ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಪ್ಟ್ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ..

Written By: Rahul TS

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹಿಂದ್ರಾ ತನ್ನ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರನ್ನು ಬಿಡಗಡೆಗೊಳಿಸಲು ಸಜ್ಜಾಗಿದ್ದು, ಇದೀಗ ಹೊಸ ಕಾರಿನ ತಾಂತ್ರಿಕ ಹಾಗು ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ.

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಪ್ಟ್ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ..

ಈ ಹಿಂದೆಯೇ ನಾವು ನಿಮಗೆ ಹೊಸದಾಗಿ ಬಿಡುಗಡೆಗೊಳ್ಳಲಿರುವ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಪ್ಟ್ ಕಾರಿನ ಒಳಭಾಗದ ಹಾಗು ಹೊರಭಾಗದ ವಿನ್ಯಾಸದ ಬಗ್ಗೆ ಮಾಹಿತಿ ನೀಡಿದ್ದೆವು. ಆದರೇ ಇದೀಗ ಈ ಕಾರಿನ ವೈಶಿಷ್ಟ್ಯತೆಗಳು, ಲಭ್ಯವಿರುವ ಬಣ್ಣಗಳು ಹಾಗೂ ಬೆಲೆಯ ಕುರಿತಾದ ಮಾಹಿತಿ ನೀಡಲಿದ್ದೇವೆ.

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಪ್ಟ್ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ..

2018ರ ಮಹಿಂದ್ರಾ ಎಕ್ಸ್‌ಯುವಿ500 ಕಾರು 2.2 ಲೀಟರ್ ಎಂ ಹ್ವಾಕ್ ಡೀಸೆಲ್ ಎಂಜಿನ್ ಸಹಾಯದಿಂದ 155 ಬಿಹೆಚ್‍ಪಿ ಹಾಗು 360ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಮಾದರಿಗಿಂತ 15ಬಿಹೆಚ್‍ಪಿ ಹಾಗೂ 30ಎನ್ಎಂ ಟಾಕ್ ಅನ್ನು ಹೆಚ್ಚು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಪ್ಟ್ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ..

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರು ಡಬ್ಲ್ಯು 5, ಡಬ್ಲ್ಯು 7, ಡಬ್ಲ್ಯು9, ಡಬ್ಲ್ಯು11 ಮತ್ತು ಟಾಪ್ ಎಂಡ್ ಡಬ್ಲ್ಯು11 ಎಂಬ ಐದು ವೇರಿಯಂಟ್‍‍ಗಳಲ್ಲಿ ಲಭ್ಯವಿರಲಿದ್ದು, ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಹೊಂದಿರಲಿದೆ.

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಪ್ಟ್ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ..

ಹೊಸದಾಗಿ ಬಿಡುಗಡೆಗೊಳ್ಳುವ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರು ವೈಟ್, ಸಿಲ್ವರ್, ಬ್ರೌನ್, ಪರ್ಪಲ್, ಬ್ಲಾಕ್ ಹಾಗು ಕಾಪರ್ ಬಣ್ಣಗಳಲ್ಲಿ ಲಭ್ಯವಿರಲಿದ್ದು, ಕಾರಿನ ಡಬ್ಲ್ಯು5 ಮಾದರಿಯು ಒಳಭಾಗದಲ್ಲಿ ಕಪ್ಪು ಹಾಗು ಗ್ರೇ ಬಣ್ಣಗಳಿಂದ ಸಜ್ಜುಗೊಂಡಿದ್ದು, ಅಡ್ಜೆಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ರಿಮೋಟ್ ಟೈಲ್‍‍ಗೇಟ್ ಹಾಗು ಫಾಲೊ ಮೀ ಹೋಂ ಹೆಡ್‍‍ಲ್ಯಾಂಪ್‍ಗಳನ್ನು ಪಡೆದಿವೆ.

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಪ್ಟ್ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ..

ಇನ್ನು ಡಬ್ಲ್ಯು7 ಮಾದರಿಯು ಒಳಭಾಗವು ಕಪ್ಪು ಬಣ್ಣದಿಂದ ಸಜ್ಜುಗೊಂಡಿದ್ದು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಡೈನಾಮಿಕ್ ಅಸ್ಸಿಸ್ಟ್, ಎಂಟು ಮಾದರಿಯಲ್ಲಿ ಅಡ್ಜೆಸ್ಟ್ ಮಾಡಬಹುದಾದ ಡ್ರೈವರ್ ಸೀಟುಗಳು ಹಾಗೂ ಮುಂಭಾಗದಲ್ಲಿ ಕ್ರೋಮ್ ಗ್ರಿಲ್ ಅನ್ನು ಪಡೆದುಕೊಂಡಿರುತ್ತವೆ.

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಪ್ಟ್ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ..

ಡಬ್ಲ್ಯು11 ಕಾರುಗಳಲ್ಲಿ ಲೆದರ್ ಡ್ಯಾಶ್‍‍ಬೋರ್ಡ್, ಡೊರ್ ಟ್ರಿಮ್ಸ್, ಕ್ರೋಮ್ ಟೈಲ್‍‍ಗೇಟ್, ಹಾಗೂ 18 ಇಂಚಿನ ಡೈಮೆಂಡ್ ಕಟ್ ಅಲಾಯ್ ಚಕ್ರಗಳನ್ನು ಪಡೆದಿದ್ದು, ಕಾರಿನ ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ಕೂಡಾ ನವೀಕರಣವನ್ನು ಪಡೆದಿವೆ.

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಪ್ಟ್ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ..

ಹೊಸ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಪ್ಟ್ ಕಾರು ಹೊಸದಾಗಿ ಫ್ರಂಟ್ ಗ್ರಿಲ್, ಪ್ರೊಜೆಕ್ಟರ್ ಲೈಟ್ಸ್ ಹೊಂದಿರುವಂತಹ ಮರು ವಿನ್ಯಾಸಗೊಳಿಸಿದ ಹೆಡ್‍ಲ್ಯಾಂಪ್ಸ್, ತ್ರಿಕೋನಾಕೃತಿಯ ಟೈಲ್ ಲೈಟ್ ಕ್ಲಸ್ಟರ್ ಹಾಗು ಪರಿಷ್ಕರಿಸಿದ ರಿಯರ್ ಬಂಪರ್ ಅನ್ನು ಅಳವಡಿಸಲಾಗಿದೆ.

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಪ್ಟ್ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ..

ಇವೆಲ್ಲವನ್ನು ಹೊರತುಪಡಿಸಿ ಬೇರೆಲ್ಲಾ ವಿನ್ಯಾಸದಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರಿನ ವಿನ್ಯಾಸವನ್ನೇ ಹೋಲಲಿದ್ದು, ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.13 ಲಕ್ಷದಿಂದ ರೂ.18 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ. ಇದಲ್ಲದೇ ಹೊಸ ಕಾರುಗಳು ಮಾರುಕಟ್ಟೆಯಲ್ಲಿರುವ ರೆನಾಲ್ಟ್ ಕ್ಯಾಪ್ಚರ್, ಹ್ಯುಂಡೈ ಕ್ರೆಟಾ ಹಾಗೂ ಜೀಪ್ ಕಾಂಪಸ್ ಕಾರುಗಳಿಗೆ ತ್ರೀವ ಪೈಪೋಟಿ ನೀಡಲಿದೆ.

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಪ್ಟ್ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಬೇಸಿಗೆಯಲ್ಲಿ ನಿಮ್ಮ ವಾಹನಗಳ ರಕ್ಷಣೆ ಹೇಗೆ? ಇಲ್ಲಿದೆ ಸರಳ ಉಪಾಯ...

2. ಬಿಡುಗಡೆಗೆ ಸಜ್ಜಾದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಹೀಗಿದೆ ನೋಡಿ..

3. ಮೋದಿ ಹೆಸರಿನಲ್ಲಿ ಭಾರೀ ಜನಪ್ರಿಯತೆ ಪಡೆಯುತ್ತಿರುವ ಈ ಬೈಕಿನ ಅಸಲಿಯತ್ತು ಏನು?

4. ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

5. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

Read more on mahindra
English summary
2018 Mahindra XUV500 Specifications Revealed; Variants, Features, Expected Price & More.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark