ಕಾರು ಖರೀದಿದಾರರೇ ಇತ್ತ ಗಮನಿಸಿ- ಮಾರುತಿ ಸುಜುಕಿ ಕಾರುಗಳು ಮತ್ತೆ ದುಬಾರಿ..!

By Praveen Sannamani

ನೀವು ಮಾರುತಿ ಸುಜುಕಿ ಸಂಸ್ಥೆಯ ಕಾರುಗಳನ್ನು ಕೊಳ್ಳುವ ಯೋಜನೆಯಲ್ಲಿದ್ದೀರಾ.? ಹಾಗಾದ್ರೆ ಈ ಕೂಡಲೇ ನಿಮ್ಮ ಹತ್ತಿರದ ಮಾರುತಿ ಸುಜುಕಿ ಶೋರಂಗೆ ಭೇಟಿ ನೀಡಿ ಕಾರುಗಳ ಬೆಲೆ ಬಗ್ಗೆ ಮತ್ತೊಮ್ಮೆ ಮಾಹಿತಿಯನ್ನು ಪಡೆದುಕೊಳ್ಳುವುದು ಒಳಿತು ಏಕೆಂದರೆ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಕಾರುಗಳ ಮೇಲೆ ಮತ್ತೊಮ್ಮೆ ಬೆಲೆಗಳನ್ನು ಏರಿಕೆ ಮಾಡಿ ಪ್ರಕಟಣೆ ಹೊರಡಿಸಿದೆ.

ಕಾರು ಖರೀದಿದಾರರೇ ಇತ್ತ ಗಮನಿಸಿ- ಮಾರುತಿ ಸುಜುಕಿ ಕಾರುಗಳು ಮತ್ತೆ ದುಬಾರಿ..!

ಹೌದು, ಮಾರುತಿ ಸುಜುಕಿ ಸಂಸ್ಥೆಯು 2018ರ ಅವಧಿಯಲ್ಲಿ ಮೂರನೇ ಬಾರಿಗೆ ಕಾರುಗಳ ಬೆಲೆಯಲ್ಲಿ ಏರಿಕೆ ಮಾಡಿದ್ದು, ಮಾಹಿತಿಗಳ ಪ್ರಕಾರ ಪ್ರತಿ ಕಾರಿನ ಬೆಲೆಯು ಎಕ್ಸ್‌ಶೋರಂ ಪ್ರಕಾರ ರೂ. 5 ಸಾವಿರದಿಂದ ರೂ. 6,100 ತನಕ ಬೆಲೆ ಹೆಚ್ಚಳ ಮಾಡಲಾಗಿದೆಯೆಂತೆ. ಇದರಿಂದ ಕಾರು ಖರೀದಿ ಮತ್ತಷ್ಟು ದುಬಾರಿಯಾಗಲಿದ್ದು, ಇದರಿಂದ ಕಾರಿನ ಇಎಂಐ ದರಗಳು ಸಹ ಹೆಚ್ಚಳವಾಗಲಿವೆ.

ಕಾರು ಖರೀದಿದಾರರೇ ಇತ್ತ ಗಮನಿಸಿ- ಮಾರುತಿ ಸುಜುಕಿ ಕಾರುಗಳು ಮತ್ತೆ ದುಬಾರಿ..!

ಹೊಸ ದರಗಳು ಇದೇ ತಿಂಗಳು 16ರಿಂದ ಅನ್ವಯವಾಗುವಂತೆ ಹೊಸ ದರ ಪಟ್ಟಿ ಬಿಡುಗಡೆ ಮಾಡಿರುವ ಮಾರುತಿ ಸುಜುಕಿ ಸಂಸ್ಥೆಯು, ಯಾವ ಕಾರಿನ ಮೇಲೆ ಎಷ್ಟು ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ ಎನ್ನುವ ಬಗ್ಗೆ ಇನ್ನು ನಿಖರ ಮಾಹಿತಿ ನೀಡಿಲ್ಲ.

ಕಾರು ಖರೀದಿದಾರರೇ ಇತ್ತ ಗಮನಿಸಿ- ಮಾರುತಿ ಸುಜುಕಿ ಕಾರುಗಳು ಮತ್ತೆ ದುಬಾರಿ..!

ಹೂಡಿಕೆಯ ಖರ್ಚುಗಳು ಮತ್ತು ಬೆಳೆಯುತ್ತಿರುವ ಇಂಧನ ಬೆಲೆ, ಕಸ್ಟಂ ಡ್ಯೂಟಿಗಳು ಏರಿಕೆ ಹಿನ್ನೆಲೆಯಲ್ಲಿ ಕಾರಿನ ಉತ್ಪಾದನಾ ಖರ್ಚುಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಕಾರುಗಳ ಬೆಲೆ ಏರಿಕೆ ಮಾಡಲಾಗಿದೆ.

ಕಾರು ಖರೀದಿದಾರರೇ ಇತ್ತ ಗಮನಿಸಿ- ಮಾರುತಿ ಸುಜುಕಿ ಕಾರುಗಳು ಮತ್ತೆ ದುಬಾರಿ..!

ಭಾರತ ದೇಶದ ಅತೀ ದೊಡ್ಡ ಪ್ಯಾಸೆಂಜರ್ ಕಾರುಗಳ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ರೆಗ್ಯೂಲರ್ ಮತ್ತು ಪ್ರೀಮಿಯಂ ಶೋರಂಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು. ಆಲ್ಟೊ, ಸೆಲೆರಿಯೊ, ವ್ಯಾಗನ್‍ ಆರ್, ಸ್ವಿಫ್ಟ್, ಡಿಜೈರ್ ಮತ್ತು ವಿಟಾರಾ ಬ್ರೆಝಾ ಕಾರುಗಳನ್ನು ರೆಗ್ಯೂಲರ್ ಶೋರಂ‍ಗಳಲ್ಲಿ ಮಾರಾಟ ಮಾಡುತ್ತಿದೆ.

ಕಾರು ಖರೀದಿದಾರರೇ ಇತ್ತ ಗಮನಿಸಿ- ಮಾರುತಿ ಸುಜುಕಿ ಕಾರುಗಳು ಮತ್ತೆ ದುಬಾರಿ..!

ಇದೇ ಮಾದರಿಯಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಇಗ್ನಿಸ್, ಬಲೆನೊ, ಸಿಯಾಜ್ ಮತ್ತು ಎಸ್‍-ಕ್ರಾಸ್ ಕಾರುಗಳನ್ನು ನೆಕ್ಸಾ ಶೋರಂಗಳಲ್ಲಿ ಮಾರಾಟ ಮಾಡುತ್ತಲ್ಲದೇ ಈ ವರ್ಷದ ಪ್ರಾರಂಭದಲ್ಲಿ ಮೂರನೆಯ ತಲೆಮಾರಿನ ಸ್ವಿಫ್ಟ್ ಕಾರುಗಳ ಬೆಲೆಯಲ್ಲೂ ಏರಿಕೆ ಮಾಡಿ ಪ್ರಕಟಣೆ ಹೊರಡಿಸಿದೆ.

ಕಾರು ಖರೀದಿದಾರರೇ ಇತ್ತ ಗಮನಿಸಿ- ಮಾರುತಿ ಸುಜುಕಿ ಕಾರುಗಳು ಮತ್ತೆ ದುಬಾರಿ..!

ಅಲ್ಲದೇ ಈ ವರ್ಷದಲ್ಲಿ ಎರ್ಟಿಗಾ, ಸಿಯಾಜ್ ಫೆಸ್‍‍ಲಿಫ್ಟ್ ಮತ್ತು ಹೊಸ ತಲೆಮಾರಿನ ವ್ಯಾಗನ್‍ ಆರ್ ಜೊತೆ ಸೇರಿ ವ್ಯಾಗನ್ ಆರ್ 7 ಸೀಟರ್ ಮಾಡೆಲ್ ಕಾರುಗಳನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದ್ದು, ಈಗಾಗಲೇ ಈ ಕಾರುಗಳು ರಸ್ತೆಯಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿವೆ.

ಕಾರು ಖರೀದಿದಾರರೇ ಇತ್ತ ಗಮನಿಸಿ- ಮಾರುತಿ ಸುಜುಕಿ ಕಾರುಗಳು ಮತ್ತೆ ದುಬಾರಿ..!

ಕೇವಲ ಮಾರುತಿ ಸುಜುಕಿ ಮಾತ್ರವಲ್ಲದೆ ಇನ್ನು ಹಲವಾರು ವಾಹನ ತಯಾರಕ ಸಂಸ್ಥೆಗಳು ಸಹ ತಮ್ಮ ಪ್ರಮುಖ ಕಾರು ಉತ್ಪನ್ನಗಳ ಮೇಲೆ ಕಳೆದ ಜೂನ್ 1ರಿಂದಲೇ ಬೆಲೆ ಏರಿಕೆ ಮಾಡಿದ್ದು, ಹ್ಯುಂಡೈ ಸಂಸ್ಥೆಯು ಈಗಾಗಲೇ ತಮ್ಮ ಕಾರುಗಳ ಮೇಲೆ ಶೇಕಡಾ 2 ರಷ್ಟು ಬೆಲೆ ಏರಿಕೆ ಮಾಡಿರುವುದಾಗಿ ಹೇಳಿಕೊಂಡಿದೆ.

ಕಾರು ಖರೀದಿದಾರರೇ ಇತ್ತ ಗಮನಿಸಿ- ಮಾರುತಿ ಸುಜುಕಿ ಕಾರುಗಳು ಮತ್ತೆ ದುಬಾರಿ..!

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!

ದೇಶದ ಮೊದಲ ಟೆಸ್ಲಾ ಐಷಾರಾಮಿ ಮಾಡೆಲ್ ಎಕ್ಸ್ 100ಡಿ ಕಾರು ಒಡೆಯನಾದ ಮುಂಬೈ ಉದ್ಯಮಿ..!

ಈ ಕಾರಿನಲ್ಲಿ ಇನ್ನೊವಾ ಕ್ರಿಸ್ಟಾಗಿಂತಾ ಹೆಚ್ಚು ಐಷಾರಾಮಿ ಸೌಲತ್ತುಗಳಿವೆಯಂತೆ.!

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಸುರಕ್ಷಾ ರೇಟಿಂಗ್‌ನಲ್ಲಿ ಸೊನ್ನೆ ಸುತ್ತಿದ ಮಾರುತಿ ಸುಜುಕಿ ನಿರ್ಮಾಣದ ಜನಪ್ರಿಯ ಕಾರುಗಳು

More from DriveSpark

Article Published On: Friday, August 17, 2018, 10:39 [IST]
English summary
Maruti Suzuki Hikes Prices Across The Range By Up To Rs 6,100.
Read more on maruti suzuki price hike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+