ಜೀಪ್ ಕಾಂಪಸ್‌ಗೆ ಟಾಂಗ್ ಕೊಡಲಿದೆ ಎಂಜಿ ಮೋಟಾರ್ಸ್ ಹೊಸ ಎಸ್‍ಯುವಿ
ಎಂಜಿ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಹೊಸ ಎಸ್‍ಯುವಿ ಕಾರಿನ ಉತ್ಪಾದನೆಯ ಬಗ್ಗೆ ಸುಳಿವು ನೀಡಿದ್ದು, ಮಾಹಿತಿಗಳ ಪ್ರಕಾರ ಕಾಂಪ್ಯಾಕ್ಟ್ ಎಸ್‍ಯುವಿ ಮಾದರಿಯಲ್ಲಿ ಕಾರನ್ನು ತಯಾರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವಾರು ವಾಹನ ತಯಾರಕ ಸಂಸ್ಥೆಗಳು ತಮ್ಮ ಎಸ್‍ಯುವಿ ಸರಣಿಯ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ಈಗ ಎಂಜಿ ಮೋಟಾರ್ಸ್ ಕೂಡ ಭಾರತದಲ್ಲಿ ಮೊದಲ ಬಾರಿಗೆ ಎಸ್‍ಯುವಿ ಕಾರು ಮಾದರಿಯೊಂದನ್ನು ಬಿಡುಗಡೆಗೊಳಿಸಲು ಯೋಜನೆ ರೂಪಿಸಿದೆ.

ಈ ಹಿಂದೆಯೇ ಎಂಜಿ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಹೊಸ ಎಸ್‍ಯುವಿ ಕಾರಿನ ಉತ್ಪಾದನೆಯ ಬಗ್ಗೆ ಸುಳಿವು ನೀಡಿದ್ದು, ಮಾಹಿತಿಗಳ ಪ್ರಕಾರ ಕಾಂಪ್ಯಾಕ್ಟ್ ಎಸ್‍ಯುವಿ ಮಾದರಿಯಲ್ಲಿ ಕಾರನ್ನು ತಯಾರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಹೊಸ ಎಸ್‌ಯುವಿ ಕಾರುಗಳು ಸಬ್ 4 ಮೀಟರ್ ವಿನ್ಯಾಸ ಹೊಂದಿದೆ ಎನ್ನಲಾಗಿದ್ದು, ಹೊಸದಾಗಿ ತಯಾರಿಸುತ್ತಿರುವ ಎಸ್‌ಯುವಿ ಕಾರನ್ನು 2019ರ ದ್ವಿತಿಯ ತ್ರೈಮಾಸಿಕ ಅವಧಿಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆಯಂತೆ.

ಚೀನಾದ ಎಸ್ಎಐಸಿ ಸ್ವಾಮ್ಯದ ಬ್ರಿಟಿಷ್ ಕಾರು ತಯಾರಕ ಸಂಸ್ಥೆಯಾಗಿರುವ ಎಂಜಿ ಮೋಟಾರ್ಸ್ ಹಲವು ಮಾದರಿಯ ಕಾರುಗಳನ್ನು ಪರಿಚಯಿಸಲು ಯೋಜಿಸುತ್ತಿದ್ದು, ಜಗತ್ತಿನ ವಿವಿಧ ದೇಶಗಳಲ್ಲಿ ಈಗಾಗಲೇ ಮಾರಾಟಗೊಳ್ಳುತ್ತಿರುವ ಎಂಜಿ ಮೋಟಾರ್ಸ್‍ನ ಜೆಡ್ಎಸ್ ಅಥವಾ ಜಿಎಸ್ ಫೇಸ್‍ಲಿಫ್ಟ್ ಕಾರಿನ ಮಾದರಿಯಂತೆ ಭಾರತದಲ್ಲೂ ಪರಿಚಯಿಸಲಿದೆ.

ಇದಲ್ಲದೇ 2020ರ ವೇಳೆಗೆ ಹೊಸ ನೀತಿಯಂತೆ ಮಾಲಿನ್ಯ ಹೊರಸೂಸುವಿಕೆ ನಿಯಮಗಳನ್ನು ಜಾರಿಗೆ ತರಲು ಎಂಜಿ ಮೋಟಾರ್ಸ್ ಮುಂದಾಗಿದ್ದು, ಬರಲಿರುವ ಎಸ್‍ಯುವಿಗಳಲ್ಲಿ ನವೀಕರಿಸಿದ ಮಾನದಂಡಗಳಿಗೆ ಅನುಗುಣವಾಗಿ ಎಂಜಿನ್‍ಗಳನ್ನು ಪ್ರಾರಂಭಿಸಬಹುದೆಂಬ ನಿರೀಕ್ಷೆಯಿದೆ.

ಮುಂಬರುವ ದಿನಗಳಲ್ಲಿ ಎಂಜಿ ಮೋಟಾರ್ಸ್‍ನ ಎಸ್‍ಯುವಿಯು ತನ್ನ ಕಾರುಗಳ ಬೆಲೆಗಿಂತ ಹೆಚ್ಚಿನ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಪ್ರಸ್ಥುತ ಮಾರುಕಟ್ಟೆಯಲ್ಲಿನ ತಮ್ಮ ಪ್ರತಿಸ್ಪರ್ಧಿಗಳಿಂದ ಸ್ಪರ್ಧೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

5 ಸೀಟರ್ ವಿನ್ಯಾಸದ ಎಸ್‍ಯುವಿ ಕಾರನ್ನು ತಯಾರಿಸಲು ಕಾರಿನ ಬಿಡಿಭಾಗಗಳನ್ನು ಸ್ಥಳಾಂತರಿಸಲು ಸಂಸ್ಥೆಯು ಯೋಜಿಸುತ್ತಿದ್ದು, ಈ ಕಾರಿನ ಬೆಲೆಯು ಸುಮಾರು ರೂ 13-14 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದೆ.

ಇದಲ್ಲದೇ ಈ ಕಾರು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾಂಪ್ಯಾಕ್ಟ್ ಎಸ್‍ಯುವಿ ಕಾರುಗಳಿಗೆ ಯಾವ ರೀತಿ ಪೈಪೋಟಿ ನೀಡಲಿದೆ ಎಂದು ಕಾಯ್ದು ನೋಡಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ಜಾಲತಾಣದಲ್ಲಿನ ವೈರಲ್ ಸ್ಟೋರಿಗಳು:
1. ಕಾನೂನು ಬಾಹಿರವಾಗಿ ಪಾರ್ಕ್ ಮಾಡಿದ್ದಕ್ಕೆ ಸೂಪರ್ ಕಾರ್ ಪುಡಿ ಪುಡಿ ಮಾಡಿದ್ರು...
3. ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..
4. ಬಿಡುಗಡೆಯಾಗಲಿರುವ ಮಾರುತಿ ಡಿಜೈರ್ ಟೂರ್ ಎಸ್ ಸಿಎನ್‍ಜಿ ಕಾರಿನ ಬೆಲೆ ಎಷ್ಟು ಗೊತ್ತಾ?


Click it and Unblock the Notifications