ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಗೊಳಿಸಿದ ಹ್ಯುಂಡೈ..

ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರಿನ ಆರಂಭಿಕ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 9.43 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ. 15.03 ಲಕ್ಷಕ್ಕೆ ನಿಗದಿಗೊಳಿಸಿದೆ.

By Praveen Sannamani

ಹ್ಯುಂಡೈ ಇಂಡಿಯಾ ಸಂಸ್ಥೆಯು ತನ್ನ ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರಿನ ಆರಂಭಿಕ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 9.43 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ. 15.03 ಲಕ್ಷಕ್ಕೆ ನಿಗದಿಗೊಳಿಸಿದೆ.

ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಗೊಳಿಸಿದ ಹ್ಯುಂಡೈ..

ಹ್ಯುಂಡೈ ಸಂಸ್ಥೆಯು ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ಕಾರಿನ ಎಂಜಿನ್ ವಿಭಾಗವನ್ನು ಹೊರತುಪಡಿಸಿ ಹೊರ ಮತ್ತು ಒಳ ವಿನ್ಯಾಸದಲ್ಲಿ ಭಾರೀ ಬದಲಾವಣೆ ಪಡೆದುಕೊಂಡಿರುವುದು ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಗೊಳಿಸಿದ ಹ್ಯುಂಡೈ..

ಹ್ಯುಂಡೈ ಕ್ರೇಟಾ ಫೇಸ್‌‌ಲಿಫ್ಟ್ ಕಾರುಗಳು ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದು, ಇವುಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಆವೃತ್ತಿಯಲ್ಲಿ 6 ವೆರಿಯೆಂಟ್‌ಗಳು ಮತ್ತು ಡೀಸೆಲ್ ಆವೃತ್ತಿಯಲ್ಲಿ 7 ವೆರಿಯೆಂಟ್‌ಗಳನ್ನು ಪರಿಚಯಿಸಲಾಗಿದೆ.

ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಗೊಳಿಸಿದ ಹ್ಯುಂಡೈ..

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಕಾರ್ ವೆರಿಯೆಂಟ್‌ಗಳು ಮತ್ತು ಬೆಲೆಗಳು (ಎಕ್ಸ್‌ಶೋರಂ ಪ್ರಕಾರ)

ಪೆಟ್ರೋಲ್ ಕಾರುಗಳು ಬೆಲೆಗಳು
1.6 ಇ ರೂ. 9,43,908
1.6 ಇ ಪ್ಲಸ್ ರೂ. 9,99,900
1.6 ಎಸ್ಎಕ್ಸ್ ರೂ. 11,93,934
1.6 Tone ಎಸ್ಎಕ್ಸ್ ಡ್ಯುಯಲ್ ರೂ. 12,43,934
1.6 ಎಸ್ಎಕ್ಸ್ ಎಟಿ ರೂ. 13,43,834
1.6 ಎಸ್ಎಕ್ಸ್ (ಒ) ರೂ. 13,59,948

ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಗೊಳಿಸಿದ ಹ್ಯುಂಡೈ..

ಡೀಸೆಲ್ ಎಂಜಿನ್ ಕಾರು ಆವೃತ್ತಿಗಳು

ಕಾರು ಮಾದರಿಗಳು ಬೆಲೆಗಳು
1.4 ಇ ಪ್ಲಸ್ ರೂ. 9,99,900
1.4 ಎಸ್ ರೂ. 11,73,893
1.6 ಎಸ್ ಎಟಿ ರೂ. 13,19,934
1.6 ಎಸ್ಎಕ್ಸ್ ರೂ. 13,23,934
1.6 ಎಸ್ಎಕ್ಸ್ ಡ್ಯುಯಲ್ ಟೋನ್

ರೂ. 13,73,934
1.6 ಎಸ್ಎಕ್ಸ್ ಎಟಿ ರೂ. 14,83,934
1.6 ಎಸ್ಎಕ್ಸ್(ಒ) ರೂ. 15,03,934

ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಗೊಳಿಸಿದ ಹ್ಯುಂಡೈ..

ಎಂಜಿನ್ ಸಾಮರ್ಥ್ಯ

ಈ ಹಿಂದಿನಂತೆಯೇ 1.4-ಲೀಟರ್ ಡೀಸೆಲ್, 1.6-ಲೀಟರ್ ಪೆಟ್ರೋಲ್ ಮತ್ತು 1.6-ಡೀಸೆಲ್ ಎಂಜಿನ್‌ಗಳನ್ನು ಹೊಂದಿದ್ದು, ಇದರಲ್ಲಿ 1.4-ಲೀಟರ್ ಪೆಟ್ರೋಲ್ ಎಂಜಿನ್‌ಗಳು 88.7-ಬಿಎಚ್‌ಪಿ, 1.6-ಲೀಟರ್ ಪೆಟ್ರೋಲ್ ಎಂಜಿನ್‌ಗಳು 121-ಬಿಎಚ್‌ಪಿ ಮತ್ತು 1.6-ಲೀಟರ್ 126-ಬಿಎಚ್‌ಪಿ ಉತ್ಪಾದನಾ ಗುಣ ಪಡೆದಿವೆ.

ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಗೊಳಿಸಿದ ಹ್ಯುಂಡೈ..

ಇದರಲ್ಲಿ 1.4-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದಿದ್ದು, ಇನ್ನುಳಿದ 1.6-ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಮಾದರಿಗಳಲ್ಲಿ 6-ಸ್ಪೀಡ್ ಆಟೋ ಮ್ಯಾಟಿಕ್ ಒದಗಿಸಲಾಗಿದೆ.

ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಗೊಳಿಸಿದ ಹ್ಯುಂಡೈ..

ಹೊಸ ಕಾರುಗಳ ಪರ್ಫಾಮೆನ್ಸ್ ಹೆಚ್ಚಿಸಲು ಕ್ಲಾಸ್ ಲೀಡಿಂಗ್ ಎನ್‌ವಿಹೆಚ್ ತಂತ್ರಜ್ಞಾನ ಬಳಕೆ ಮಾಡಿದ್ದು, ಇವು ಆರಾಮದಾಯಕ ಕಾರು ಚಾಲನೆಗೆ ಸಹಕಾರಿಯಾಗಿದೆ. ಆದ್ರೆ ಟಾಪ್ ಎಂಡ್ ಮಾದರಿಯಾದ ಎಸ್ಎಕ್ಸ್(ಒ) ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಬದಲಾಗಿ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವುದು ಗ್ರಾಹಕರ ಆಯ್ಕೆಗೆ ಕೊಂಚ ಹಿನ್ನಡೆಯಾಗಬಹುದು.

ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಗೊಳಿಸಿದ ಹ್ಯುಂಡೈ..

ಒಂದು ವೇಳೆ ಟಾಪ್ ಎಂಡ್ ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಆವೃತ್ತಿಯನ್ನು ಆಯ್ಕೆ ಮಾಡುವುದಾದ್ರೆ ಅದಕ್ಕೂ ಒಂದು ಅವಕಾಶವಿದ್ದು, ಇದಕ್ಕಾಗಿ ಎಲೆಕ್ಟ್ರಾನಿಕ್ ಸನ್‌ರೂಫ್ ಮತ್ತು ವೈರ್‌ಲೇಸ್ ಚಾರ್ಜಿಂಗ್ ಸೌಲಭ್ಯಗಳು ಕಳೆದುಕೊಳ್ಳಬೇಕಾಗುತ್ತೆ. ಇಲ್ಲವೇ ಈ ಸೌಲಭ್ಯಗಳು ಬೇಕೆ ಬೇಕು ಎಂದಲ್ಲಿ ಮ್ಯಾನುವಲ್ ಆವೃತ್ತಿಯನ್ನು ಆಯ್ಕೆ ಮಾಡುವುದು ಅನಿವಾರ್ಯ.

ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಗೊಳಿಸಿದ ಹ್ಯುಂಡೈ..

ಇನ್ನು ಕಾರಿನ ಡಿಸೈನ್ ಕುರಿತು ಹೇಳುವುದಾದರೇ, ಹೊಸ ಕಾರುಗಳಲ್ಲಿ ವಿನ್ಯಾಸ ಮಾಡಲಾಗಿರುವ ಕಾಸ್ ಕ್ಲ್ಯಾಡಿಂಗ್ ಫ್ರಂಟ್ ಗ್ರಿಲ್, ನ್ಯೂ ಫ್ರಂಟ್ ಬಂಪರ್, ಹೊಸ ವಿನ್ಯಾಸ ಫಾಗ್ ಲ್ಯಾಂಪ್, ಸಿಲ್ವರ್ ಸ್ಕೀಡ್ ಪ್ಲೇಟ್, ಡ್ಯುಯಲ್ ಟೋನ್ ಇಂಟಿರಿಯರ್ ಸೌಲಭ್ಯ ಪಡೆದಿದೆ.

ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಗೊಳಿಸಿದ ಹ್ಯುಂಡೈ..

ಹೊಸ ಕಾರುಗಳಲ್ಲಿನ ರಿಯಲ್ ಬಂಪರ್ ಕೂಡಾ ಆಕರ್ಷಣೆಯಾಗಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ 7-ಇಂಚಿನ್ ಇನ್ಪೋಟೈನ್‌ಮೆಂಟ್, ಬೆಸ್ ವೆರಿಯೆಂಟ್‌ಗಳಿಂದಲೇ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೈಡ್ ಸೀಟುಗಳು, ಆರ್ಮ್ ರೆಸ್ಟ್ ವಿನ್ಯಾಸವು ಗಮನ ಸೆಳೆಯುತ್ತೆ.

ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಗೊಳಿಸಿದ ಹ್ಯುಂಡೈ..

ಖರೀದಿಗೆ ಲಭ್ಯವಿರುವ ಬಣ್ಣಗಳು

ಒಟ್ಟು 7 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುವ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳನ್ನು ವೈಟ್, ಆರೇಂಜ್, ಬ್ಲ್ಯಾಕ್, ಸಿಲ್ವರ್ ಬ್ಲ್ಯೂ, ರೆಡ್, ವೈಟ್ ಆ್ಯಂಡ್ ಬ್ಲ್ಯಾಕ್(ಡ್ಯುಯಲ್ ಟೋನ್) ಮತ್ತು ಆರೇಂಜ್ ಆ್ಯಂಡ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿ ಮಾಡಬಹುದು.

ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಗೊಳಿಸಿದ ಹ್ಯುಂಡೈ..

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕ್ರೇಟಾ ಹೊಸ ಕಾರುಗಳು ಎಂಜಿನ್ ವಿಭಾಗದಲ್ಲಿ ಯಾವುದೇ ಪ್ರಮುಖ ಬದಲಾವಣೆ ಪಡೆಯದಿದ್ದರೂ ಕಾರಿನ ವಿನ್ಯಾಸದಲ್ಲಿ ಭಾರೀ ಬದಲಾವಣೆ ಹೊಂದಿದ್ದು, ಪ್ರಮುಖವಾಗಿ ಹೊಸ ಕಾರುಗಳಲ್ಲಿ ಒದಗಿಸಲಾಗಿರುವ ಪ್ರಿಮಿಯಂ ಸೌಲಭ್ಯಗಳ ಜೊತೆ ಎಲೆಕ್ಟ್ರಿಕ್ ಸನ್‌ರೂಫ್ ವ್ಯವಸ್ಥೆಯು ಪ್ರಮುಖ ಎಸ್‌ಯುವಿ ಮಾದರಿಗಳಾದ ಮಾರುತಿ ಎಸ್ ಕ್ರಾಸ್, ರೆನಾಲ್ಟ್ ಕ್ಯಾಪ್ಚರ್ ಮತ್ತು ಹೋಂಡಾ ಬಿಆರ್-ವಿ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ.

Most Read Articles

Kannada
Read more on hyundai suv
English summary
Hyundai Creta 2018 Launched In India; Prices Start At Rs 9.43 Lakh.
Story first published: Monday, May 21, 2018, 18:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X