದರೂ ವಾಹನ ಚಾಲನೆ ವೇಳೆ ಕೆಲವರು ಮುಂಜಾಗ್ರತೆ ವಹಿಸುವುದೇ ಇಲ್ಲಾ. ಪರಿಣಾಮ ಸಣ್ಣಪುಟ್ಟ ತಪ್ಪುಗಳೇ ದೊಡ್ಡ ದುರಂತಗಳಿಗೆ ಎಡೆಮಾಡಿಕೊಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಈ ಘಟನೆಯೇ ಸಾಕ್ಷಿ..

ಅತಿಯಾದ ವೇಗ ಜೀವಕ್ಕೆ ಅಪಾಯ ಅಂತಾ ಗೊತ್ತಿದ್ರು ಬಹುತೇಕ ವಾಹನ ಸವಾರರಿಗೆ ಸ್ಪೀಡ್ನ ಹುಚ್ಚು ಕಡಿಮೆಯಾಗುವುದೇ ಇಲ್ಲ. ಕೆಲವರಂತೂ ಶೋಕಿಗಾಗಿ ಹೆಚ್ಚು ಜನ ಸಂದಣಿ ಇರುವ ಪ್ರದೇಶಗಳಲ್ಲೇ ಮಿತಿ ಮೀರಿದ ವೇಗದಲ್ಲಿ ವಾಹನಗಳನ್ನು ಚಾಲನೆ ಮಾಡುದನ್ನು ದಿನನಿತ್ಯ ನೋಡುತ್ತಲೇ ಇರುತ್ತವೆ.

ಹೀಗೆ ಅತಿಯಾದ ವೇಗದಲ್ಲಿದ್ದ ಫೆರಾರಿ ಕ್ಯಾಲಿಫೋರ್ನಿಯಾ ಟಿ ಸೀರಿಸ್ ಕಾರೊಂದು ಭೀಕರ ಅಪಘಾತದಲ್ಲಿ ಸಿಲುಕಿ ಸಂಪೂರ್ಣ ಜಖಂಗೊಂಡಿದ್ದು, ಕಾರು ಚಾಲನೆ ಮಾಡುತ್ತಿದ್ದ ಚಾಲಕ ಸ್ಥಳದಲ್ಲೇ ಸಾವಪ್ಪಿದ್ದರೇ ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆಯು ಕೋಲ್ಕತ್ತಾದ ಹೌರಾ ಫ್ಲೈ ಓವರ್ ಬಳಿ ನಡೆದಿದೆ.

120 ಕಿ.ಮಿ ವೇಗದಲ್ಲಿದ್ದ ಫೆರಾರಿ ಕ್ಯಾಲಿಫೋರ್ನಿಯಾ ಟಿ ಸೀರಿಸ್ ಕಾರು ವೇಗದಲ್ಲಿರುವಾಗ ನಿಯಂತ್ರಣ ತಪ್ಪಿ ಫ್ಲೈ ಓವರ್ ಗೋಡೆಗೆ ಡಿಕ್ಕಿ ಹೊಡೆದಿದ್ದು, ಗೋಡೆಗೆ ಗುದ್ದಿದ ರಭಸಕ್ಕೆ ಕಾರು ಚಾಲನೆ ಮಾಡುತ್ತಿದ್ದ 43 ವರ್ಷದ ಶಿಬಾಜಿ ರಾಯ್ ಎನ್ನುವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕೋಲ್ಕತ್ತಾ ಮೂಲದ ಕ್ಲಬ್ ಜಿಟಿ ಎನ್ನುವ ಸಂಸ್ಥೆ ಆಯೋಜಿಸಿದ್ದ ಸಂಡೇ ಡ್ರೈವ್‌ನಲ್ಲಿ ಭಾಗಿಯಾಗಿ ವಾಪಸ್ ಆಗುತ್ತಿದ್ದಾಗ ಈ ದುರಂತ ನಡೆದಿದೆ ಎನ್ನಲಾಗಿದ್ದು, ಫ್ಲೈ ಓವರ್ ಮೇಲೆ ನಿಯಂತ್ರಕ್ಕೆ ಸಿಗದೇ ಫೆರಾರಿ ಕ್ಯಾಲಿಫೋರ್ನಿಯಾ ಟಿ ಸೀರಿಸ್ ಕಾರು ಸಂಪೂರ್ಣ ಜಖಂಗೊಂಡಿದೆ.

ಇನ್ನು ಸಂಡೇ ಡ್ರೈವ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇತರೆ ಸೂಪರ್ ಕಾರು ಮಾದರಿಗಳಾದ ಮರ್ಸಿಡಿಸ್ ಎಸ್ಎಲ್‌ಸಿ 43 ಎಎಂಜಿ, ಲಂಬೋರ್ಗಿನಿ ಗೆಲಾರ್ಡೋ, ಫೆರಾರಿ 488 ಸ್ಪೈಡರ್, ಬಿಎಂಡಬ್ಲ್ಯೂ ಐ8, ಪೋರ್ಷೆ ಬಾಕ್ಸ್‌ಸ್ಟರ್ ಸಹ ಅಪಘಾತವಾದ ಕಾರಿನ ಹಿಂದೆಯೇ ಇದ್ದವೂ ಎನ್ನಲಾಗಿದ್ದು, ಫೆರಾರಿ ಕ್ಯಾಲಿಫೋರ್ನಿಯಾ ಟಿ ಕಾರು ಚಾಲಕ ಮಾತ್ರ ವೇಗದ ಚಾಲನೆಗೆ ಮುಂದಾಗಿ ಫ್ಲೈ ಓವರ್‌ನ ತಡೆಗೋಡೆಗೆ ಡಿಕ್ಕಿಹೊಡೆದಿದ್ದಾನೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ಹೌರಾ ಪೊಲೀಸರು ಓವರ್ ಸ್ಪೀಡ್‌ನಲ್ಲಿದ್ದ ಕಾರಣವೇ ಈ ದುರಂತ ನಡೆದಿದೆ ಎಂದು ಪ್ರಾಥಮಿಕ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದು, ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಶಿಲನೆ ಮಾಡಲಾಗುತ್ತಿದೆ.

ಇದಲ್ಲದೇ ಘಟನೆಗೂ ಮುನ್ನ ಅದೇ ರಸ್ತೆಯಲ್ಲಿದ್ದ ಹೋಟೆಲ್ ಒಂದರ ಸಿಸಿಟಿವಿಯಲ್ಲಿ ಅಪಘಾತವಾದ ಫೆರಾರಿ ಕಾರು 120ರಿಂದ 140 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು ಎಂಬ ಬಗ್ಗೆ ಮಾಹಿತಿ ದೊರೆತಿದ್ದು, ಇದೇ ವೇಳೆ ಲಾರಿ ಒಂದು ಕೂಡಾ ಸೂಪರ್ ಕಾರುಗಳ ಗುಂಪಿನೊಂದಿಗೆ ಓವರ್‌ಟೆಕ್ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೀಗಾಗಿಯೇ ಲಾರಿ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸಡನ್ ಬ್ರೇಕ್ ಒತ್ತಿದ್ದು ಅದು ನಿಯಂತ್ರಣಕ್ಕೆ ಬಾರದೇ ರಸ್ತೆ ಪಕ್ಕದಲ್ಲಿದ್ದ ತಡೆ ಗೋಡೆಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಒಂದು ವೇಳೆ ಬಯಲು ಪ್ರದೇಶವಾಗಿದ್ದರೆ ಕಾರು ಚಾಲಕ ಉಳಿಯಬಹುದಾದ ಸಾಧ್ಯತೆಗಳಿದ್ದವು ಎನ್ನಲಾಗಿದ್ದು, ಘಟನೆಗೆ ನಿಖರವಾದ ಏನು ಎನ್ನುವ ಬಗ್ಗೆ ಹೌರಾ ಪೊಲೀಸರು ಇನ್ನಷ್ಟೇ ಮಾಹಿತಿ ನೀಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಸಿಗ್ನಲ್ ಜಂಪ್ ವೇಳೆ ಎಡವಟ್ಟು- ಲಾರಿ ಗುದ್ದಿದ ರಭಸಕ್ಕೆ ಜಖಂಗೊಂಡ ರೇಂಜ್ ರೋವರ್...
ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್
ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ
ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...
ತಾನು ಮಾರಿದ ಕಾರನ್ನೆ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದ ಇಂಜಿನಿಯರ್..!!
ಡ್ರೈವಿಂಗ್ ಲೈಸೆನ್ಸ್ ವಿಚಾರದಲ್ಲಿ ಯುವ ಸಮುದಾಯಕ್ಕೊಂದು ಸಿಹಿ ಸುದ್ದಿ...


Click it and Unblock the Notifications