TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಸುರಕ್ಷಾ ರೇಟಿಂಗ್‌ನಲ್ಲಿ ಸೊನ್ನೆ ಸುತ್ತಿದ ಮಾರುತಿ ಸುಜುಕಿ ನಿರ್ಮಾಣದ ಜನಪ್ರಿಯ ಕಾರುಗಳು
ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಸದ್ಯ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ನಂ.1 ಸ್ಥಾನದಲ್ಲಿದ್ದು, ಮಾರಾಟಕ್ಕೆ ಲಭ್ಯವಿರುವ 15ಕ್ಕೂ ಹೆಚ್ಚು ಕಾರು ಉತ್ಪನ್ನಗಳಲ್ಲಿ ಬಹುತೇಕ ಮಾದರಿಗಳು ಜನಪ್ರಿಯತೆ ಸಾಧಿಸಿವೆ. ಆದ್ರೆ ಕಾರುಗಳಲ್ಲಿನ ಸುರಕ್ಷಾ ವಿಚಾರಕ್ಕೆ ಸಂಬಂಧಿಸಿದಂತೆ ಮಾರುತಿ ಸುಜುಕಿ ಸಂಸ್ಥೆಗೆ ಹಿನ್ನೆಡೆಯಾಗಿದ್ದು, ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಜನಪ್ರಿಯ ಕಾರುಗಳೇ ರೇಟಿಂಗ್‌ನಲ್ಲಿ ಸೊನ್ನೆ ಸುತ್ತಿವೆ ಎಂದ್ರೆ ನೀವು ನಂಬಲೇಬೇಕು.
ಹೌದು, ಕೇಂದ್ರ ಸರ್ಕಾರವು ಮುಂಬರುವ 2019ರಿಂದ ಪ್ರತಿ ಕಾರು ಮಾದರಿಯು ಸಹ ನಿರ್ದಿಷ್ಟ ಮಟ್ಟ ಸುರಕ್ಷಾ ಸೌಲಭ್ಯಗಳನ್ನು ಹೊಂದಿದ್ದರೇ ಮಾತ್ರವೇ ಕಾರು ಮಾರಾಟಕ್ಕೆ ಅವಕಾಶ ನೀಡುವ ಉದ್ದೇಶದಿಂದ ಇಂಡಿಯನ್ ಕ್ರ್ಯಾಶ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ. ಇದರಲ್ಲಿ ಮಾರುತಿ ಸುಜುಕಿ ನಿರ್ಮಾಣದ 15 ಪ್ರಮುಖ ಕಾರುಗಳು ಈ ಕ್ರ್ಯಾಶ್ ಟೆಸ್ಟಿಂಗ್ ಭಾಗಿಯಾಗಿದ್ದು, ಜನಪ್ರಿಯ ಕಾರುಗಳಲ್ಲೇ ಕನಿಷ್ಠ ಮಟ್ಟದ ಸುರಕ್ಷೆಯು ಇಲ್ಲದಿರುವುದು ಖರೀದಿಗೆ ಯೋಗ್ಯವಲ್ಲದ ಕಾರು ಮಾದರಿಗಳಾಗಿರುವುದು ಗ್ರಾಹಕರಲ್ಲಿ ಗೊಂದಲ ಹುಟ್ಟುಹಾಕಿದೆ.
ಕಾರುಗಳು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 4, 3, 2, 1, 0 ಸ್ಟಾರ್ ರೇಟಿಂಗ್ ಬಂದಲ್ಲಿ ಅನುಕ್ರಮವಾಗಿ ಉತ್ತಮ, ಖರೀದಿಗೆ ಯೋಗ್ಯ, ಸಾಧರಣ, ಅಸುರಕ್ಷಿತ ಕಾರು ಮಾದರಿ ಎಂದು ಕರೆಯಲಾಗುತ್ತದೆ.
ಇದರಲ್ಲಿ ಮಾರುತಿ ಸುಜುಕಿ ನಿರ್ಮಾಣದ ಸೆಲೆರಿಯೊ, ಇಗ್ನಿಸ್, ಸ್ವಿಫ್ಟ್, ಡಿಜೈರ್, ಎರ್ಟಿಗಾ, ಬಲೆನೊ, ವಿಟಾರಾ ಬ್ರೆಝಾ, ಸಿಯಾಜ್ ಮತ್ತು ಎಸ್-ಕ್ರಾಸ್ ಕಾರುಗಳು ಮಾತ್ರವೇ ಉತ್ತಮವಾದ ಸುರಕ್ಷಾ ರೇಟಿಂಗ್ ಪಡೆದುಕೊಂಡಿದ್ದು, ಇನ್ನುಳಿದ ಆಲ್ಟೊ, ವ್ಯಾಗನ್ ಆರ್, ಒಮ್ನಿ, ಇಕೊ ಮತ್ತು ರಫ್ತು ಮಾದರಿಯಾದ ಜಿಪ್ಸಿ ಕಾರುಗಳು ಸೊನ್ನೆ ರೇಟಿಂಗ್ ಪಾಯಿಂಟ್ ಪಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿವೆ.
ವಾಸ್ತಾವವಾಗಿ ಸೊನ್ನೆ ರೇಟಿಂಗ್ ಹೊಂದಿರುವ ಕಾರುಗಳನ್ನು ಮಾರಾಟ ಮಾಡಲು ವಿದೇಶಿ ಮಾರುಕಟ್ಟೆಗಳಲ್ಲಿ ಅನುಮತಿಯೇ ಇಲ್ಲದಿರುವ ಸಂದರ್ಭದಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಮಾತ್ರ ಭಾರತೀಯ ಮಾರುಕಟ್ಟೆಯಲ್ಲಿ ಆಲ್ಟೊ, ವ್ಯಾಗನ್ ಆರ್ ಕಾರುಗಳನ್ನ ಹಾಟ್ ಚಿಪ್ಸ್‌ನಂತೆ ಮಾರಾಟ ಮಾಡುತ್ತಿರುವುದು ದೃಷ್ಟಕರ ಸಂಗತಿ ಅಂದ್ರೆ ತಪ್ಪಾಗುದಿಲ್ಲ.
ಕನಿಷ್ಠ ಮಟ್ಟದ ಸುರಕ್ಷೆತೆಯನ್ನು ನೀಡಲು ಹಿಂದೆ ಮುಂದೆ ನೋಡುವ ಮಾರುತಿ ಸುಜುಕಿಗೆ ಇದೀಗ ಸಂಕಷ್ಟ ಎದುರಾಗಿದ್ದು, 2019ರಿಂದ ಜಾರಿಗೆ ಬರಲಿರುವ ಹೊಸ ಕಾಯ್ದೆಯಿಂದ ಸೊನ್ನೆ ರೇಟಿಂಗ್ ಪಡೆದಿರುವ ಕಾರುಗಳು ಮೂಲೆಗುಂಪಾಬೇಕಾದ ಅನಿವಾರ್ಯತೆಗಳಿವೆ.
ಇಲ್ಲವಾದ್ರೆ, ಗುಣಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಅಳವಡಿಸಿದ ನಂತರವೇ ಮಾರಾಟ ಮಾಡಬಹುದಾದ ಅವಕಾಶವಿದ್ದು, ಇದುವರೆಗೆ ಆಲ್ಟೊ, ವ್ಯಾಗನ್ ಆರ್, ಒಮ್ನಿ, ಇಕೊ ಖರೀದಿ ಮಾಡಿರುವ ಗ್ರಾಹಕರ ಪರಿಸ್ಥಿತಿ ಉಹಿಸಲು ಅಸಾಧ್ಯ.
ಯಾಕೆಂದ್ರೆ ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ಕನಿಷ್ಠ ಮಟ್ಟದ ಸುರಕ್ಷೆ ಇಲ್ಲದಿರುವ ಕಾರುಗಳಿಂದ ಅಪಘಾತದ ತೀವ್ರತೆ ಮತ್ತಷ್ಟು ಏರಿಕೆಯಾಗಲಿದ್ದು, ಇದೇ ಕಾರಣಕ್ಕೆ ಕಠಿಣ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರವು ಕನಿಷ್ಠ ಸುರಕ್ಷಾ ಸೌಲಭ್ಯಗಳನ್ನು ಅಳವಡಿಸಿ ಮಾರಾಟ ಮಾಡಿ ಇಲ್ಲವೇ ಕಳಪೆ ಗುಣಮಟ್ಟದ ಕಾರುಗಳನ್ನು ವಾಪಸ್ ಪಡೆಯಿರಿ ಎಂದು ಕಾರು ಉತ್ಪಾದನಾ ಸಂಸ್ಥೆಗಳಿಗೆ ಖಡಕ್ ವಾರ್ನ್ ಮಾಡಿದೆ.
ಹೀಗಾಗಿಯೇ ಮಹತ್ವದ ನಿರ್ಧಾರಕ್ಕೆ ಬಂದಿರುವ ಮಾರುತಿ ಸುಜುಕಿ ಸಂಸ್ಥೆಯು ಡೆಡ್ ಲೈನ್‌ಗೂ ಮುನ್ನವೇ ಪ್ರತಿ ಕಾರಿನಲ್ಲೂ ಗುಣಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಅಳವಡಿಸುವ ನಿರ್ಧಾರಕ್ಕೆ ಬಂದಿದ್ದು, ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುವುದಾಗಿ ಒಪ್ಪಿಗೆ ಸೂಚಿಸಿದೆ.
ಬೆಲೆ ಏರಿಕೆ ಬಿಸಿ..!
ಬಹುತೇಕರಿಗೆ ಗೊತ್ತಿರುವ ಪ್ರಕಾರ ಮಾರುತಿ ಸುಜುಕಿ ಜನಪ್ರಿಯತೆ ಗಳಿಸಲು ಕಾರಣವೇ ಅಗ್ಗದ ಬೆಲೆಯ ಕಾರುಗಳು ಪ್ರಮುಖ ಕಾರಣ ಎಂಬುವುದು ಸುಳ್ಳಲ್ಲ. ಆದ್ರೆ ಸುರಕ್ಷೆ ವಿಚಾರಕ್ಕೆ ಬಂದಲ್ಲಿ ಕಳಪೆಯಾಗಿರುವ ಕೆಲವು ಕಾರುಗಳು ಇನ್ಮುಂದೆ ದುಬಾರಿ ಪರಿಣಮಿಸಲಿವೆ.
ಅಗ್ಗದ ಬೆಲೆಯಲ್ಲಿ ಸುರಕ್ಷಾ ಸೌಲಭ್ಯಗಳನ್ನು ನೀಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಬೆಲೆ ಏರಿಕೆಯಾಗಲಿದ್ದು, ಕನಿಷ್ಠ ಅಂದ್ರು ಪ್ರತಿ ಕಾರಿನ ಬೆಲೆಯು ಹೆಚ್ಚುವರಿವಾಗಿ 1 ಲಕ್ಷ ಬೆಲೆ ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಒಟ್ಟಿಲ್ಲಿ ಸುರಕ್ಷಾ ಸೌಲಭ್ಯಗಳು ಬೇಕಾದಲ್ಲಿ ಬೆಲೆ ಏರಿಕೆಯ ಹೊಡೆತವನ್ನ ಸಹಿಸಿಕೊಳ್ಳಲೇಬೇಕಾದ ಪರಿಸ್ಥಿತಿ ಗ್ರಾಹಕರಿಗೆ ಎದುರಾಗಲಿದ್ದು, ಬೆಲೆ ಏರಿಕೆಗಿಂತ ಜನರ ಜೀವವೇ ಮುಖ್ಯ ಎನ್ನುವಾಗ ಬೆಲೆ ಏರಿಕೆಯು ಅನಿರ್ವಾಯವಾಗುತ್ತೆ ಎನ್ನುವುದು ವಾಸ್ತವ.
ಹಾಗಾದ್ರೆ ಕನಿಷ್ಠ ಸುರಕ್ಷಾ ಸೌಲಭ್ಯಗಳು ಯಾವವು?
ಕಾರುಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಫ್ರಂಟ್ ವೀಲ್ಹ್ ಡಿಸ್ಕ್ ಬ್ರೇಕ್ ಜೊತೆ ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಟೈರ್ ಫ್ರೇಷರ್ ಮಾನಿಟರ್ ಮತ್ತು ಗುಣಮಟ್ಟದ ಬಾಡಿ ಕಿಟ್ ಸೌಲಭ್ಯಗಳು ಕಡ್ಡಾಯವಾಗಿ ಹೊಂದಿರುವುದು ಸುರಕ್ಷಾ ದೃಷ್ಠಿಯಿಂದ ಒಳ್ಳೆಯದು.